Viral Video: ವ್ಯಕ್ತಿಯ ಬಾಯಿಯಿಂದ ಹೊರಬಿದ್ದ ದೈತ್ಯ ಟಾರಂಟುಲಾ ಜೇಡ; ವಿಡಿಯೊ ನೋಡಿದ್ರೆ ಶಾಕ್ ಆಗ್ತೀರಾ!

ವ್ಯಕ್ತಿಯ ಬಾಯಿಯಿಂದ ಹೊರ ಬೀಳುತ್ತಿರುವ ದೈತ್ಯ ಟಾರಂಟುಲಾ ಜೇಡವನ್ನು ನೋಡಿ ನೆಟ್ಟಿಗರು ಎಚ್ಚರಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್ ಆಗಿದೆ. ವಿಡಿಯೊ ಇದೆ ನೀವೇ ನೋಡಿ..

Viral Video: ವ್ಯಕ್ತಿಯ ಬಾಯಿಯಿಂದ ಹೊರಬಿದ್ದ ದೈತ್ಯ ಟಾರಂಟುಲಾ ಜೇಡ; ವಿಡಿಯೊ ನೋಡಿದ್ರೆ ಶಾಕ್ ಆಗ್ತೀರಾ!
ಟಾರಂಟುಲಾ ಜೇಡ
Edited By:

Updated on: Nov 01, 2021 | 9:08 AM

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೊಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ತಮಾಷೆಯಾಗಿದ್ದರೆ ಇನ್ನು ಕೆಲವರು ಎಚ್ಚರಿಕೆಯ ಸಂದೇಶವನ್ನು ಸಾರುತ್ತವೆ. ಕೆಲವು ದೃಶ್ಯಗಳು ಫುಲ್​ ವೈರಲ್​ ಆಗಿದ್ದು ನಿಜವಾಗಿಯೂ ಆಶ್ಚರ್ಯವನ್ನುಂಟು ಮಾಡುತ್ತವೆ. ಅಮಥಹುದೇ ಒಂದು ವಿಡಿಯೊ ಇದೀಗ ಫುಲ್​ ವೈರಲ್ ಆಗಿದೆ. ವ್ಯಕ್ತಿಯ ಬಾಯಿಯಿಂದ ಹೊರಬಿದ್ದ ಟಾರಂಟುಲಾ ಜೇಡವನ್ನು ನೋಡಿ ನೆಟ್ಟಿಗರಲ್ಲಿ ಕೆಲವರು ಭಯಗೊಂಡಿದ್ದರೆ ಇನ್ನು ಕೆಲವರು ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ.

ಟಾರಂಟುಲಾ ಜೇಡ ತುಂಬಾ ಅಪಾಯಕಾರಿ ಹುಳು ಎಂದು ಕೇಳಿದ್ದೇವೆ. ಹಾಗಿರುವಾಗ ಯಾವ ಭಯವೂ ಇಲ್ಲದೇ ಬಾಯಿಯಿಂದ ಟಾರಂಟುಲಾ ಜೇಡವನ್ನು ಹೊರ ತೆಗೆದ ಝೂ ಕೀಪರ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಬಾಯಿಯಿಂದ ಹೊರ ಬೀಳುತ್ತಿರುವ ಟಾರಂಟುಲಾ ಜೇಡವನ್ನು ನೋಡಿ ಕೆಲವರು ಜೀವಕ್ಕೆ ಹಾನಿ ಮಾಡುವ ಅಪಾಯಕಾರಿ ಹುಳುವಿದು ಎಚ್ಚರ ಎಂದು ಹೇಳಿದ್ದಾರೆ.

ಅಮೆರಿಕಾದ ಜೆ ಬ್ರೂವರ್ ಮೃಗಾಲಯದ ಝೂ ಕೀಪರ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಗಮನಿಸುವಂತೆ ಝೂ ಕೀಪರ್ ಬಾಯಿಯಿಂದ ಟಾರಂಟುಲಾ ಜೇಡವನ್ನು ಹೊರ ತೆಗೆಯುತ್ತಿರುವುದು ಕಂಡು ಬರುತ್ತದೆ. ಈ ವಿಡಿಯೊ ತುಂಬಾ ಭಯಾನಕವಾಗಿದೆ. 4 ದಿನಗಳ ಹಿಂದೆಯಷ್ಟೇ ಈ ವಿಡಿಯೊವನ್ನು ಪೋಸ್ಟ್ ಮಾಡಲಾಗಿದ್ದು 1 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೊವನ್ನು ಲೈಕ್ ಮಾಡಿದ್ದಾರೆ. ತಮ್ಮ ಪ್ರತಿಕ್ರಿಯೆಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

Viral Photo: ಸೀರೆಯ ಮೇಲೆ ಮಗಳು ಖರೀದಿಸಿದ ಅತ್ಯಂತ ದುಬಾರಿ​ ಬೆಲ್ಟ್​ ಧರಿಸಿ ನಿಂತ ತಾಯಿ; ಹೊಸ ಸ್ಟೈಲ್​ ಹೊಸ ಲುಕ್ ನೋಡಿದ್ರೆ ನೀವೂ ಫಿದಾ ಆಗ್ತೀರಾ!

Shocking Video: ರಸ್ತೆಯ ಮಧ್ಯದಲ್ಲಿ ಬೈಕ್ ಸವಾರ ಸ್ಟಂಟ್ ಮಾಡೋಕೆ ಹೋಗಿ ಆಗಿದ್ದೇ ಬೇರೆ! ವಿಡಿಯೊ ನೋಡಿ

Published On - 9:08 am, Mon, 1 November 21