ನವದೆಹಲಿ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಝೆವಾರ್ ಪ್ರದೇಶದಲ್ಲಿ ವಿಕಲಚೇತನ ವ್ಯಕ್ತಿಯನ್ನು ಗಂಡ-ಹೆಂಡತಿ ಅಮಾನುಷವಾಗಿ ಥಳಿಸಿದ ಘಟನೆಯ ವಿಡಿಯೋ (Viral Video) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲ್ಲೆಗೊಳಗಾದ ವ್ಯಕ್ತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಾರ್ಚ್ 27ರಂದು ಈ ಘಟನೆ ನಡೆದಿದ್ದು, ದುಷ್ಕರ್ಮಿಗಳಾದ ಜುಗೇಂದ್ರ ಮತ್ತು ಅವರ ಹೆಂಡತಿ ತಮ್ಮ ಸಂಬಂಧಿಯಾಗಿರುವ ವಿಕಲಚೇತನ ವ್ಯಕ್ತಿ ಗಜೇಂದ್ರನ ಮೇಲೆ ಹಲ್ಲೆ ನಡೆಸಿದ್ದಾರೆ.
ಆರೋಪಿ ಜುಗೇಂದ್ರ ತನ್ನ ಶಾಲೆಯನ್ನು ವಿಕಲಚೇತನನಾದ ಗಜೇಂದ್ರನಿಗೆ ನಡೆಸಲು ನೀಡಿದ್ದನೆಂದು ತಿಳಿದುಬಂದಿದೆ. ಆದರೆ, ಭಾರತವನ್ನು ಕೊರೊನಾ ಸಾಂಕ್ರಾಮಿಕ ರೋಗವು ಆವರಿಸಿದ್ದರಿಂದ ಆತನಿಗೆ ಶಾಲೆಯನ್ನು ಸರಿಯಾಗಿ ನಡೆಸಲು ಸಾಧ್ಯವಾಗಿರಲಿಲ್ಲ. ಆತನ ಶಾಲೆಗೆ ವಿದ್ಯಾರ್ಥಿಗಳು ಬರುತ್ತಿರಲಿಲ್ಲ. ಶಾಲೆ ಸರಿಯಾಗಿ ನಡೆಯುತ್ತಿರಲಿಲ್ಲವಾದ್ದರಿಂದ ಅವರಿಬ್ಬರ ನಡುವೆ ವಾಗ್ವಾದ ನಡೆದು ಈ ಘಟನೆ ನಡೆದಿದೆ. ಜುಗೇಂದ್ರ ಕೂಡ ಗಜೇಂದ್ರನಿಗೆ ಮನಬಂದಂತೆ ಥಳಿಸಿ, ರಸ್ತೆಯಲ್ಲೇ ಆತನ ಸ್ಕೂಟರ್ ಮುರಿದು ಹಾಕಿದ್ದಾನೆ.
नफरत के इस दौर में हम किस मुकाम पर आकर खड़े हो गए है, इस पर पुनः चिंतन की जरूरत है..
ये तस्वीरें इंसानियत को शर्मसार करने वाली है.. pic.twitter.com/jcP5NH1xHk
— Srinivas BV (@srinivasiyc) March 29, 2022
ಈ ವಿಡಿಯೋವನ್ನು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಬಿವಿ ಅವರು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು ಪೊಲೀಸರಿಗೆ ವಿಕಲಚೇತನ ದೂರು ನೀಡಿದ್ದಾರೆ ಎಂದು ಹೆಚ್ಚುವರಿ ಡಿಸಿಪಿ ವಿಶಾಲ್ ಪಾಂಡೆ ತಿಳಿಸಿದ್ದಾರೆ. ಆರೋಪಿ ಪತಿ-ಪತ್ನಿ ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದನ್ನೂ ಓದಿ: Viral Video: ಮೂರು ಚಿರತೆಗಳನ್ನು ತಬ್ಬಿ ಮಲಗಿದ ವ್ಯಕ್ತಿಯ ವಿಡಿಯೋ ವೈರಲ್; ತಬ್ಬಿಬ್ಬಾದ ನೆಟ್ಟಿಗರು
Shocking Video: ಬೆಂಜ್ ಕಾರ್ಖಾನೆಗೆ ಚಿರತೆ ಮರಿಯ ಸರ್ಪ್ರೈಸ್ ವಿಸಿಟ್!; 6 ಗಂಟೆ ಸತಾಯಿಸಿದ ಚಿರತೆಯ ವಿಡಿಯೋ ವೈರಲ್
Published On - 8:11 pm, Tue, 29 March 22