ಯಾವುದೇ ಜೀವಿಯಾಗಲಿ ಪರಸ್ಪರ ಗಂಡು ಹೆಣ್ಣಿನ ಮಿಲನವಿಲ್ಲದೆ ಮಕ್ಕಳಿಗೆ ಜನ್ಮ ನೀಡಲು ಸಾಧ್ಯವಿಲ್ಲ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೂ ಕೆಲವೊಂದು ಸರೀಸೃಪ ಜೀವಿಗಳು ಸ್ವತಃ ತಮ್ಮಷ್ಟಕ್ಕೆ ತಾವೇ ಗರ್ಭ ಧರಿಸಿದ ನಿದರ್ಶನಗಳಿವೆ. ಇತ್ತೀಚಿಗೆ ಈ ರೀತಿಯ ಮತ್ತೊಂದು ಆಶ್ವರ್ಯಕರ ಘಟನೆ ಕೋಸ್ಟರಿಕಾದಲ್ಲಿ ನಡೆದಿದೆ. ಹೆಣ್ಣು ಮೊಸಳೆಯೊಂದು ಗಂಡು ಮೊಸಳೆಯ ಮಿಲನವಿಲ್ಲದೆ ಮೊಟ್ಟೆ ಇಟ್ಟಿದೆ, ಇದು ವೈಜ್ಞಾನಿಕ ಜಗತ್ತನ್ನೇ ಅಚ್ಚರಿಗೊಳಿಸಿದೆ. ಕೋಸ್ಟರಿಕಾದ ಮೃಗಾಲಯದಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಈ ಮೊಟ್ಟೆಯು ತಾಯಿ ಮೊಸಳೆಗೆ 99.9% ನಷ್ಟು ಹೋಲಿಕೆಯನ್ನು ಹೊಂದಿದೆ ಎಂದು ಪರೀಕ್ಷೆಯು ಬಹಿರಂಗಪಡಿಸಿದೆ. ಈ ವಿದ್ಯಮಾನವು ಪಕ್ಷಿಗಳು, ಮೀನುಗಳು ಮತ್ತು ಇತರ ಸರೀಸೃಪ ಜಾತಿಗಳಲ್ಲಿ ಕಂಡುಬಂದಿವೆ. ಆದರೆ ಮೊಸಳೆಗಳಲ್ಲಿ ಹಿಂದೆದೂ ಕಂಡುಬಂದಿಲ್ಲ.
ಕ್ರೊಕೊಡೈಲಸ್ ಅಕ್ಯುಟಸ್ ಎಂಬ ಹೆಸರಿನ 18 ವರ್ಷ ವಯಸ್ಸಿನ ಈ ಅಮೇರಿಕನ್ ಹೆಣ್ಣು ಮೊಸಳೆಯನ್ನು, ಅದು ಎರಡು ವರ್ಷದವಳಿರುವಾಗ ಕೋಸ್ಟರಿಕಾ ಮೃಗಾಲಯಕ್ಕೆ ಕರೆತರಲಾಯಿತು. ಮತ್ತು ಈ ಮೊಸಳೆಯು ಸುಮಾರು 16 ವರ್ಷಗಳಿಂದಲೂ ಯಾವುದೇ ಪುರುಷ ಮೊಸಳೆಯೊಂದಿಗೆ ಸಂಪರ್ಕವನ್ನು ಹೊಂದಿಲ್ಲ. ಇದನ್ನು ಪ್ರತ್ಯೇಕವಾಗಿಯೇ ಇಡಲಾಗಿತ್ತು. ಅಚ್ಚರಿ ಏನೆಂದರೆ ಗಂಡು ಮೊಸಳೆಯ ಸಂಪರ್ಕವಿಲ್ಲದೆ ಈ ಮೊಸಳೆಯು 2018 ರಲ್ಲಿ 14 ಮೊಟ್ಟೆಗಳನ್ನಿಟ್ಟುದ್ದು, ಅದರಲ್ಲಿ ಒಂದು ಮೊಟ್ಟೆ ಅಭಿವೃದ್ಧಿ ಹೊಂದಿದರೂ, ಮರಿಯನ್ನು ಜೀವಂತವಾಗಿ ಪಡೆಯಲಾಗಲಿಲ್ಲ.
ಹೆಣ್ಣು ಮೊಸಳೆಯು ಯಾವಾಗಲೂ ಇತರ ಮೊಸಳೆಗಳಿಂದ ಬೇರ್ಪಟ್ಟು ವಾಸಿಸುತ್ತಿದ್ದರಿಂದ ಅದು ಹೇಗೆ ಮೊಟ್ಟೆ ಇಟ್ಟಿದೆ ಎಂದು ಮೃಗಾಲಯದವರು ಗೊಂದಲಕ್ಕೊಲಗಾದರು. ಇದರ ವಿಚಾರಣೆಗಾಗಿ ವಾರೆನ್ ಬೂತ್ ನೇತೃತ್ವದ ವಿಜ್ಞಾನಿಗಳ ತಂಡವನ್ನು ಕರೆತರಲಾಯಿತು. ವಿಜ್ಞಾನಿಗಳು ವಂಶವಾಹಿಗಳನ್ನು ಪರೀಕ್ಷಿಸಿದಾಗ ಮೊಟ್ಟೆಯನ್ನು ತನ್ನ ತಾಯಿಯೊಂದಿಗೆ ಶೇಕಡಾ 99.9% ರಷ್ಟು ಹೋಲುತ್ತದೆ ಹಾಗೂ ಅದಕ್ಕೆ ಯಾವುದೇ ತಂದೆ ಇಲ್ಲ ಎಂದು ದೃಢಪಡಿಸಿದರು.
ಇದನ್ನೂ ಓದಿ: Viral Video: ವಿಸ್ಕಿ ಬಳಸಿ ಮ್ಯಾಗಿ ತಯಾರಿಸಿದ ವ್ಯಕ್ತಿ, ಆತನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ ಎಂದ ನೆಟ್ಟಿಗರು
ವಾರೆನ್ ಬೂತ್ ನೇತೃತ್ವದ ವರ್ಜೀನಿಯಾ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್ ಮತ್ತು ಅಮೇರಿಕಾದ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರನ್ನು ಒಳಗೊಂಡ ತಂಡವು ಈ ಮೊಸಳೆಯ ಕುರಿತ ಅಧ್ಯಯನವನ್ನು ನಡೆಸಿ “ಮೊಸಳೆಗಳಲ್ಲಿ ಈ ಅಪರೂಪದ ಸಂತಾನೋತ್ಪತ್ತಿ ವಿಧಾನ ಇದೇ ಮೊದಲು’ ಎಂದು ತಿಳಿಸಿದರು. ಮತ್ತು ಈ ಆವಿಷ್ಕಾರವನ್ನು ಬಯಾಲಜಿ ಲೆಟರ್ಸ್ ಜರ್ನಲ್ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.
ಕೆಲವೊಮ್ಮೆ ಕೆಲವು ಪ್ರಾಣಿಗಳು ಗಂಡಿನ ಅಗತ್ಯವಿಲ್ಲದೆ ಶಿಶುಗಳಿಗೆ ಜನ್ಮ ನೀಡುತ್ತವೆ. ಇದನ್ನು ‘ವರ್ಜಿನ್ ಬರ್ತ್’ ಅಥವಾ ‘ಫ್ಯಾಕಲ್ಟೇಟಿವ್ ಪಾರ್ಥೆನೋಜೆನೆಸಿನ್’ ಎಂದು ಕರೆಯುತ್ತಾರೆ. ಈ ವಿಧಾನದಲ್ಲಿ ಅಂಡಾಣು ಪುರುಷ ಜೀವಿಗಳ ವೀರ್ಯದಿಂದ ಫಲವತ್ತಾಗದೆ ಭ್ರೂಣವಾಗುತ್ತವೆ. ಈ ಹಿಂದೆ ಕೆಲವು ಜಾತಿಯ ಪಕ್ಷಿಗಳು, ಮೀನುಗಳು, ಹಲ್ಲಿಗಳು ಈ ರೀತಿಯ ಸರೀಸೃಪಗಳಲ್ಲಿ ಈ ರೀತಿಯ ಗರ್ಭಧಾರಣೆ ಕಾಣಿಸಿಕೊಂಡಿವೆ. ಆದರೆ ಮೊಸಳೆಗಳಲ್ಲಿ ಈ ವಿಚಿತ್ರ ವಿಚಾರ ಇದುವರೆಗೆ ಕಂಡುಬಂದಿಲ್ಲ. ಸರಳವಾಗಿ ಹೇಳುವುದಾದರೆ ಈ ಪ್ರಕ್ರಿಯೆಯಲ್ಲಿ ಪುರುಷ ಜೀವಿಯ ಸಹಕಾರವಿಲ್ಲದೆ ಅಂಡಾಣು ಹೆಣ್ಣು ಜೀವಿಯಲ್ಲಿ ತನ್ನಿಂದ ತಾನೇ ಭ್ರೂಣವಾಗಿ ಬೆಳೆಯುತ್ತದೆ.
ಇದನ್ನೂ ಓದಿ: Viral Video: ವಿಸ್ಕಿ ಬಳಸಿ ಮ್ಯಾಗಿ ತಯಾರಿಸಿದ ವ್ಯಕ್ತಿ, ಆತನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ ಎಂದ ನೆಟ್ಟಿಗರು
ಕನ್ಯಾಜತ್ವ ಅಥವಾ ವರ್ಜಿನ್ ಬರ್ತ್ ಎಂಬುದು ಫ್ಯಾಕಲ್ಟೇಟಿವ್ ಪಾರ್ಥೆನೋಜೆನೆಸಿಸ್ ಎಂಬ ನೈಸರ್ಗಿಕ ಪ್ರಕ್ರಿಯೆ. ಜೇನು ನೊಣಗಳು, ಇರುವೆಗಳಂತಹ ಜೀವಿಗಳಲ್ಲಿ ಲೈಂಗಿಕ ವರ್ಣತಂತು ಇರುವುದಿಲ್ಲ. ಈ ಜೀವಿಗಳು ಪಾರ್ಥೆನೋಜೆನೆಸಿಸ್ ಮೂಲಕ ಸಂತಾನೋತ್ಪತ್ತಿ ಮಾಡುತ್ತವೆ. ಅದೇ ರೀತಿ ಕೆಲವು ಸರೀಸೃಪಗಳು, ಮೀನುಗಳು, ಪಕ್ಷಿಗಳು ಸಹ ಈ ರೀತಿಯಲ್ಲಿ ಸಂತಾನೋತ್ಪತ್ತಿ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಈ ಪ್ರಕ್ರಿಯೆಯಲ್ಲಿ ಹೆಣ್ಣು ಜೀವಿಯ ದೇಹದಲ್ಲಿ ಮೊಟ್ಟೆಯ ಕೋಶಗಳು ತಯಾರಾಗುತ್ತವೆ. ಇವುಗಳಲ್ಲಿ ನಿರಂತರ ವಿಭಜನೆ ಇರುತ್ತದೆ ಮತ್ತು ಭ್ರೂಣಕ್ಕೆ ಅಗತ್ಯವಿರುವ ಒಟ್ಟು ಸಂಖ್ಯೆಯ ವಂಶವಾಹಿಗಳು ಸಿದ್ಧವಾಗುವವರೆಗೆ ಇದು ಮುಂದುವರಿಯುತ್ತದೆ. ಆದರೂ ಪ್ರಕ್ರಿಯೆಯ ಮೂಲಕ ಜನಿಸಿದ ಭ್ರೂಣವು ಬದುಕುಳಿಯುವ ಸಾಧ್ಯತೆ ಕಡಿಮೆ.