Viral Video: ಚೈನೀಸ್​ ಖಾದ್ಯದಲ್ಲಿ ಜೀವಂತ ಕಪ್ಪೆಮರಿ; ಗ್ರಾಹಕರ ಕ್ಷಮೆ ಕೇಳಿದ ರೆಸ್ಟೋರೆಂಟ್

| Updated By: ಶ್ರೀದೇವಿ ಕಳಸದ

Updated on: May 31, 2023 | 11:00 AM

Live Frog : ಇನ್ನೇನು ಕೊನೆಯ ತುತ್ತಿನಲ್ಲಿರಬೇಕಾದರೆ ರಸದೊಳಗೆ ಕಪ್ಪೆಯಮರಿಯೊಂದು ಕೈಕಾಲು ಬಡಿಯುವುದು ಕಂಡಿದೆ! ತಕ್ಷಣವೇ ಟ್ವೀಟ್ ಮಾಡಿದ್ದಾನೆ ಈ ವ್ಯಕ್ತಿ. ಈ ವಿಡಿಯೋ ಈತನಕ 6.9 ಮಿಲಿಯನ್​ ಜನರಿಂದ ವೀಕ್ಷಣೆ ಗಳಿಸಿದೆ. 

Viral Video: ಚೈನೀಸ್​ ಖಾದ್ಯದಲ್ಲಿ ಜೀವಂತ ಕಪ್ಪೆಮರಿ; ಗ್ರಾಹಕರ ಕ್ಷಮೆ ಕೇಳಿದ ರೆಸ್ಟೋರೆಂಟ್
ಚೈನೀಸ್​ ಖಾದ್ಯದಲ್ಲಿ ಪತ್ತೆಯಾದ ಜೀವಂತ ಕಪ್ಪೆಮರಿ
Follow us on

Japan : ಕೂದಲು, ಸತ್ತ ಇರುವೆ, ಜಿರಳೆ, ಸೊಳ್ಳೆ, ನೊಣ ಇವೆಲ್ಲ ಭಾರತೀಯ ಹೋಟೆಲ್​ನ ಖಾದ್ಯಗಳಲ್ಲಿ ಬರುವುದು ಸಹಜ. ಆದರೆ ಚೀನಾದ ಖಾದ್ಯಗಳಲ್ಲಿ? ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಜೀವಂತ ಕಪ್ಪೆಮರಿಯೊಂದು ಉಡಾನ್​ (Udan) ಖಾದ್ಯದಲ್ಲಿ ಕಾಣಿಸಿಕೊಂಡಿದೆ. ವಿಷಯ ತಿಳಿದ ತಕ್ಷಣವೇ ರೆಸ್ಟೋರೆಂಟ್​ ಈ ಆಹಾರೋತ್ಪನ್ನದ ಮಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ನಂತರ ಸಂಬಂಧಿಸಿದ ಗ್ರಾಹಕರಲ್ಲಿ ಕ್ಷಮೆ ಕೇಳಿತು.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಜಪಾನಿನ ವ್ಯಕ್ತಿಯೊಬ್ಬ ಪ್ರವಾಸದಲ್ಲಿದ್ದಾಗ ಮರುಗಮೆ ಸೀಮೆನ್ಸ್ (Marugame Seimen’s) ಕಂಪೆನಿಯ ಸ್ಪೈಸಿ​ ದಂಡನ್​ ಸಲಾಡ್​ ಉಡಾನ್​ ಖಾದ್ಯವನ್ನು ಆರ್ಡರ್ ಮಾಡಿದ್ದಾನೆ. ಇನ್ನೇನು ಕೊನೆಯ ತುತ್ತಿನಲ್ಲಿರಬೇಕಾದರೆ ಉಳಿದ ರಸದೊಳಗೆ ಕಪ್ಪೆಯ ಮರಿಯೊಂದು ಕೈಕಾಲು ಬಡಿಯುತ್ತ ಸುತ್ತುತ್ತಿರುವುದು ಕಂಡಿದೆ! ತಕ್ಷಣವೇ ವಿಡಿಯೋ ಮತ್ತು ಚಿತ್ರವನ್ನು ಟ್ವೀಟ್ ಮಾಡಿದ್ದಾನೆ. ಈ ವಿಡಿಯೋ ಈತನಕ 6.9 ಮಿಲಿಯನ್​ ಜನರಿಂದ ವೀಕ್ಷಣೆ ಗಳಿಸಿದೆ.

ಇದನ್ನೂ ಓದಿ : Viral Video: ಎಗ್​ ಪ್ಲ್ಯಾಂಟ್; ಇದರ ಹೆಸರು ಈಗ ಸಾರ್ಥಕವಾಯಿತು ಎನ್ನುತ್ತಿರುವ ನೆಟ್ಟಿಗರು

ಈ ಸುದ್ದಿ ಟ್ವಿಟರ್​ತುಂಬಾ ಹರಡಿ ಕೊನೆಗೆ ಈ ಖಾದ್ಯ ತಯಾರಿಸಿದ ರೆಸ್ಟೋರೆಂಟ್​ಗೆ ತಲುಪಿದೆ. ತಕ್ಷಣವೇ ರೆಸ್ಟೋರೆಂಟ್​ ಗ್ರಾಹಕರ ಕ್ಷಮೆ ಕೇಳಿದೆ. ಮೂರು ಗಂಟೆಗಳ ಕಾಲ ರೆಸ್ಟೋರೆಂಟ್​ ಅನ್ನು ಸ್ಥಗಿತಗೊಳಿಸಲಾಗಿದೆ. ಆ ನಂತರ ರಾತ್ರಿ ಯಥಾಪ್ರಕಾರ ಗ್ರಾಹಕರು ಈ ರೆಸ್ಟೋರೆಂಟ್​ಗೆ ಬರಲಾರಂಭಿಸಿದ್ದಾರೆ. ಸಲಾಡ್​ಯುಕ್ತ ಪದಾರ್ಥಗಳನ್ನು ಸೇವಿಸಿದ್ದಾರೆ.

ಇದನ್ನೂ ಓದಿ : Viral: ಅತ್ತೆ ಸೊಸೆ ಒಂದೇ ಸೀರೆ; ಇದು ನಿಜಕ್ಕೂ ಆರ್ಥಿಕ ಹಿಂಜರಿಕೆ ಎನ್ನುತ್ತಿರುವ ನೆಟ್ಟಿಗರು

ಸಲಾಡ್​ನಲ್ಲಿ ಈ ಕಪ್ಪೆ ಅಡಗಿ ಕುಳಿತಿರುವ ಸಾಧ್ಯತೆ ಇದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಹಿಂದೆ ನಾನು ಲೆಟ್ಯೂಸ್​ ಖರೀದಿಸುವಾಗ ಚೀಲದ ತಳದಲ್ಲಿ ದೊಡ್ಡದೊಂದು ಕಪ್ಪೆಯೇ ಕುಳಿತಿತ್ತು. ಇತ್ತೀಚೆಗೆ ಆಹಾರದಲ್ಲಿ ಕಪ್ಪೆಗಳ ಹಾವಳಿ ಜಾಸ್ತಿ ಆಗಿದೆ. ನಾನು ಇಜಕಾಯಾದಲ್ಲಿ ಸಲಾಡ್ ಆರ್ಡರ್ ಮಾಡಿದಾಗ ಎಲೆಕೋಸಿನಲ್ಲಿ ಕಂಬಳಿ ಹುಳು ಬಂದಿತ್ತು ಅಂತೆಲ್ಲ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ ಜನ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:55 am, Wed, 31 May 23