ಇನ್ನು ನೆಗೆದಾಟ ಬಂದ್​, ಎಲ್ಲಾ ಆನ್​ಲೈನ್ ಆರ್ಡರ್ ಮಾಡೋಣ; ಮಂಗಗಳ ಡಿಜಿಟಲ್​ ಸಾಕ್ಷರತೆ

| Updated By: ಶ್ರೀದೇವಿ ಕಳಸದ

Updated on: Jan 20, 2023 | 12:17 PM

Monkey : ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗಿದೆ ಎಂದು ಮೊಬೈಲ್​ನಲ್ಲಿ ಮುಳುಗಿದ್ದ ಮನುಷ್ಯರನ್ನು ಇನ್ನೂ ಬಯ್ಯುತ್ತಲೇ ಇರುತ್ತಾರೆ. ಆದರೆ ಈಗ ಈ ಮಂಗಗಳಿಗೆ ಏನೆಂದು ಹೇಳುವುದು?

ಇನ್ನು ನೆಗೆದಾಟ ಬಂದ್​, ಎಲ್ಲಾ ಆನ್​ಲೈನ್ ಆರ್ಡರ್ ಮಾಡೋಣ; ಮಂಗಗಳ ಡಿಜಿಟಲ್​ ಸಾಕ್ಷರತೆ
ಒಬ್ಬೊಬ್ಬರೇ ನೋಡ್ರೋ
Follow us on

Viral Video : ಓಹ್​ ಇದರಲ್ಲಿ ಹೀಗೆಲ್ಲ ಇದೆಯಾ? ಇನ್​ ಮೇಲೆ ನಾವು ಮರದಿಂದ ಮರಕ್ಕೆ, ಕಾಂಪೌಂಡಿಂದ ಕಾಂಪೌಂಡಿಗೆ ನೆಗೆಯೋದೆಲ್ಲ ಸಾಕು ಮಾಡೋಣಲ್ಲವಾ. ಅಮೇಝಾನ್​ನಲ್ಲಿ ಬಾಳೆಹಣ್ಣು ಸಿಗತ್ತಾ, ಪೇರಲೆ ಹಣ್ಣು? ಈ ಸ್ವಿಗ್ಗಿ ಅಂದ್ರೆ ಏನು? ಅದರಲ್ಲಿ ಏನೇನು ಸಿಗತ್ತೆ. ಮಿಂತ್ರಾ ಅಂತೊಂದಿದೆಯಲ್ಲ ಒಂದು ಶರ್ಟ್​ ತರಿಸಿ ನೋಡೋಣ್ವಾ ತುಂಬಾ ಚಳಿ ಇದೆ. ಈ ಕೋತಿಯಮ್ಮ, ಮಕ್ಕಳು, ಕಸಿನ್ಸ್​ ಎಲ್ಲ ಸೇರಿ ಮೊಬೈಲ್​ನಲ್ಲಿ ಆ್ಯಪ್​ಗಳನ್ನು ತಡಕಾಡ್ತಿರೋ ಗಂಭೀರತೆ ನೋಡಿದರೆ ಹೀಗೇ ತಾನೇ ಅನ್ನಿಸೋದು?

ಮಂಗನ ಕೈಗೆ ಮೊಬೈಲ್​ ಕೊಟ್ಟರೆ ಇನ್ನೇನಾಗಬೇಡ. ನಮ್ಮ ಪೂರ್ವಜರೇ ಅವರು. ಮರದ ಮೇಲೆ ಇರ್ತಾರೆ ಅಂತ ಪ್ರಾಣಿಗಳು. ಮನೆಯೊಳಗಿಟ್ಟುಕೊಂಡರೆ ಮನುಷ್ಯರೇ. ಈಗಾಗಲೇ ಆನ್​ಲೈನ್​​ನಲ್ಲಿ ಸಾಕಷ್ಟು ವಿಡಿಯೋಗಳನ್ನು ನೋಡಿರುತ್ತೀರಿ. ಸಾಕಿದ ಮಂಗಗಳು ತರಕಾರಿ ಕತ್ತರಿಸುವಲ್ಲಿ ಸಹಾಯ ಮಾಡುವುದು, ಶಾಲೆಗೆ ಹೋಗುವುದು, ಬಟ್ಟೆ ಒಗೆಯುವುದು, ಮಗುವನ್ನು ಆಡಿಸುವುದು, ಅಂಗಡಿಗೆ ಹೋಗುವುದು ಹೀಗೆ…

ಇದನ್ನೂ ಓದಿ : ಎದುರುಬದುರಾದ ಕಾರ್​ಗಳು ಇಕ್ಕಟ್ಟಾದ ಸೇತುವೆ ಮೇಲೆ ಚಲಿಸಿದ ವಿಡಿಯೋ ವೈರಲ್

ಕೇಂದ್ರ ಸಚಿವ ಕಿರಣ ರಿಜಿಜು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ.  ಡಿಜಿಟಲ್​ ಕ್ರಾಂತಿಯ ಅಭೂತಪೂರ್ವ ಯಶಸ್ಸನ್ನು ನೋಡಿ ಎಂಬ ನೋಟ್ ಬರೆದಿದ್ದಾರೆ. ಈ ವಿಡಿಯೋ ಅನ್ನು ಈತನಕ 1.23 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : ಹೆಂಡತಿಯನ್ನು ಕೊಲ್ಲಲು ಆಕೆಯ ಮನೆಗೆ ಟ್ರಕ್​ ನುಗ್ಗಿಸಿದ ಗಂಡ; ವೈರಲ್ ಆದ ವಿಡಿಯೋ

ಅಬ್ಬಾ! ಎಂಥ ಅದ್ಭುತವಾದ ವಿಡಿಯೋ ಇದು ಎಂದಿದ್ಧಾರೆ ಒಬ್ಬರು. ಇವರೆಲ್ಲರ ಕುತೂಹಲ ಮತ್ತು ಚಕಚಕನೆ ಸ್ಕ್ರಾಲ್​​ ಮಾಡುವುದನ್ನು ನೋಡಿ ಎಂದಿದ್ಧಾರೆ ಮತ್ತೊಬ್ಬರು. ಎಷ್ಟು ಆಸ್ಥೆ, ಸಮಾಧಾನದಿಂದ ಒಬ್ಬೊಬ್ಬರೇ ನೋಡುತ್ತಿದ್ದಾರೆ ನೋಡಿ ಎಂದಿದ್ದಾರೆ ಮಗದೊಬ್ಬರು.

ಕಲ್ಪಿಸಿಕೊಳ್ಳಿ ಮಂಗಗಳ ಮೊಬೈಲ್​ ಇಟ್ಟುಕೊಂಡು ಓಡಾಡಲು ಶುರು ಮಾಡಿದರೆ ಹೇಗೆ ಎಂದು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 12:15 pm, Fri, 20 January 23