Valentine’s Day: ನೀವೇನೋ ಲವ್ ಮ್ಯಾರೇಜ್ ಆದ್ರಿ, ನನ್ನ ಬಗ್ಗೆಯೂ ಯೋಚಿಸಿ; ಡಿಸಿಎಂ ತೇಜಸ್ವಿ ಯಾದವ್​ಗೆ ಪತ್ರ ಬರೆದ ಯುವತಿ!

ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಪಿಂಕಿ ಎಂಬ ಯುವತಿ ಬಿಹಾರದ ಡಿಸಿಎಂ ತೇಜಸ್ವಿ ಯಾದವ್​​ಗೆ ಬರೆದ ಪತ್ರವೊಂದು ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Valentine's Day: ನೀವೇನೋ ಲವ್ ಮ್ಯಾರೇಜ್ ಆದ್ರಿ, ನನ್ನ ಬಗ್ಗೆಯೂ ಯೋಚಿಸಿ; ಡಿಸಿಎಂ ತೇಜಸ್ವಿ ಯಾದವ್​ಗೆ ಪತ್ರ ಬರೆದ ಯುವತಿ!
ತೇಜಸ್ವಿ ಯಾದವ್
Follow us
ಸುಷ್ಮಾ ಚಕ್ರೆ
| Updated By: Digi Tech Desk

Updated on:Feb 09, 2023 | 2:33 PM

ಪಾಟ್ನಾ: ಪ್ರೇಮಿಗಳ ದಿನಾಚರಣೆ (Valentine’s Day 2023) ನಮ್ಮ ದೇಶದ ಸಂಪ್ರದಾಯವಲ್ಲದಿದ್ದರೂ ಈ ದಿನವನ್ನು ಸಂಭ್ರಮದಿಂದ ಆಚರಿಸುವವರು ಬಹಳ ಜನರಿದ್ದಾರೆ. ‘ಅಯ್ಯೋ, ನನಗೆ ಯಾರೂ ಜೋಡಿಯೇ ಇಲ್ಲವಲ್ಲ’ ಎಂದು ಬೇಸರಿಸಿಕೊಳ್ಳುವ ಸಿಂಗಲ್​ಗಳೂ ಬೇಕಾದಷ್ಟಿದ್ದಾರೆ. ಆದರೆ, ಬಿಹಾರದ ಯುವತಿಯದ್ದು ಬೇರೆಯದೇ ಕತೆ. ಆಕೆಯ ಒನ್​ಸೈಡ್ ಲವ್ ಸ್ಟೋರಿ (One Sided Love Story) ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿದೆ. ಇದಕ್ಕೆ ಕಾರಣ ಆಕೆ ಬಿಹಾರರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ಅವರಿಗೆ ಬರೆದ ಒಂದು ಪತ್ರ!

ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಪಿಂಕಿ ಎಂಬ ಯುವತಿ ಡಿಸಿಎಂ ತೇಜಸ್ವಿ ಯಾದವ್​​ಗೆ ಬರೆದ ಪತ್ರವೊಂದು ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ಗೆ ಪಿಂಕಿ ಎಂಬ ಹುಡುಗಿ ಬರೆದ ಪತ್ರದ ಬಗ್ಗೆ ಹಲವರು ಮಾತನಾಡುತ್ತಿದ್ದಾರೆ. ತನ್ನ ಒನ್ ಸೈಡ್ ಲವ್​ ಸ್ಟೋರಿಗೆ ನಿರುದ್ಯೋಗವೇ ಕಾರಣ ಎಂದಿರುವ ಪಿಂಕಿ ತನಗೆ ಸಹಾಯ ಮಾಡಿ, ತನ್ನ ಪ್ರೇಮಿಯೊಂದಿಗೆ ಒಂದಾಗಲು ಸಹಾಯ ಮಾಡಲು ಕೋರಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್​ಗೆ ಪತ್ರವನ್ನು ಬರೆದಿದ್ದಾಳೆ.

ಇದನ್ನೂ ಓದಿ: Valentine’s Day: ಬ್ರೇಕಪ್ ಆದ ಲವರ್​ಗಳಿಗೆ ಸುವರ್ಣಾವಕಾಶ; ಬೆಕ್ಕಿನ ಮೂತ್ರದ ಬಾಕ್ಸ್​ಗೆ ನಿಮ್ಮ ಮಾಜಿ ಪ್ರೇಮಿಯ ಹೆಸರಿಡಬಹುದು!

ಬಿಹಾರ ಸರ್ಕಾರದ ವ್ಯವಸ್ಥೆ ತಂದಿರುವ ಸಮಸ್ಯೆಗಳು ಮತ್ತು ನಿರುದ್ಯೋಗವನ್ನು ಈ ಪತ್ರದಲ್ಲಿ ಲೇವಡಿ ಮಾಡಲಾಗಿದೆ. ಈ ಪತ್ರದಲ್ಲಿ ಪಿಂಕಿ ತಾನು ಲೇಖಕ ಪ್ರಭಾತ್ ಬಂಧುಲ್ಯ ಅವರನ್ನು ಪ್ರೀತಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಬಿಹಾರದ ಔರಂಗಾಬಾದ್‌ನ ಬರಹಗಾರರಾಗಿರುವ BHUನ ಕಾನೂನು ಕಾಲೇಜಿನ ವಿದ್ಯಾರ್ಥಿ ಪ್ರಭಾತ್ ಬಂಧುಲ್ಯ ಅವರು “ಬನಾರಸ್ ವಾಲಾ ಇಷ್ಕ್” ಪುಸ್ತಕದ ಲೇಖಕರಾಗಿದ್ದಾರೆ. ಕಳೆದ 2 ವರ್ಷಗಳಿಂದ ಅವರು ಟಿವಿಯಲ್ಲಿ ಧಾರಾವಾಹಿ ಮತ್ತು ಸಿನಿಮಾ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ.

Valentine's Day:

ತೇಜಸ್ವಿ ಯಾದವ್​​ಗೆ ಯುವತಿ ಬರೆದಿರುವ ಪತ್ರ

ಪತ್ರದಲ್ಲಿ ಏನಿದೆ?:

‘ಆತ್ಮೀಯ ತೇಜಸ್ವಿ ಯಾದವ್​ ಅವರೇ, ಈ ಕ್ಷಣದಲ್ಲಿ ನಾನು ಎಷ್ಟು ಚಡಪಡಿಕೆಯಲ್ಲಿದ್ದೇನೆ ಎಂಬುದು ನಿಮಗೆ ತಿಳಿದಿದೆಯೇ? ನೀವೇನೋ ಲವ್ ಮ್ಯಾರೇಜ್ ಆದಿರಿ. ಆದರೆ, ನನ್ನ ಕತೆಯನ್ನೂ ಕೇಳಿ. ನಾನು ನಿರುದ್ಯೋಗಿಯಾಗಿದ್ದರಿಂದ ನಿಮ್ಮಂತೆ ಪ್ರೇಮ ವಿವಾಹವಾಗಲು ಸಾಧ್ಯವಿಲ್ಲ. 4 ವರ್ಷಗಳಿಂದ ಪ್ರಭಾತ್ ಬಂಧುಲ್ಯ ಅವರನ್ನು ನಾನು ಪ್ರೀತಿಸುತ್ತಿದ್ದೇನೆ. ಆದರೆ, ನನ್ನದು ಒನ್ ಸೈಡ್ ಲವ್ ಸ್ಟೋರಿ. ನನಗೆ ಕೆಲಸ ಸಿಕ್ಕಿದರೆ ನಾನು ಅವರಿಗೆ ಪ್ರಪೋಸ್ ಮಾಡುತ್ತೇನೆ. ಆದರೆ, ನನಗೆ ಕೆಲಸ ಸಿಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.

ಇದನ್ನೂ ಓದಿ: Valentine’s Love Horoscope: ಪ್ರೇಮಿಗಾಗಿ ಹುಡುಕುತ್ತಿದ್ದೀರಾ?; ಈ ರಾಶಿಯವರು ನಿಮಗೆ ಬೆಸ್ಟ್ ಜೋಡಿಯಾಗಬಹುದು!

ನನ್ನ ಅಪ್ಪ ನನ್ನ ಮದುವೆಯ ತಯಾರಿಯಲ್ಲಿ ನಿರತರಾಗಿದ್ದರೆ, ನಾನು ಕೆಲಸದ ಹುಡುಕಾಟದಲ್ಲಿ ತೊಡಗಿದ್ದೇನೆ. ಮದುವೆಯಾಗಿ ನಮ್ಮ ಗೆಳೆಯರಿಗೆಲ್ಲ ಮಕ್ಕಳಾಗಿವೆ. ನಾನು ಮಾತ್ರ ನನ್ನ ಪ್ರೇಮಿಗೆ ಪ್ರಪೋಸ್ ಮಾಡಲಾಗದೆ ಇನ್ನೂ ಕಾಯುತ್ತಲೇ ಇದ್ದೇನೆ. ನೀವು ಸಹಾಯ ಮಾಡಬಹುದು ಎಂಬ ಭರವಸೆಯೊಂದಿಗೆ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ದಯವಿಟ್ಟು ಸಾಧ್ಯವಾದಷ್ಟು ಬೇಗ ಉದ್ಯೋಗವನ್ನು ಹುಡುಕುವಲ್ಲಿ ನನಗೆ ಸಹಾಯ ಮಾಡಿ. ಇಲ್ಲದಿದ್ದರೆ ನಾನು ಪ್ರೀತಿಸುತ್ತಿರುವ ಹುಡುಗ ಬೇರೆಯವರೊಂದಿಗೆ ಮದುವೆಯಾಗುತ್ತಾನೆ.

ಇಂತಿ,

ನಿಮ್ಮ ಮತದಾರಳು ಹಾಗೂ ಬರಹಗಾರ ಪ್ರಭಾತ್ ಬಂಧುಲ್ಯ ಅವರ ಒನ್​ ಸೈಡೆಡ್ ಲವರ್- ಪಿಂಕಿ’

ಈ ಪತ್ರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:28 pm, Thu, 9 February 23

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್