Viral Video: ಚಾಲಕನಿಲ್ಲದೇ ರಸ್ತೆಯಲ್ಲಿ ಹಿಮ್ಮುಖವಾಗಿ ಚಲಿಸಿದ ವ್ಯಾನ್; ವಿಡಿಯೋ ವೈರಲ್​​​​

ಮುನ್ಸಿಪಲ್ ಕಾರ್ಪೊರೇಶನ್‌ಗೆ ಸೇರಿದ ವ್ಯಾನ್ ಇದಾಗಿದ್ದು, ರಸ್ತೆ ನಿರ್ವಹಣೆ ಕಾರ್ಯಕ್ಕಾಗಿ ರಸ್ತೆಯಲ್ಲಿ ನಿಲ್ಲಿಸಲಾಗಿತ್ತು. ಆದರೆ ನಿಂತಿದ್ದ ವ್ಯಾನ್ ಇದ್ದಂತೆ ರಿವರ್ಸ್ ನಲ್ಲಿ ಅತಿವೇಗದಲ್ಲಿ ಹೋಗಿ ಪಕ್ಕದಲ್ಲಿದ್ದ ಡಿವೈಡರ್ ಗೆ ಡಿಕ್ಕಿ ಹೊಡೆದು ನಿಂತಿದೆ. ವಿಡಿಯೋ ಇಲ್ಲಿದೆ ನೋಡಿ.

Viral Video: ಚಾಲಕನಿಲ್ಲದೇ ರಸ್ತೆಯಲ್ಲಿ ಹಿಮ್ಮುಖವಾಗಿ ಚಲಿಸಿದ ವ್ಯಾನ್; ವಿಡಿಯೋ ವೈರಲ್​​​​
ಚಾಲಕನಿಲ್ಲದೇ ರಸ್ತೆಯಲ್ಲಿ ಹಿಮ್ಮುಖವಾಗಿ ಚಲಿಸಿದ ವ್ಯಾನ್

Updated on: Aug 07, 2024 | 6:21 PM

ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಒಂದು ತಪ್ಪಿನಿಂದ ಹಲವರು ಬಲಿಯಾಗುತ್ತಿದ್ದಾರೆ. ಇದೀಗ ಅಂತದ್ದೇ ಘಟನೆಯೊಂದು ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಸರಕಾರಿ ವಾಹನವೊಂದು ಹಿಮ್ಮುಖವಾಗಿ ವೇಗವಾಗಿ ಸಾಗಿದೆ. ಹೆಚ್ಚು ಜನಸಂದಣಿ ಇರಲಿಲ್ಲವಾದ್ದರಿಂದ ದೊಡ್ಡ ಅಪಘಾತ ತಪ್ಪಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ಪುಣೆಯ ಮುನ್ಸಿಪಲ್ ಕಾರ್ಪೊರೇಶನ್‌ಗೆ ಸೇರಿದ ವ್ಯಾನ್ ಇದಾಗಿದ್ದು, ರಸ್ತೆ ನಿರ್ವಹಣೆ ಕಾರ್ಯಕ್ಕಾಗಿ ರಸ್ತೆಯಲ್ಲಿ ನಿಲ್ಲಿಸಲಾಗಿತ್ತು. ಆದರೆ ನಿಂತಿದ್ದ ವ್ಯಾನ್ ಇದ್ದಂತೆ ರಿವರ್ಸ್ ನಲ್ಲಿ ಅತಿವೇಗದಲ್ಲಿ ಹೋಗಿ ಪಕ್ಕದಲ್ಲಿದ್ದ ಡಿವೈಡರ್ ಗೆ ಡಿಕ್ಕಿ ಹೊಡೆದು ನಿಂತಿದೆ. ರಾತ್ರಿ 11.45ರ ಸುಮಾರಿಗೆ ಈ ಘಟನೆ ನಡೆದಿದೆ. ಆಗ ರಸ್ತೆಯಲ್ಲಿ ವಾಹನ ಸಂಚಾರ ಇಲ್ಲದ ಕಾರಣ ದೊಡ್ಡ ಅಪಘಾತ ತಪ್ಪಿದೆ. ಈ ಘಟನೆಯನ್ನು ರಸ್ತೆ ಬದಿಯ ಜನರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ರೀಲ್ಸ್‌ ಮಾಡಲು ಹೋದ ಯುವಕ, ಜಲಪಾತದಿಂದ 150 ಅಡಿ ಆಳಕ್ಕೆ ಬಿದ್ದು ಸಾವು

ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಆದರೆ, ಈ ವೀಡಿಯೋಗೆ ಮುನ್ಸಿಪಲ್ ಕಾರ್ಪೊರೇಶನ್​​​ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪುಣೆಯಲ್ಲಿ 17 ವರ್ಷದ ಬಾಲಕನೊಬ್ಬ ಕುಡಿದ ಅಮಲಿನಲ್ಲಿ ಪೋರ್ಷೆ ಕಾರಿಗೆ ಡಿಕ್ಕಿ ಹೊಡೆದು 24 ವರ್ಷದ ಇಬ್ಬರು ಟೆಕ್ಕಿಗಳು ತಕ್ಷಣ ಸಾವನ್ನಪ್ಪಿದ ಒಂದು ತಿಂಗಳ ನಂತರ ಈ ಘಟನೆ ನಡೆದಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ