ಕೆಳಗೆ ಮೊಸಳೆಗಳ ಹಿಂಡು, ಮೇಲೆ ಹಿಡಿದುಕೊಂಡ ಮರವೂ ಗಟ್ಟಿಯಿಲ್ಲ, ಮುಂದೆ?

| Updated By: ಶ್ರೀದೇವಿ ಕಳಸದ

Updated on: Feb 09, 2023 | 2:56 PM

Crocodile : ಇಲ್ಲಿ ಏನು ನಡೀತಿದೆ ಅಂತಾನೇ ತಿಳೀತಿಲ್ಲ, ರೀಲ್​ ಮಾಡಲೆಂದೇ ಅವ ಇಲ್ಲಿಗೆ ಹೋಗಿದ್ದಾನೋ ಏನು ಎಂದು ಒಬ್ಬರು ಕೇಳಿದ್ದಾರೆ. ನನಗಂತೂ ಇದೊಂದು ದೃಶ್ಯಕಾವ್ಯದಂತೆ ಕಾಣುತ್ತಿದೆ ಎಂದು ಒಬ್ಬರು ತಮಾಷೆ ಮಾಡಿದ್ದಾರೆ.

ಕೆಳಗೆ ಮೊಸಳೆಗಳ ಹಿಂಡು, ಮೇಲೆ ಹಿಡಿದುಕೊಂಡ ಮರವೂ ಗಟ್ಟಿಯಿಲ್ಲ, ಮುಂದೆ?
ಹಿಡಿದ ಮರವೂ ಗಟ್ಟಿಯಿಲ್ಲ ಕೆಳಗೆ ನೋಡಿದರೆ ಇಷ್ಟೊಂದು ಮೊಸಳೆಗಳು
Follow us on

Viral Video : ಈ ವಿಡಿಯೋ ಎಲ್ಲಿಯದು? ಫ್ಲೊರಿಡಾ, ಚೆನ್ನೈ ಅಂತೆಲ್ಲಾ ಕೇಳುತ್ತಿದ್ದಾರೆ ನೆಟ್ಟಿಗರು. ಇದೊಂದು ಮೊಸಳೆಗಳ ಪಾರ್ಕ್​ ಎಂದು ತೋರುತ್ತದೆ. ಇಲ್ಲಿ ಏಣಿ ಏರಿ ನೇತಾಡುತ್ತಿರುವವನು ಪ್ರಾಣಿಪಾಲಕನಿರಬೇಕು. ಅಲ್ಲೇನೋ ಕೆಲಸದಲ್ಲಿ ನಿರತನಾಗಿದ್ದಾನೆ. ಆಹಾರ ಕೊಡುವನೋ ಎಂದು ಇವೆಲ್ಲವೂ ಅವನಿಗೆ ಮುತ್ತಿಗೆ ಹಾಕಿರಬೇಕು. ಈ ವಿಡಿಯೋ ಟ್ವಿಟರ್​ನಲ್ಲಿ ಹರಿದಾಡುತ್ತಿದೆ. ಆದರೆ ಇದರ ಮೂಲದ ಬಗ್ಗೆ ಮಾಹಿತಿಯಂತೂ ಇಲ್ಲ.

ಈ ವಿಡಿಯೋ ಅನ್ನು 2 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. 1,600ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. 168 ಜನರು ರೀಟ್ವೀಟ್ ಮಾಡಿದ್ದಾರೆ. ಕೆಲವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ ಇನ್ನೂ ಕೆಲವರು ಗಾಬರಿಯಾಗಿದ್ದಾರೆ. ಮುಂದಿನ ಸಲ ಬಹಳ ಹುಷಾರಾಗಿರು ತಮ್ಮಾ ಎಂದಿದ್ದಾರೆ ಕೆಲವರು. ಆದರೆ ಇವನು ಹೀಗೆ ಏಣಿ ಬಿಟ್ಟು ಇಳಿಯೋದಕ್ಕೆ ಈ ಮೊಸಳೆಗಳು ಬಿಟ್ಟವಾ? ಮುಂದೇನಾಯಿತು ಎಂದು ಯಾರಿಗೆ ಗೊತ್ತು?

ಇದನ್ನೂ ಓದಿ : ಮಾನವ, ಬೇಗ ಬಾ ಕ್ಲಾಸಿಗೆ ಹೊತ್ತಾಯ್ತು; ಝೀಬ್ರಾ ಕ್ರಾಸಿಂಗ್ ಮಾಡಲು ಕಲಿಯಬೇಕೆ?

ಇಲ್ಲಿ ಏನು ನಡೀತಿದೆ ಅಂತಾನೇ ತಿಳೀತಿಲ್ಲ, ರೀಲ್​ ಮಾಡಲೆಂದೇ ಅವ ಇಲ್ಲಿಗೆ ಹೋಗಿದ್ದಾನೋ ಏನು ಎಂದು ಒಬ್ಬರು ಕೇಳಿದ್ದಾರೆ. ನನಗಂತೂ ಇದೊಂದು ದೃಶ್ಯಕಾವ್ಯದಂತೆ ಕಾಣುತ್ತಿದೆ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಯಾರಾದರೂ ಹೇಳಿ, ಕೊನೆಗೆ ಈ ಮನುಷ್ಯನಿಗೆ ಏನಾಯಿತೆಂದು? ಎಂದು ಹಲವರು ಕೇಳಿದ್ದಾರೆ. ಇದನ್ನು ಅಷ್ಟೊಂದೆಲ್ಲಾ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಇನ್ನೂ ಕೆಲವರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:55 pm, Thu, 9 February 23