‘ನಾನು ನಾಗಿಣಿ, ನೀನು ಹಾವಾಡಿಗ’ ಹೇಗಿದೆ ನಮ್ಮ ಜೋಡಿ!

| Updated By: ಶ್ರೀದೇವಿ ಕಳಸದ

Updated on: Nov 10, 2022 | 5:56 PM

Nagin : ವಯಸ್ಸೆಷ್ಟು ಕೇಳಬೇಡಿ, ನೋಡಿದರೆ ಗೊತ್ತಾಗುತ್ತದೆ. ಉತ್ಸಾಹವಿದ್ದರೆ ಸಂತೋಷ ಬದುಕುಪೂರ್ತಿ ನಿಮ್ಮ ಜೊತೆಗೆ ಇದ್ದೇ ಇರುತ್ತದೆ. ಹೇಗಿದೆ ಈ ಅಜ್ಜಂದಿರ ನೃತ್ಯ. ನೋಡಿ ವಿಡಿಯೋ.

‘ನಾನು ನಾಗಿಣಿ, ನೀನು ಹಾವಾಡಿಗ’ ಹೇಗಿದೆ ನಮ್ಮ ಜೋಡಿ!
Elderly Man Does Naagin Dance As His Friend Acts Like Snake Charmer
Follow us on

Viral Video : ಭಾರತೀಯ ಮದುವೆಗಳಲ್ಲಿ, ಉತ್ಸವಗಳಲ್ಲಿ, ಮೆರವಣಿಗೆಗಳಲ್ಲಿ ಪುರುಷರು ಮೈರೆತು ನೃತ್ಯ ಮಾಡುವುದು ಸಾಮಾನ್ಯ ದೃಶ್ಯ. ಇದೀಗ ಇಬ್ಬರು ವೃದ್ಧರು ನಾಗೀನ್​ ನೃತ್ಯ ಪ್ರದರ್ಶನ ಮಾಡಿದ ವಿಡಿಯೋ ವೈರಲ್ ಆಗುತ್ತಿದೆ. ನಾನು ಹಾವಾಡಿಗನಾಗುತ್ತೇನೆ ನೀನು ನಾಗಿಣಿಯಾಗು ಎಂದು ಮಾತನಾಡಿಕೊಂಡು ಈ ಇಬ್ಬರೂ ವೃದ್ಧರು ನರ್ತಿಸಿದ್ದಾರೆ. ಅದೆಷ್ಟು ತನ್ಮಯರಾಗಿದ್ದಾರೆ ನೋಡಿ, ಅದೂ ಈ ವಯಸ್ಸಿನಲ್ಲಿ…

ಈ ವಯಸ್ಸಿನಲ್ಲಿ ಈ ಉತ್ಸಾಹದಲ್ಲಿ ಇವರಿಬ್ಬರೂ ಹೀಗೆ ನರ್ತಿಸಿದ್ದನ್ನು ಅಭಿನಯಿಸಿದ್ದನ್ನು ನೋಡಿ ನೆಟ್ಟಿಗರು ದಂಗಾಗಿದ್ದಾರೆ. ಇವರಿಬ್ಬರಿಗೂ ಈ ವಯಸ್ಸಿನಲ್ಲಿ ಎಲ್ಲಿಂದ ಬಂತು ಶಕ್ತಿ ಮತ್ತು ಉತ್ಸಾಹ ಎಂದು ಕೆಲವರು ಪ್ರಶ್ನಿಸಿದ್ದಾರೆ. ಈ ವಯಸ್ಸಿನಲ್ಲಿಯೂ ಇವರು ತಮ್ಮ ಆರೋಗ್ಯವನ್ನು ಇಷ್ಟೊಂದು ಗಟ್ಟಿಮುಟ್ಟಾಗಿ ಇಟ್ಟುಕೊಂಡಿದ್ದಾರಲ್ಲ ಎಂದು ಶ್ಲಾಘಿಸಿದ್ದಾರೆ ಕೆಲವರು. ಗೊತ್ತಾಗುವುದಿಲ್ಲವಾ ನೋಡಿದರೆ ಇವರು ಕುಡಿದಿದ್ದಾರೆ ಅದಕ್ಕೇ ಹೀಗಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ ಒಬ್ಬರು. ಹಾಗೆಲ್ಲ ಹಗೂರವಾಗಿ ಮಾತನಾಡಬಾರದು ಅವರ ಉತ್ಸಾಹ ಮುಖ್ಯ. ಅವರ ವಯಸ್ಸನ್ನು ಗಮನಿಸಿ. ನೀವು ಹೀಗೆ ನರ್ತಿಸಬಲ್ಲಿರಾ? ಎಂದಿದ್ದಾರೆ ಮಗದೊಬ್ಬರು.

34,000ಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. 11,000ಕ್ಕಿಂತಲೂ ಹೆಚ್ಚು ಜನ ವಿಡಿಯೋ ಇಷ್ಟಪಟ್ಟಿದ್ದಾರೆ. ಹಾವು ಯಾವಾಗ ಬರುತ್ತದೆಯೋ ಇನ್ನೂ ಕಾಯುತ್ತಲೇ ಇದ್ದೇವೆ ಎಂದು ತಮಾಷೆ ಮಾಡಿದ್ದಾರೆ ಹಲವರು.

ನಿಮಗೆನು ಅನ್ನಿಸುತ್ತಿದೆ ಇವರನ್ನು ನೋಡುತ್ತಿದ್ದರೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 5:54 pm, Thu, 10 November 22