Viral Video: ಮೊಟ್ಟ ಮೊದಲ ಬಾರಿಗೆ ಚಾಕೋಲೇಟ್ ರುಚಿ ನೋಡಿದ ಮಗುವಿನ ರಿಯಾಕ್ಷನ್ ಹೇಗಿತ್ತು ಗೊತ್ತಾ?

ಚಿಕ್ಕ ಹುಡುಗಿ ತನ್ನ ಜೀವನದಲ್ಲಿ ಮೊದಲ ಬಾರಿಗೆ  ಚಾಕೊಲೇಟ್ ರುಚಿ ನೋಡಿದಾಗ ಆಕೆ ಹೇಗೆ ಪ್ರತಿಕ್ರಿಯಿಸುತ್ತಾಳೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದು.

Viral Video: ಮೊಟ್ಟ ಮೊದಲ ಬಾರಿಗೆ ಚಾಕೋಲೇಟ್ ರುಚಿ ನೋಡಿದ ಮಗುವಿನ ರಿಯಾಕ್ಷನ್ ಹೇಗಿತ್ತು ಗೊತ್ತಾ?
ಮಗುವಿನ ವಿಡಿಯೋ
Updated By: ಸುಷ್ಮಾ ಚಕ್ರೆ

Updated on: Mar 21, 2022 | 6:46 PM

ಮಕ್ಕಳು ಬೆಳೆಯುತ್ತಾ, ಬೆಳೆಯುತ್ತಾ ಅವರ ದಿನಚರಿಯೂ ಬದಲಾಗುತ್ತಾ ಹೋಗುತ್ತದೆ. ಮಕ್ಕಳು ಒಂದೊಂದಾಗಿ ದಿನವೂ ಹೊಸತನ್ನು ಕಲಿಯತೊಡಗುತ್ತಾರೆ. ಚಿಕ್ಕ ಮಕ್ಕಳು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಏನನ್ನಾದರೂ ಮಾಡುತ್ತಿರುವುದನ್ನು ತೋರಿಸುವ ಹಲವಾರು ವಿಡಿಯೋಗಳು (Viral Video) ಇಂಟರ್ನೆಟ್​ನಲ್ಲಿ ಕಾಣುತ್ತಲೇ ಇರುತ್ತದೆ. ಮಕ್ಕಳು ಹೊಸತೇನಾದರೂ ಕಲಿತಾಗ, ಹೊಸ ಅಭ್ಯಾಸಗಳನ್ನು ರೂಢಿಸಿಕೊಂಡಾಗ ಅವರಿಗೂ ಅದರ ಬಗ್ಗೆ ಬಹಳ ಹೆಮ್ಮೆ ಇರುತ್ತದೆ. ಅದನ್ನು ನೋಡುವ ಅಪ್ಪ-ಅಮ್ಮನಿಗೂ ಹೇಳತೀರದಷ್ಟು ಖುಷಿಯಾಗುತ್ತದೆ.

ಅಂತಹ ಒಂದು ವಿಡಿಯೋವನ್ನು ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಚಿಕ್ಕ ಹುಡುಗಿ ತನ್ನ ಜೀವನದಲ್ಲಿ ಮೊದಲ ಬಾರಿಗೆ  ಚಾಕೊಲೇಟ್ ತಿನ್ನಲು ಪ್ರಯತ್ನಿಸಿದಾಗ ಆಕೆ ಹೇಗೆ ಪ್ರತಿಕ್ರಿಯಿಸುತ್ತಾಳೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದು. ಜೀವನದಲ್ಲಿ ಮೊದಲ ಸಲ ಚಾಕೋಲೇಟ್ ತಿನ್ನುತ್ತಿರುವ ಬಾಲಕಿ ಅದನ್ನು ಚಪ್ಪರಿಸುತ್ತಿದ್ದಾಳೆ. ಆ ಪುಟ್ಟ ಹುಡುಗಿಗೆ ಲಿಲಿ ಎಂದು ಹೆಸರಿಡಲಾಗಿದೆ. ಆಕೆ ಈಗ ದೊಡ್ಡವಳಾಗಿದ್ದಾಳೆ. ಆದರೆ ಈ ವಿಡಿಯೋವನ್ನು ಅವಳು ಇನ್ನೂ ಚಿಕ್ಕವಳಿದ್ದಾಗ ರೆಕಾರ್ಡ್ ಮಾಡಲಾಗಿದೆ.

ಈ ವಿಡಿಯೋದಲ್ಲಿ ಆ ಬಾಲಕಿ ಏನೂ ಮಾತನಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾಳೆ. ಚಾಕೋಲೇಟನ್ನು ಚಪ್ಪರಿಸುತ್ತಾ ತಿನ್ನುತ್ತಿರುವ ಆಕೆ ಖುಷಿಯಿಂದ ಎಂಜಾಯ್ ಮಾಡುತ್ತಿದ್ದಾಳೆ. ಕೆಲವು ಮುದ್ದಾದ, ಬಬ್ಲಿಂಗ್ ಶಬ್ದಗಳಿಂದ ಅವಳು ಸ್ವಲ್ಪ ಚಾಕೊಲೇಟ್ ಅನ್ನು ಚಪ್ಪರಿಸುತ್ತಾ ತಿನ್ನುತ್ತಿದ್ದಾಳೆ. ಆಕೆ ತಿನ್ನುತ್ತಿರುವ ಚಾಕೋಲೇಟನ್ನು ಬೇರೆಯವರು ಕೇಳಿದಾಗ ಅದಕ್ಕೆ ಆಕೆ ಕೋಪಗೊಳ್ಳುತ್ತಾಳೆ. “ಲವ್ ಎಟ್ ಫಸ್ಟ್​ ಸೈಟ್” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ.

ಈ ವಿಡಿಯೋ ನೋಡಿದರೆ ನಿಮ್ಮ ಮುಖದಲ್ಲೂ ನಗು ಮೂಡುವುದು ಗ್ಯಾರಂಟಿ. ಈ ವಿಡಿಯೋವನ್ನು ಮಾರ್ಚ್ 10ರಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 6.5 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ಇದನ್ನೂ ಓದಿ: Viral Video: ಚಲಿಸುವ ರೈಲಿನಿಂದ ಬಿದ್ದ ಯುವಕ; ಹೀರೋ ರೀತಿ ಬಂದು ಜೀವ ಉಳಿಸಿದ ರೈಲ್ವೆ ಸಿಬ್ಬಂದಿ

Viral News: ಆ ಒಂದು ಫೋಟೋದಿಂದ ಅದೃಷ್ಟವೇ ಬದಲಾಯ್ತು; ಕೇರಳದ ಕೂಲಿ ಕಾರ್ಮಿಕ ಈಗ ಸೂಪರ್ ಮಾಡೆಲ್!