ಪ್ರೀತಿ ಎಲ್ಲ ಮಿತಿಗಳನ್ನೂ ಮೀರಿದ ಒಂದು ಅನುಭವ. ಪ್ರೀತಿಗೆ ಯಾವುದೇ ಗಡಿಗಳಿಲ್ಲ. ಪ್ರೀತಿ ಮನುಷ್ಯರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಪ್ರಾಣಿಗಳು ಕೂಡ ಪ್ರೀತಿಗೆ ಮನುಷ್ಯರಷ್ಟೇ ಸ್ಪಂದಿಸುತ್ತವೆ, ಮನುಷ್ಯರಷ್ಟೇ ಹಂಬಲಿಸುತ್ತವೆ. ಅತಿ ಕ್ರೂರ ಪ್ರಾಣಿಯೆಂದು ಕರೆಯಲಾಗುವ ಹುಲಿಯ ಮರಿಗಳನ್ನು (Tiger Cubs) ನಾಯಿಯೊಂದು ಸಾಕುತ್ತಿದೆ ಎಂದರೆ ನೀವು ನಂಬುತ್ತೀರಾ? ಅಚ್ಚರಿಯಾದರೂ ಇದು ಸತ್ಯ. ಲ್ಯಾಬ್ರಡಾರ್ ನಾಯಿಯೊಂದು ಮೂರು ಹುಲಿ ಮರಿಗಳನ್ನು ತನ್ನ ಮಕ್ಕಳಂತೆ ಸಾಕಿ, ಸಲಹುತ್ತಿದೆ. ಹುಲಿ ಮರಿಗಳ ಜೊತೆ ನಾಯಿ ಮಲಗಿರುವ ವಿಡಿಯೋ (Video Viral) ಇಂಟರ್ನೆಟ್ನಲ್ಲಿ ಭಾರೀ ವೈರಲ್ ಆಗಿದೆ.
ಪ್ರೀತಿ ಎಲ್ಲಾ ಗಡಿಗಳನ್ನು ಮೀರುತ್ತದೆ ಎಂದು ನಾವೆಲ್ಲರೂ ಕೇಳಿದ್ದೇವೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ನಾಯಿಯ ವಿಡಿಯೋ ಅದಕ್ಕೆ ಸಾಕ್ಷಿಯಾಗಿದೆ. ಈ ಮೂರು ಹುಲಿ ಮರಿಗಳ ತಾಯಿ ಅವುಗಳಿಗೆ ಹಾಲು ಕೊಡಲು ಒಪ್ಪದೆ, ಆ ಮರಿಗಳನ್ನು ಪ್ರಾಣಿ ಸಂಗ್ರಹಾಲಯದಲ್ಲಿ (ಝೂ) ಬಿಟ್ಟು ಹೋಗಿತ್ತು. ವೈರಲ್ ಆಗಿರುವ ವಿಡಿಯೋದಲ್ಲಿ ಲ್ಯಾಬ್ರಡಾರ್ ನಾಯಿ ಮೂರು ಹುಲಿ ಮರಿಗಳನ್ನು ಸಲಹುತ್ತಿರುವುದನ್ನು ನೋಡಬಹುದು. ಹುಲಿ ಮರಿಗಳ ಮತ್ತು ಅವುಗಳ ಸಾಕುತಾಯಿಯಾದ ನಾಯಿಯ ನಡುವಿನ ಬಾಂಧವ್ಯ ಅಂತರ್ಜಾಲವನ್ನು ಬೆರಗುಗೊಳಿಸಿದೆ.
ಇದನ್ನೂ ಓದಿ:ನಿಮಗಿದು ಗೊತ್ತೇ?; 73 ವರ್ಷಗಳಿಂದ ಭಾರತದ ಈ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ ಜನರು!
ಈ ವಿಡಿಯೋವನ್ನು ಚೀನಾದಲ್ಲಿ ಚಿತ್ರೀಕರಿಸಲಾಗಿದ್ದು, ಹುಲಿ ಮರಿಗಳು ನಾಯಿಯ ಸುತ್ತ ಆಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ಹುಲಿ ಮರಿಗಳ ತಾಯಿ ಹುಟ್ಟಿದ ಕೂಡಲೇ ಅವುಗಳಿಗೆ ಆಹಾರವನ್ನು ನೀಡಲು ನಿರಾಕರಿಸಿದವು ಎಂದು ಅದು ಹೇಳುತ್ತದೆ.
Because you want to see a lab doggy take care of baby rescue tigers
pic.twitter.com/qmKnyO4Fzi— A Piece of Nature (@apieceofnature) May 15, 2022
ಭಾನುವಾರದಂದು ಎ ಪೀಸ್ ಆಫ್ ನೇಚರ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಾಗಿನಿಂದ ಈ ವಿಡಿಯೋವನ್ನು 16,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ವಿಡಿಯೋ ಶ್ವಾನಪ್ರಿಯರ ಮನಸನ್ನು ಕದ್ದಿದೆ. ಪ್ರೀತಿಗೆ ಜಾತಿಯಿಲ್ಲ ಎಂಬುದನ್ನು ಈ ಹುಲಿ ಮತ್ತು ನಾಯಿಮರಿಗಳು ಕೂಡ ಸಾಬೀತುಪಡಿಸಿವೆ. ಅವರಿಗೆ ಸಿಕ್ಕಿರುವ ಹೊಸ ತಾಯಿಯ ಜೊತೆಗೆ ಹೀಗೇ ಖುಷಿಯಿಂದ ಬೆಳೆಯಲಿ ಎಂದು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ಫ್ಯಾನ್ಗೆ ದುಪಟ್ಟಾ ಸಿಲುಕಿಕೊಂಡು ಉಸಿರುಗಟ್ಟಿದ ನಾಯಕಿ; ಮತ್ತೆ ಟ್ರೋಲ್ ಆಯ್ತು ಹಿಂದಿ ಸೀರಿಯಲ್
ಸಾಮಾನ್ಯವಾಗಿ ತಾಯಿ ಹುಲಿ ಸಾವನ್ನಪ್ಪಿದರೆ ಮರಿಗಳು ಅನಾಥವಾಗುತ್ತವೆ. ಇದರ ಹೊರತಾಗಿಯೂ ಹುಟ್ಟಿದ ಮರಿಗಳು ದುರ್ಬಲವಾಗಿದ್ದರೆ, ಅಸಮರ್ಥವಾಗಿದ್ದರೆ, ಗಾಯಗೊಂಡರೆ ಅಥವಾ ಅನಾರೋಗ್ಯದಿಂದ ಕೂಡಿದ್ದರೆ ಹುಲಿ ಆ ಮರಿಗಳನ್ನು ತನ್ನ ಹತ್ತಿರಕ್ಕೆ ಸೇರಿಸುವುದಿಲ್ಲ. ಕೆಲವು ಹೆಣ್ಣು ಹುಲಿಗಳು ಗಾಯಗೊಂಡಾಗ ಅದು ಮರಿಗಳಿಗೆ ಆಹಾರವನ್ನು ನೀಡಲು ಅಸಮರ್ಥಗೊಂಡು ತಮ್ಮ ಮರಿಗಳನ್ನು ಬಿಟ್ಟು ಹೋಗುತ್ತದೆ.
ಕಳೆದ ವರ್ಷ, ಸೈಬೀರಿಯಾದಲ್ಲಿ ಬ್ಲಾಕ್ ಫ್ಯಾಂಥರ್ನ ಮರಿಯೊಂದನ್ನು ರಾಟ್‌ವೀಲರ್ ನಾಯಿ ಸಾಕಿದ ಕಥೆ ವೈರಲ್ ಆಗಿತ್ತು. ಇದೀಗ ಲ್ಯಾಬ್ರಡಾರ್ ನಾಯಿ ಹುಲಿ ಮರಿಗಳನ್ನು ಸಾಕುತ್ತಿರುವ ವಿಡಿಯೋ ವೈರಲ್ ಆಗಿದೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ