ಬೇಕಾ ಹೆಂಡತಿಯೊಂದಿಗೆ ಇಂಥ ಅಪಾಯಕಾರಿ ಬೈಕ್​ ಸ್ಟಂಟ್​?

| Updated By: ಶ್ರೀದೇವಿ ಕಳಸದ

Updated on: Jan 12, 2023 | 10:10 AM

Bike Stunt : ಈ ಯುವಕ ಎಷ್ಟೇ ಸ್ಟಂಟ್​ ಮಾಡುತ್ತಿದ್ದರೂ ಗಮನವೆಲ್ಲಾ ಸುಂದರವಾದ ಯುವತಿಯೆಡೆಯೇ ಇದೆ ಎನ್ನುತ್ತಿದ್ದಾರೆ ನೆಟ್ಟಿಗರು. ಮಿಲಿಯನ್​ಗಟ್ಟಲೆ ಜನ ಈ ವಿಡಿಯೋ ನೋಡಿದ್ದಲ್ಲದೆ ಇವನನ್ನು ಹಾಡಿ ಹಾಡಿ ಹರಸುತ್ತಿದ್ದಾರೆ.

ಬೇಕಾ ಹೆಂಡತಿಯೊಂದಿಗೆ ಇಂಥ ಅಪಾಯಕಾರಿ ಬೈಕ್​ ಸ್ಟಂಟ್​?
ಹೆಂಡತಿಯೊಂದಿಗೆ ಬೈಕ್​ ಸ್ಟಂಟ್
Follow us on

Viral Video : ಹುಡುಗರಿಗೆ ಬೈಕ್​ನ ಹುಚ್ಚು ಮಾತ್ರ ಅಲ್ಲ ಸ್ಟಂಟ್​ನ ಹುಚ್ಚು ಕೂಡ ಈಗ ವಿಪರೀತವಾಗುತ್ತಿದೆ. ಏಕೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ನೋಡುವವರು, ಮೆಚ್ಚುವವರು, ಪ್ರತಿಕ್ರಿಯಿಸುವವರು ಇರುತ್ತಾರಲ್ಲ?  ಆದರೆ ಇದೆಲ್ಲವೂ ಸುರಕ್ಷಿತವೇ? ಕ್ಷಣದಲ್ಲಿ ಏನೂ ಸಂಭವಿಸಬಹುದು. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ ನೆಟ್ಟಿಗರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಬಹುಶಃ ನವದಂಪತಿ ಇರಬೇಕು. ಹೆಂಡತಿಯನ್ನು ಹಿಂದೆ ಕೂರಿಸಿಕೊಂಡು ಈ ವ್ಯಕ್ತಿ ಹೀಗೆ ಬೈಕ್​ ಮೇಲೆ ಸ್ಟಂಟ್ ಮಾಡುತ್ತ ಹೊರಟಿದ್ದಾನೆ.

ರಿಯಲ್​ ಬಾದ್​ಶಾ ಇಲ್ಲಿದ್ದಾನೆ ಎಂದು ಕ್ಯಾಪ್ಷನ್​ ಕೊಟ್ಟು ಈ ವಿಡಿಯೋ ಅಪ್​ಲೋಡ್ ಮಾಡಿದೆ ಘಂಟಾ ಎಂಬ ಇನ್​ಸ್ಟಾಗ್ರಾಂ ಪುಟ. ರಾಯಲ್​ ಎನ್​ಫೀಲ್ಡ್​ ಓಡಿಸುತ್ತಿರುವ ಈ ವ್ಯಕ್ತಿಯಾಗಲಿ ಅವನ ಹೆಂಡತಿಯಾಗಲಿ ಹೆಲ್ಮೆಟ್​ ಧರಿಸಿಲ್ಲ. ಅಕಸ್ಮಾತ್ ಚೂರು ಏರುಪೇರಾದರೂ ಗತಿ ಏನು? 1.5 ಲಕ್ಷ ಜನ ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಮೂರು ಮಿಲಿಯನ್​ ಜನ ಈ ವಿಡಿಯೋ ನೋಡಿದ್ಧಾರೆ. ಅನೇಕರು ಎಲ್ಲ ರೀತಿಯಿಂದಲೂ ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : 3 ಬೈಕ್​ಗಳಲ್ಲಿ ಪ್ರಯಾಣಿಸಿದ 14 ಯುವಕರು, ಮುಂದೇನಾಯಿತು?

ಕುಳಿತುಕೊಳ್ಳುವಾಗ ಅಕಸ್ಮಾತ್​ ಹೆಂಡತಿಯ ಮುಖಕ್ಕೆ ಅವನ ಹಿಂಭಾಗ ತಾಕಿದರೆ ಪರಿಸ್ಥಿತಿ ಏನಾಗಬೇಡ ಎಂದು ಕೇಳಿದ್ದಾರೆ ಒಬ್ಬರು. ಇವನಿಗಿಂತ ಇವನ ಹೆಂಡತಿಗೆ ಧೈರ್ಯ ಹೆಚ್ಚು ಇದೆ ಎಂದಿದ್ದಾರೆ ಇನ್ನೊಬ್ಬರು. ಈ ವಿಡಿಯೋದಲ್ಲಿ ಸ್ಟಂಟ್ ಮಾಡುವವನನ್ನು ಬಿಟ್ಟು ಹಿಂದೆ ಕುಳಿತ ಸುಂದರವಾದ ಯುವತಿಯನ್ನೇ ಎಲ್ಲರೂ ನೋಡುತ್ತಿದ್ದಾರೆ ಎನ್ನಿಸುತ್ತದೆ ಎಂದಿದ್ದಾರೆ ಮಗದೊಬ್ಬರು. ಮತ್ತಿನ್ನೆಂದೂ ಇಂಥ ಸಾಹಸಕ್ಕೆ ಇಳಿಯಬೇಡ ಮಾರಾಯಾ, ಅದರಲ್ಲೂ ಹೆಂಡತಿಯನ್ನು ಅಥವಾ ಇನ್ನ್ಯಾರನ್ನೇ ಹೀಗೆ ಕೂರಿಸಿಕೊಂಡು ಎನ್ನುತ್ತಿದ್ದಾರೆ ಅನೇಕರು. ಏನೇ ಆಗಲಿ ಇಂಥ ಸಾಹಸಗಳು ಎಂದಿಗೂ ಅಪಾಯಕಾರಿಯೇ.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ