Viral Video: ಹೆಂಡತಿಗೆ ಚಾಪ್ಸ್ಟಿಕ್ನಲ್ಲಿ ನೂಡಲ್ಸ್ ತಿನ್ನುವುದನ್ನು ಹೇಳಿಕೊಟ್ಟ ಗಂಡ; ಕ್ಯೂಟ್ ವಿಡಿಯೋ ಇಲ್ಲಿದೆ
ಗಂಡ ಮತ್ತು ಹೆಂಡತಿ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದು, ಅಲ್ಲಿ ಅವರು ನೂಡಲ್ಸ್ ಬೌಲ್ ಅನ್ನು ಆರ್ಡರ್ ಮಾಡಿದ್ದಾರೆ. ನೂಡಲ್ಸ್ ತಿನ್ನಲು ಚಾಪ್‌ಸ್ಟಿಕ್‌ಗಳನ್ನು ಹೇಗೆ ಬಳಸಬೇಕೆಂದು ಗಂಡ ತನ್ನ ಹೆಂಡತಿಗೆ ಕಲಿಸುತ್ತಿದ್ದಾನೆ.
ಹೊಸದಾಗಿ ಮದುವೆಯಾದ ಜೋಡಿಯೊಂದು ರೆಸ್ಟೋರೆಂಟ್‌ಗೆ ಊಟಕ್ಕೆ ಬಂದಿತ್ತು. ಆ ನವವಿವಾಹಿತ ಜೋಡಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತನ್ನ ಮುದ್ದಿನ ಹೆಂಡತಿಗೆ ಗಂಡ ಚಾಪ್‌ಸ್ಟಿಕ್‌ಗಳನ್ನು ಹೇಗೆ ಬಳಸಬೇಕೆಂದು ಹೇಳಿಕೊಡುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಈ ಕ್ಯೂಟ್ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ವಿಡಿಯೋದಲ್ಲಿರುವ ವ್ಯಕ್ತಿಯನ್ನು ಸಾಯಿ ಗುರುಂಗ್ ಮತ್ತು ಆತನ ಪತ್ನಿ ಅಕ್ಷಿತಾ ಗುರುಂಗ್ ಎಂದು ಗುರುತಿಸಲಾಗಿದೆ. ಈ ವೈರಲ್ ವಿಡಿಯೋವನ್ನು 1 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ಗಂಡ ಮತ್ತು ಹೆಂಡತಿ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದು, ಅಲ್ಲಿ ಅವರು ನೂಡಲ್ಸ್ ಬೌಲ್ ಅನ್ನು ಆರ್ಡರ್ ಮಾಡಿದ್ದಾರೆ. ನೂಡಲ್ಸ್ ತಿನ್ನಲು ಚಾಪ್‌ಸ್ಟಿಕ್‌ಗಳನ್ನು ಹೇಗೆ ಬಳಸಬೇಕೆಂದು ಗಂಡ ತನ್ನ ಹೆಂಡತಿಗೆ ಕಲಿಸುತ್ತಿದ್ದಾನೆ. ಗಂಡ ಹೇಳಿದಂತೆಯೇ ಹೆಂಡತಿ ಚಾಪ್ಸ್ಟಿಕ್ನಲ್ಲಿ ನೂಡಲ್ಸ್ ತಿನ್ನಲು ಪ್ರಯತ್ನಿಸಿದ್ದಾಳೆ.
View this post on Instagram
ಆ ರೆಸ್ಟೋರೆಂಟ್‌ನ ಅಧಿಕೃತ ಖಾತೆಯಿಂದ ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಹೊಸ ವಿಷಯಗಳನ್ನು ಕಲಿಯಲು ಗಂಡ ತನ್ನ ಹೆಂಡತಿಗೆ ಎಷ್ಟು ಮುದ್ದಾಗಿ ಸಹಾಯ ಮಾಡುತ್ತಿದ್ದಾನೆ ಎಂಬುದನ್ನು ಇನ್ಸ್ಟಾಗ್ರಾಂ ಬಳಕೆದಾರರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: Viral Video: ಕುಕ್ಕರ್ನಲ್ಲಿ ಕಾಫಿ ತಯಾರಿಸಿದ ವ್ಯಕ್ತಿ: ವೀಡಿಯೋ ವೈರಲ್
Viral Video: ಅಮ್ಮನ ಮದುವೆಯಲ್ಲಿ ಮಗಳ ಸಂಭ್ರಮ; ಈ ವಿಡಿಯೋ ನೋಡಿದರೆ ಅಚ್ಚರಿಯಾಗದಿರದು!