AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಧಗಧಗನೆ ಹೊತ್ತಿ ಉರಿದ ಬುಲೆಟ್ ಬೈಕ್, ಬೆಂಕಿ ನಂದಿಸುವಾಗ ಪೆಟ್ರೋಲ್ ಟ್ಯಾಂಕ್ ಸ್ಫೋಟ, 10 ಮಂದಿಗೆ ಗಾಯ 

ಹೈದರಾಬಾದ್‌ನ ಮೊಘಲ್‌ಪುರದ ಬಿಬಿ ಬಜಾರ್‌ ರಸ್ತೆಯಲ್ಲಿ ಭೀಕರ ಬೆಂಕಿ ಅವಘಡವೊಂದು ಸಂಭವಿಸಿದ್ದು, ಬೆಂಕಿ ನಂದಿಸಲು ಹೋದಾಗ ಇದ್ದಕ್ಕಿದ್ದಂತೆ ಹೊತ್ತಿ ಉರಿಯುತ್ತಿದ್ದ ಬೈಕ್‌ನ ಪೆಟ್ರೋಲ್‌ ಟ್ಯಾಂಕ್‌ ಸ್ಫೋಟಗೊಂಡು ಸ್ಥಳೀಯರು ಬೆಂಕಿಯ ಕೆನ್ನಾಲಿಗೆ ಸಿಲುಕಿದ್ದಾರೆ. ಈ ಭೀಕರ ಅವಘಡದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Viral Video: ಧಗಧಗನೆ ಹೊತ್ತಿ ಉರಿದ ಬುಲೆಟ್ ಬೈಕ್, ಬೆಂಕಿ ನಂದಿಸುವಾಗ ಪೆಟ್ರೋಲ್ ಟ್ಯಾಂಕ್ ಸ್ಫೋಟ, 10 ಮಂದಿಗೆ ಗಾಯ 
ಮಾಲಾಶ್ರೀ ಅಂಚನ್​
| Edited By: |

Updated on: May 17, 2024 | 4:14 PM

Share

ಬೈಕ್ ಅಥವಾ ಯಾವುದೇ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಾಗ, ಬೆಂಕಿ ನಂದಿಸುವ ಭರದಲ್ಲಿ ಬೈಕ್ ಹತ್ತಿರಕ್ಕೆ ಹೋಗಬಾರದು. ಕೆಲವೊಮ್ಮೆ ಬೆಂಕಿಯ ಶಾಖಕ್ಕೆ ವಾಹನದ ಪೆಟ್ರೋಲ್ ಟ್ಯಾಂಕ್ ಸ್ಪೋಟಗೊಂಡು ಬೆಂಕಿ ನಂದಿಸಲು ಹೋದವರೇ ಬೆಂಕಿಗಾಹುತಿಯಾಗುವಂತಹ ಸಾಧ್ಯತೆ ಇರುತ್ತದೆ. ಅಂತಹದ್ದೇ ಭೀಕರ  ಘಟನೆಯೊಂದು ಇತ್ತೀಚಿಗೆ ನಡೆದಿದ್ದು, ಮಟ ಮಟ ಮಧ್ಯಾಹ್ನ ಬಿಸಿಲ ಶಾಖಕ್ಕೆ ಬುಲೆಟ್ ಬೈಕ್  ನಡು ರಸ್ತೆಯಲ್ಲಿಯೇ ಹೊತ್ತಿ ಉರಿಯುತ್ತದೆ. ಬೆಂಕಿ ನಂದಿಸಲು ಹೋದ ಸಂದರ್ಭದಲ್ಲಿ  ವಾಹನದ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ ಸ್ಥಳೀಯರು ಬೆಂಕಿಯ ಕೆನ್ನಾಲಿಗೆ ಸಿಲುಕಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಭಯಾನಕ ದೃಶ್ಯವನ್ನು ಕಂಡು ನೋಡುಗರು ಬೆಚ್ಚಿ ಬಿದ್ದಿದ್ದಾರೆ.

ಈ ಘಟನೆ ಹೈದರಾಬಾದ್‌ನ ಮೊಘಲ್‌ಪುರದ ಬಿಬಿ ಬಜಾರ್‌ ರಸ್ತೆಯಲ್ಲಿ   ನಡೆದಿದ್ದು, ಮಟ ಮಟ ಮಧ್ಯಾಹ್ನದ ವೇಳೆ ರಾಯಲ್‌  ಎನ್‌ಫೀಲ್ಡ್‌ ಬೈಕ್‌ ಇದ್ದಕ್ಕಿದ್ದಂತೆ ಹೊತ್ತಿ ಉರಿದಿದೆ. ತಕ್ಷಣ ಸ್ಥಳೀಯರು ಬೆಂಕಿಯನ್ನು ನಂದಿಸಲು ಹೋಗಿದ್ದು, ಶಾಖ ಹೆಚ್ಚಾದ ಕಾರಣ ವಾಹನದ ಪೆಟ್ರೋಲ್‌ ಟ್ಯಾಂಕ್‌ ಸ್ಫೋಟಗೊಂಡು ಅಲ್ಲೇ ಬೈಕ್‌ ಹತ್ತಿರ ನಿಂತಿದ್ದ ಸ್ಥಳೀಯರು ಹಾಗೂ ಅಕ್ಕ ಪಕ್ಕದಲ್ಲಿದ್ದ ವಾಹನಗಳಿಗೂ ಬೆಂಕಿ ತಗುಲಿದೆ. ಈ ಭೀಕರ ಬೆಂಕಿ ಅವಘಡದಿಂದ ಪೊಲೀಸ್ ಕಾನ್‌ಸ್ಟೇಬಲ್‌ ಸೇರಿದಂತೆ ಇನ್ನೂ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಅಲ್ಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಗೆ ಸಂಬಂಧಪಟ್ಟ ವಿಡಿಯೋವನ್ನು @Janasnehi Yogesh ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಬೈಕ್‌ಗೆ ಬೆಂಕಿ ಹತ್ತಿಕೊಂಡಾಗ ಯಾವುದೇ ಕಾರಣಕ್ಕೂ ಹತ್ತಿರ ಹೋಗಬೇಡಿ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವಿಡಿಯೋದಲ್ಲಿ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಹೊತ್ತಿ ಉರಿಯುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಬೈಕ್‌ಗೆ ಬೆಂಕಿ ಹತ್ತಿಕೊಂಡಾಗ ಸ್ಥಳೀಯರು ನೀರು ಹಾಗೂ ಒದ್ದೆ ಗೋಣಿ ಚೀಲ ಬಳಸಿ ಬೆಂಕಿ ಆರಿಸಲು ಪ್ರಯತ್ನಿಸುತ್ತಾರೆ. ಆ ಸಂದರ್ಭದಲ್ಲಿ ಬೆಂಕಿಯ ಶಾಖಕ್ಕೆ ಬೈಕ್‌ ಪೆಟ್ರೋಲ್‌ ಟ್ಯಾಂಕ್‌ ಸ್ಪೋಟಗೊಂಡು, ಸ್ಥಳೀಯರು ಹಾಗೂ ಅಲ್ಲಿ ನಿಲ್ಲಿಸಲಾದ ವಾಹನಗಳ ಮೇಲೂ ಬೆಂಕಿ ತಗುತಿದೆ.

ಇದನ್ನೂ ಓದಿ: ಜಾಬ್ ಧರಿಸದೆ ಟಿಕ್‌ ಟಾಕ್‌ನಲ್ಲಿ ಲೈವ್‌ ಬಂದ ಮುಸ್ಲಿಂ ಯುವತಿ, ಹಿಗ್ಗಾಮುಗ್ಗಾ ಥಳಿಸಿದ ಪೋಷಕರು

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಭೀಕರ ಬೆಂಕಿ ಅವಘಡದ ದೃಶ್ಯವನ್ನು ಕಂಡು  ನೋಡುಗರು ಬೆಚ್ಚಿ ಬಿದ್ದಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!