ನವದೆಹಲಿ: ಭಾರತದಲ್ಲಿ ಸದ್ಯ ಮದುವೆ (Marriage) ಸಮಾರಂಭಗಳು ಜೋರಾಗಿ ನಡೆಯುತ್ತಿವೆ. ಮದುವೆ ಕಾರ್ಯಕ್ರಮವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಮದುವೆ ಮನೆಯಲ್ಲಿ ಸಂಬಂಧಿಕರು, ಸ್ನೇಹಿತರು, ತರ್ಲೆ, ತಮಾಷೆ ಎಲ್ಲವೂ ನಡೆಯುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ನಮಗೆ ಮದುವೆ ವೈರಲ್ ವಿಡಿಯೋಗಳು ನೋಡಲು ಸಿಗುತ್ತವೆ. ಜೊತೆಗೆ ಮದುವೆ ಮನೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸುವಂತಹ ವಿಡಿಯೋಗಳು ಕೂಡ ವೈರಲ್ ಆಗುತ್ತಿರುತ್ತೇವೆ. ಈಗ ಅಂತಹದ್ದೇ ಒಂದು ಮದುವೆಯ ವಿಡಿಯೋ ವೈರಲ್ ಆಗಿದ್ದು, ವರ ಸ್ನೇಹಿತನೇ ಮದುವೆ ಮನೆಯಲ್ಲಿ ಕಳ್ಳನಾಗಿದ್ದಾನೆ. ವರ, ವಧು ಮತ್ತು ಅವರ ಕುಟುಂಬದ ಸದಸ್ಯರಿಗೆ ಮದುವೆಯ ದಿನವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಈ ವಿಡಿಯೋದಲ್ಲಿ ವರನು ಅನೇಕ ಸ್ನೇಹಿತರ ಮಧ್ಯೆ ಕುಳಿತುಕೊಂಡಿದ್ದಾನೆ. ಭಾರತೀಯ ವಿವಾಹಗಳಲ್ಲಿ ವರನು ಮಾಲೆಯನ್ನು ಧರಿಸುವುದು ಸಾಮಾನ್ಯ ಸಂಪ್ರದಾಯವಾಗಿದೆ. ಜೊತೆಗ ಆತನ ಕೊರಳಿನಲ್ಲಿ ಹಣದ ಹಾರ ಕೂಡ ಹಾಕಲಾಗಿದೆ. ಈ ರೀತಿ ಹಣದ ಹಾರ ಹಾಕುವುದು ಕೆಲವು ಕಡೆ ಸಂಪ್ರದಾಯವೆಂದು ಹೇಳಲಾಗುತ್ತದೆ.
ವರನ ಪಕ್ಕದಲ್ಲಿ ಕುಳಿತಿದ್ದ ಗೆಳೆಯನೊಬ್ಬ ವರನ ಮಾಲೆಯಲ್ಲಿದ್ದ ಹಣವನ್ನು ಯಾರಿಗೂ ಗೊತ್ತಾಗದ ಹಾಗೆ ಕದಿಯಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇಲ್ಲಿಯವರೆಗೆ, ಮದುವೆಯ ಸ್ಥಳ ಮತ್ತು ವರನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವಿಡಿಯೋದ ಆರಂಭದಲ್ಲಿ, ವರನು ತನ್ನ ಸಂಬಂಧಿಕರು ಹೇಳುವುದನ್ನು ಕೇಳಲು ಪ್ರಯತ್ನಿಸುತ್ತಿರುವಾಗ ಸ್ನೇಹಿತ ಹಾರದಿಂದ ಹಣವನ್ನು ಕದಿಯಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ವರನು ಮತ್ತೆ ತನ್ನ ಸಂಬಂಧಿಕರ ಮಾತುಗಳನ್ನು ಕೇಳಲು ಪ್ರಾರಂಭಿಸಿದ ತಕ್ಷಣ, ಸ್ನೇಹಿತನು ತನ್ನ ಜೇಬಿನಲ್ಲಿ ಹಣವನ್ನು ಇಟ್ಟುಕೊಳ್ಳುತ್ತಾನೆ. ಈ ವೈರಲ್ ವಿಡಿಯೋವನ್ನು ಎರಡು ದಿನಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಮೀಮ್ಲೋಜಿ ಎಂಬ ಖಾತೆಯಿಂದ ಅಪ್ಲೋಡ್ ಮಾಡಲಾಗಿದ್ದು, ಇದುವರೆಗೆ 97,298 ಲೈಕ್ಗಳು ಬಂದಿವೆ. ಕದ್ದ ಹಣ್ಣದಿಂದಲೇ ಉಡುಗರೆ ಕೊಡುತ್ತೇನೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ನೆಟ್ಟಿಗರು ಇದನ್ನು ತಮಾಷೆಯಾಗಿ ಇಂಡಿಯನ್ ಮನಿ ಹೀಸ್ಟ್ ಎಂದು ಕರೆದಿದ್ದಾರೆ.
ಇದನ್ನೂ ಓದಿ:
ತಮಿಳುನಾಡು ನವದಂಪತಿಗೆ ವಿವಾಹ ಮಂಟಪದಲ್ಲಿ ಪೆಟ್ರೋಲ್ ಡೀಸೆಲ್ ಕೊಡುಗೆ
Viral Video: ಸೂಟ್ ಧರಿಸಿ ಚಾಟ್ ಮತ್ತು ಗೋಲ್ಗಪ್ಪ ಮಾರಾಟ ಮಾಡೋದನ್ನ ಎಲ್ಲಾದರೂ ನೋಡಿದ್ದೀರಾ..!