ಕಣ್ಣಾಮುಚ್ಚಾಲೆಯಾಟ ತಂದ ಕುತ್ತು; ಬಾಂಗ್ಲಾದ ಹುಡುಗನೊಬ್ಬ ಮಲೇಷಿಯಾದಲ್ಲಿ ಪತ್ತೆ

| Updated By: ಶ್ರೀದೇವಿ ಕಳಸದ

Updated on: Jan 30, 2023 | 10:54 AM

Hide and Seek : 15 ವರ್ಷದ ಬಾಂಗ್ಲಾದೇಶದ ಈ ಹುಡುಗ ಆರು ದಿನಗಳ ಕಾಲ ಕಂಟೇನರ್​ನಲ್ಲಿದ್ದ. 2,300 ಮೈಲಿಗಳಷ್ಟು ದೂರವನ್ನು ಹಡಗಿನ ಮೂಲಕ ಕ್ರಮಿಸಿ ಮಲೇಷಿಯಾ ತಲುಪಿದ. ಮುಂದೆ?

ಕಣ್ಣಾಮುಚ್ಚಾಲೆಯಾಟ ತಂದ ಕುತ್ತು; ಬಾಂಗ್ಲಾದ ಹುಡುಗನೊಬ್ಬ ಮಲೇಷಿಯಾದಲ್ಲಿ ಪತ್ತೆ
ಕಂಟೇನರ್​ನೊಳಗಿದ್ದ ಹುಡುಗ
Follow us on

Viral Video : ಮಕ್ಕಳಿಗೆ ಬಹಳ ಇಷ್ಟವಾದ ಆಟ ಕಣ್ಣಾಮುಚ್ಚಾಲೆ. ದೇಹಕ್ಕಿಂತ ಬುದ್ಧಿಗೆ, ತಮಾಷೆಗೆ ಇಲ್ಲಿ ಹೆಚ್ಚು ಅವಕಾಶವಿದೆ. ಆಡುತ್ತಾ ಆಡುತ್ತಾ ಜಗತ್ತನ್ನೇ ಮರೆಯುವಂಥ ಸೆಳೆತ ಇದಕ್ಕಿದೆ. ಆದರೆ ಮಕ್ಕಳು ಈ ಆಟವನ್ನು ಜಾಗರೂಕರಾಗಿ ಆಡಬೇಕು, ಪೋಷಕರೂ ಈ ಬಗ್ಗೆ ಸದಾ ಗಮನವಿಟ್ಟಿರಬೇಕು ಎನ್ನುವ ಎಚ್ಚರಿಕೆ ಗಂಟೆಯನ್ನು ಇದೀಗ ವೈರಲ್ ಆಗಿರುವ ಈ ವಿಡಿಯೋ ಸೂಚಿಸುತ್ತಿದೆ.

ಬಾಂಗ್ಲಾದೇಶದ 15 ವರ್ಷದ ಫಹೀಮ್​ ಎಂಬಾತ ಜನವರಿ 11ರಂದು ಚಿತ್ತಗಾಂಗ್​ನಲ್ಲಿ ತನ್ನ ಗೆಳೆಯರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತ ಬಚ್ಚಿಟ್ಟುಕೊಳ್ಳಲು ಜಾಗ ಹುಡುಕುತ್ತಿದ್ದ. ಅಲ್ಲಿ ಕಂಡ ಶಿಫ್ಟಿಂಗ್​ ಕಂಟೇನರ್​ನೊಳಗೆ ಹೋಗಿ ಒಳಗಡೆಯಿಂದ ಬೀಗ ಹಾಕಿಕೊಂಡು ಅವಿತಿಟ್ಟುಕೊಂಡ. ನಂತರ ಅವನಿಗೆ ನಿದ್ದೆ ಬಂದು ಮಲಗಿಬಿಟ್ಟ. ಆ ಕಂಟೇನರ್​ ಹಡಗಿನ ಮೂಲಕ ಮಲೇಷಿಯಾಗೆ ತೆರಳಿಬಿಟ್ಟಿತು.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : ಇಂಗ್ಲಿಷ್​ ಅಕ್ಷರಗಳಲ್ಲಿ ತಾಜ್​ಮಹಲ್​ ರಚಿಸಿದ ಯುವಕನ ವಿಡಿಯೋ ವೈರಲ್

ಅನ್ನ ನೀರಿಲ್ಲದೆ ಕಂಗೆಟ್ಟುಹೋದ ಆತ 6 ದಿನಗಳ ಒಟ್ಟು 2,300 ಮೈಲಿ ಚಲಿಸಿದ. ಮಲೇಷಿಯಾ ತಲುಪಿದಾಗ ಸದ್ಯ ಅವ ಜೀವಂತವಾಗಿದ್ದ. ಆದರೆ ಸುಸ್ತು ಜ್ವರದಿಂದ ಬಳಲುತ್ತಿದ್ದ ಅವನನ್ನು ರಕ್ಷಣಾ ಸಿಬ್ಬಂದಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿತು.

ಇದನ್ನೂ ಓದಿ : ಹಗ್ಗದಾಟದಲ್ಲಿ ಗಿನ್ನೀಸ್​ ವಿಶ್ವದಾಖಲೆ ಮಾಡಿದ ಬಲು ಎಂಬ ನಾಯಿ

‘ಆಟವಾಡುತ್ತ ಬಂದ ಈ ಹುಡುಗ ಕಂಟೇನರ್​ನಲ್ಲಿ ಬಂದಿಯಾಗಿದ್ದ. ವಾರಗಟ್ಟಲೆ ಉಪವಾಸವಿದ್ದಿದ್ದರಿಂದ ಜ್ವರದಿಂದ ಬಳಲುತ್ತಿದ್ದಾನೆ. ಹೆಚ್ಚಿನ ಚಿಕಿತ್ಸೆಗಾಗಿ ಅವನನ್ನು ಆಸ್ಪತ್ರೆಗೆ ಸೇರಿಸಲಾಗಿದೆ’ ಎಂದು ಮಲೇಷಿಯಾದ ಗೃಹ ಸಚಿವ ಸಚಿವ ಡಟುಕ್ ಸೆರಿ ಸೈಫುದ್ದೀನ್ ನಾಸೂಶನ್ ಇಸ್ಮಾಯಿಲ್ ಮಲೇಷಿಯಾದ ಮಾಧ್ಯಮ ಬೆರ್ನಾಮಾಗೆ ತಿಳಿಸಿದ್ದಾರೆ.

ಇದನ್ನೂ ಓದಿ : ಕಂಡೀರಾ ಬಿಳಿನವಿಲ ಸೊಬಗ; ವೈರಲ್ ಆಗಿರುವ ಈ ವಿಡಿಯೋ ನೋಡಿ

ಏತನ್ಮಧ್ಯೆ, ಪೊಲೀಸರು ಈ ಪ್ರಕರಣವನ್ನು ಮಾನವ ಕಳ್ಳಸಾಗಾಣಿಕೆ ಎಂದು ಅನುಮಾನಿಸಿದ್ದರು. ಆದರೆ ವಿಚಾರಣೆ ನಡೆಸಿದ ಮೇಲೆ ವಾಸ್ತವ ಬೇರೆಯಾಗಿತ್ತು. ಈ ಸಿನಿಮೀಯ ಪ್ರಕರಣ ಎಲ್ಲರಿಗೂ ಒಂದು ಪಾಠ.

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:44 am, Mon, 30 January 23