ಫೋಟೋ ಕ್ಲಿಕ್ ಮಾಡಿದಷ್ಟೂ ರಸ್ತೆ ಸ್ವಚ್ಛವಾಗುತ್ತವೆ; ನಾಗಾಲ್ಯಾಂಡ್ ಸಚಿವರ ಹಾಸ್ಯಪ್ರಜ್ಞೆ ಕೊಂಡಾಡುತ್ತಿರುವ ನೆಟ್ಟಿಗರು
Nagaland : ನೀವು ಹೀಗೆ ಗುಡಿಸುತ್ತಲೇ ಇರಿ ತೂಕ ಕಡಿಮೆಯಾಗುತ್ತದೆ ಎಂದು ಒಬ್ಬರು. ಅಣ್ಣಾ! ಎಂಥ ಪ್ರೊ ಪೊಲಿಟಿಕ್ಸ್ ಇದು, ಖಂಡಿತ ಈ ವೀಕೆಂಡ್ನಲ್ಲಿ ನಿಮಗೆ ವ್ಯಾಲೆಂಟೈನ್ ಸಿಗಬಹುದು ಎಂದು ಇನ್ನೊಬ್ಬರು. ನೀವೇನಂತೀರಿ?
Viral Video : ನಾಗಾಲ್ಯಾಂಡ್ನ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ (Temjen Imna Along) ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿಚಾರಧಾರೆಗಳಿಂದ, ಕ್ರಿಯಾಶೀಲ ಚಟುವಟಿಕೆಗಳಿಂದ ನಿರಂತರವಾಗಿ ಗಮನ ಸೆಳೆಯುತ್ತಿರುತ್ತಾರೆ. ನೆಟ್ಟಿಗರೊಂದಿಗೆ ಮುಕ್ತವಾಗಿ ಪ್ರತಿಕ್ರಿಯಿಸುತ್ತಿರುತ್ತಾರೆ. ಈ ಸಲ ಇವರು ನಾಗಾಲ್ಯಾಂಡ್ನ ಬೀದಿಗಳನ್ನು ಗುಡಿಸುವಲ್ಲಿ ನಿರತರಾಗಿರುವ ತಮ್ಮ ಫೋಟೋ ಒಂದನ್ನು ಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ಇವರ ಹಾಸ್ಯಪ್ರಜ್ಞೆಯನ್ನು ಕೊಂಡಾಡುತ್ತಿದೆ.
Photo के बहाने ही सही साफ़ किया करो ? जितनी Photos खिचोगे, उतनी ही गंदगी साफ़ होगी।
ಇದನ್ನೂ ಓದಿKeep Clicking ? Keep Cleaning ? pic.twitter.com/nZWGzIenXt
— Temjen Imna Along (@AlongImna) February 8, 2023
ಫೋಟೋ ತೆಗೆದಷ್ಟೂ ರಸ್ತೆಗಳು ಸ್ವಚ್ಛಗೊಳ್ಳುತ್ತವೆ. ಹಾಗಾಗಿ ಎಷ್ಟು ಫೋಟೋ ತೆಗೆಯುತ್ತೀರೋ ಅಷ್ಟು ಕೊಳೆ ಕಳೆದು ರಸ್ತೆಗಳು ಸ್ಚಚ್ಛವಾಗುತ್ತವೆ ಎಂಬ ಶೀರ್ಷಿಕೆಯನ್ನು ಈ ಫೋಟೋಗೆ ಕೊಟ್ಟಿದ್ದಾರೆ ತೆಮ್ಜೆನ್. ನಿನ್ನೆ ಈ ಫೋಟೋ ಟ್ವೀಟ್ ಮಾಡಿದ್ಧಾರೆ. 6 ಲಕ್ಷಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 22,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. 1,500 ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ಭಲೇ ಮಗಾ ಮೆಚ್ಚಿದೆ ನಿನ್ನ ಹಾಡು! ನಾಗಾಲ್ಯಾಂಡ್ ಸಚಿವರು ಹಂಚಿಕೊಂಡ ಈ ವಿಡಿಯೋ ನೋಡಿ
ವಾವ್! ಇದನ್ನು ನಾನು ಪ್ರೀತಿಸುತ್ತಿದ್ದೇನೆ. ಕ್ಲಿಕ್ ಮಾಡುತ್ತಲೇ ಇರಿ, ಸ್ವಚ್ಛಗೊಳಿಸುತ್ತಲೇ ಇರಿ ಎಂದು ಒಬ್ಬರು ಹೇಳಿದ್ದಾರೆ. ಸರ್ ನಿಮ್ಮ ಹಾಸ್ಯದ ಲೆವೆಲ್ಲೇ ಬೇರೆ ನಿಮಗೆ ಹ್ಯಾಟ್ಸ್ ಆಫ್. ಈ ಫೋಟೋ ಸೂಕ್ತ ಸಂದೇಶವನ್ನು ತಲುಪಿಸುತ್ತಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನಿಮ್ಮಲ್ಲಿರುವ ಉತ್ತಮ ಹಾಸ್ಯಪ್ರಜ್ಞೆ, ಸಕಾರಾತ್ಮಕತೆಯನ್ನು ನಾವು ಪ್ರೀತಿಸುತ್ತೇವೆ ಎಂದು ಮಗದೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ : ನಾಗಾಲ್ಯಾಂಡ್ನಲ್ಲಿ ಸಸ್ಯಾಹಾರ ಲಭ್ಯವೆ? ಟ್ವಿಟರ್ನಲ್ಲಿ ತರಕಾರಿಯನ್ನೆಲ್ಲ ತಂದುಸುರಿದ ಸಚಿವ
ಗಿಲ್ಲಿ ದಾಂಡು ಸ್ಟೈಲ್ನಲ್ಲಿ ಸ್ವಚ್ಛಗೊಳಿಸುವ ರೀತಿಯನ್ನು ಮೊದಲ ಬಾರಿಗೆ ನೋಡುತ್ತಿದ್ದೇನೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಹೀಗೇ ಮಾಡಿ ನಿಮ್ಮ ತೂಕವೂ ಕಡಿಮೆಯಾಗುತ್ತದೆ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. ಅಣ್ಣಾ, ಎಂಥ ಪ್ರೊ ಪೊಲಿಟಿಕ್ಸ್ ಇದು, ಖಂಡಿತ ಈ ವೀಕೆಂಡ್ನಲ್ಲಿ ನಿಮ್ಮ ವ್ಯಾಲೆಂಟೈನ್ ನಿಮಗೆ ಸಿಗಬಹುದು ಎಂದಿದ್ದಾರೆ ಇನ್ನೂ ಒಬ್ಬರು.
ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:07 am, Thu, 9 February 23