World’s Deepest Metro Stations: ಇದು ವಿಶ್ವದ ಅತ್ಯಂತ ಆಳವಾದ ಮೆಟ್ರೋ ನಿಲ್ದಾಣ; ವಿಡಿಯೋ ಇಲ್ಲಿದೆ ನೋಡಿ
ಆಡಿಟಿ ಸೆಂಟ್ರಲ್ ಎಂಬ ವೆಬ್‌ಸೈಟ್‌ನ ವರದಿಯ ಪ್ರಕಾರ, ಈ ಮೆಟ್ರೋ ನಿಲ್ದಾಣವು 116 ಮೀಟರ್ ಆಳವಾಗಿದೆ, ಅಂದರೆ ಈ ಆಳವು 35-40 ಅಂತಸ್ತಿನ ಕಟ್ಟಡಕ್ಕೆ ಸಮಾನವಾಗಿದೆ. ಈ ಮೆಟ್ರೋ ನಿಲ್ದಾಣವನ್ನು ಗುಡ್ಡಗಾಡು ಪ್ರದೇಶದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.
ಚೀನಾದಲ್ಲಿರುವ ವಿಶ್ವದ ಅತ್ಯಂತ ಆಳವಾದ ಮೆಟ್ರೋ ನಿಲ್ದಾಣ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದನ್ನು ‘ಹಾಂಗ್ಯಾನ್‌ಕುನ್ ಮೆಟ್ರೋ ಸ್ಟೇಷನ್’ ಎಂದು ಕರೆಯಲಾಗುತ್ತದೆ. ಈ ಮೆಟ್ರೋ ನಿಲ್ದಾಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳು ವಿಡಿಯೋ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಒಟ್ಟು ಏಳು ಎಸ್ಕಲೇಟರ್‌ಗಳಿಂದ ಇಳಿದ ನಂತರ, ಈ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರ ಕಾಣಬಹುದು. ಈ ವಿಡಿಯೋ ನೋಡಿದಾಕ್ಷಣ ಒಂದು ಕ್ಷಣ ನಿಮಗೆ ಕನ್ಫೂಷನ್ ಆಗುವುದಂತೂ ಖಂಡಿತಾ.
ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ Instagram ನಲ್ಲಿ jen_l104 ಹೆಸರಿನ ID ಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಹಂಚಿಕೊಂಡ ಕೇವಲ 4 ದಿನಗಳಲ್ಲಿ 1.7 ಮಿಲಿಯನ್ ಅಂದರೆ 17 ಲಕ್ಷ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಆದರೆ 51 ಸಾವಿರಕ್ಕೂ ಹೆಚ್ಚು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಧಗಧಗನೆ ಹೊತ್ತಿ ಉರಿದ ಬುಲೆಟ್ ಬೈಕ್, ಬೆಂಕಿ ನಂದಿಸುವಾಗ ಪೆಟ್ರೋಲ್ ಟ್ಯಾಂಕ್ ಸ್ಫೋಟ, 10 ಮಂದಿಗೆ ಗಾಯ
ಆಡಿಟಿ ಸೆಂಟ್ರಲ್ ಎಂಬ ವೆಬ್‌ಸೈಟ್‌ನ ವರದಿಯ ಪ್ರಕಾರ, ಈ ಮೆಟ್ರೋ ನಿಲ್ದಾಣವು 116 ಮೀಟರ್ ಆಳವಾಗಿದೆ, ಅಂದರೆ ಈ ಆಳವು 35-40 ಅಂತಸ್ತಿನ ಕಟ್ಟಡಕ್ಕೆ ಸಮಾನವಾಗಿದೆ. ಇದರ ನಿರ್ಮಾಣವು 2017 ರಲ್ಲಿ ಪ್ರಾರಂಭವಾಯಿತು ಮತ್ತು ಇದು 2022 ರಲ್ಲಿ ಸಿದ್ಧವಾಯಿತು. ಈ ಮೆಟ್ರೋ ನಿಲ್ದಾಣವನ್ನು ಗುಡ್ಡಗಾಡು ಪ್ರದೇಶದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ, ಆದ್ದರಿಂದ ಇದನ್ನು ನಿರ್ಮಿಸಲು ತುಂಬಾ ಆಳವಾಗಿ ಅಗೆಯಬೇಕಾಯಿತು ಎಂದು ಹೇಳಲಾಗುತ್ತಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:34 pm, Sat, 18 May 24