ಅಮೆಜಾನ್ ಜಲಾನಯನ ಪ್ರದೇಶದ ಉಷ್ಣವಲಯದ ಮಳೆಕಾಡುಗಳಲ್ಲಿಅನಕೊಂಡ(Anaconda)ಗಳು ಸಾಮಾನ್ಯವಾಗಿ ಮುಖ್ಯವಾಗಿ ಜೌಗು ಪ್ರದೇಶಗಳು, ಜವುಗು ಮತ್ತು ನಿಧಾನವಾಗಿ ಚಲಿಸುವ ತೊರೆಗಳಲ್ಲಿ ಹೆಚ್ಚಾಗಿ ಕಾಣಸಿಗುವ ಅನಕೊಂಡಗಳು, ನೀರಿನಲ್ಲಿ ಅಡಗಿಕುಳಿತಿರುತ್ತದೆ. ಇವುಗಳು ಕಾಡು ಹಂದಿಗಳು, ಜಿಂಕೆಗಳು, ಪಕ್ಷಿಗಳು, ಆಮೆಗಳು ಮತ್ತು ಜಾಗ್ವಾರ್‌ಗಳನ್ನು ಬೇಟೆಯಾಡುತ್ತವೆ. ತಮ್ಮ ಸ್ನಾಯುವಿನ ದೇಹಗಳನ್ನು ಬೇಟೆಯ ಸುತ್ತಲೂ ಸುತ್ತಿಕೊಂಡು ಉಸಿರುಗಟ್ಟಿಸಿ ನಂತರ ನುಂಗುತ್ತವೆ. ಇಂತಹ ಅನಕೊಂಡದ ಬಾಯಿಯಿಂದ ವ್ಯಕ್ತಿಯೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿರುವ ವಿಡಿಯೋ ವೈರಲ್ (Video Viral) ಆಗುತ್ತಿದೆ.
ಬ್ರೆಜಿಲಿಯನ್ ಮೀನುಗಾರಿಕಾ ಮಾರ್ಗದರ್ಶಿ ಅನಕೊಂಡ ಹಾವಿನಿಂದ ದಾಳಿಗೊಳಗಾಗಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ. 38 ವರ್ಷದ ಜೊವೊ ಸೆವೆರಿನೊ ಎಂಬವರು ಸೆರೆಹಿಡಿದಿರುವ ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ. ವೈರಲ್ ವಿಡಿಯೋ, ಅನಕೊಂಡವು ಕ್ಷಣಾರ್ಧದಲ್ಲೇ ನೀರಿನಿಂದ ಮೇಲಕ್ಕೆ ಬಂದು ಜೊವೊ ಅವರನ್ನು ಕಚ್ಚುವುದನ್ನು ತೋರಿಸುತ್ತದೆ.
ಜೂನ್ 30 ರಂದು ಮಧ್ಯ ಬ್ರೆಜಿಲಿಯನ್ ರಾಜ್ಯವಾದ ಗೋಯಾಸ್‌ನಲ್ಲಿ ಅರಗುವಾಯಾ ನದಿಯ ಉದ್ದಕ್ಕೂ ದೋಣಿಯಲ್ಲಿ ಪ್ರವಾಸಿಗರ ಗುಂಪನ್ನು ಕೊಂಡೊಯ್ಯುತ್ತಿದ್ದರು. ಈ ವೇಳೆ ಅನಕೊಂಡ ನೀರಿನಲ್ಲಿ ಪತ್ತೆಯಾಗಿದೆ. ನೀರಿನ ಕೆಳಗೆ ಎರಡು ಮರದ ದಿಮ್ಮಿಗಳ ನಡುವೆ ಸುರುಳಿಯಾಗಿರುವ ಅನಕೊಂಡವನ್ನು ವಿಡಿಯೋ ಕ್ಲಿಪ್ ತೋರಿಸುತ್ತದೆ.
ವೈರಲ್ ವಿಡಿಯೋದಲ್ಲಿ ಇರುವಂತೆ, ಅನಕೊಂಡದ ದೃಶ್ಯಾವಳಿಯನ್ನು ಮೊಬೈಲ್ನಲ್ಲಿ ಸೆರೆಹಿಡಿಯಲು ಮುಂದಾಗಿ ಅನಕೊಂಡಾದ ಮೇಲೆ ಕ್ಯಾಮರಾವನ್ನು ಕೇಂದ್ರೀಕರಿಸಿದ್ದಾರೆ. ಈ ವೇಳೆ ಹಠಾತ್ ಆಗಿ ಮೇಲೆ ಬಂದ ಅನಕೊಂಡ ದಾಳಿ ನಡೆಸಿದೆ. ಈ ವೇಳೆ ಭಯಬೀತರಾಗಿರುವ ಸೆವೆರಿನೊ ಅವರು ನಗುತ್ತಿರುವುದನ್ನು ವಿಡಿಯೋದಲ್ಲಿ ಕೇಳಿಸಬಹುದು. ಅಲ್ಲದೆ, ”ನಾನು ಒಂದು ಸ್ಟಂಪ್ನಲ್ಲಿ ಹಾವನ್ನು ನೋಡಿದ್ದೇನೆ. ಅಲ್ಲಿ ಅನಕೊಂಡ ಇದೆ, ಅದನ್ನು ನಾನು ನಿಮಗೆ ತೋರಿಸಲು ಚಿತ್ರೀಕರಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಹಾವಿನ ದಾಳಿಯಿಂದ ಸೆವೆರಿನೊ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ: Viral Pic: 1 ತಿಂಗಳ ಮೇಕೆ ಮರಿಗೆ 56 ಸೆ.ಮೀ. ಉದ್ದದ ಕಿವಿಗಳು! ವೈರಲ್ ಆಗುತ್ತಿರುವ ಮೇಕೆಯ ಫೋಟೋ ಇಲ್ಲಿದೆ
ಇದನ್ನೂ ಓದಿ: Viral Video: ಕೇರಳದ ಲುಲು ಮಾಲ್ನಲ್ಲಿ ಖರೀದಿಗಾಗಿ ಮಧ್ಯರಾತ್ರಿಯಲ್ಲಿ ಹರಿದು ಬಂದ ಜನಸಾಗರ
Published On - 3:58 pm, Sun, 10 July 22