ಮುಂಗುಸಿ ಮತ್ತು ನಾಗರಹಾವಿನ ಕಾದಾಟ, ಯಾರು ಗೆಲ್ಲಬಹುದು?

Fight Between Cobra and Mongoose : ಒಂದನ್ನೊಂದು ಆಕ್ರಮಿಸಿ ಸೆಣಸಾಡುವ ರೀತಿ ಮೈನವಿರೇಳಿಸುತ್ತದೆ. ಸಾಮಾನ್ಯವಾಗಿ ನಾಗರಹಾವು ಮತ್ತು ಮುಂಗುಸಿಗಳ ಕಾದಾಟದಲ್ಲಿ ಸೋಲು ನಾಗರಹಾವಿಗೇ. ಇಲ್ಲಿ ಯಾರಿಗೆ ಗೆಲುವು? ವಿಡಿಯೋ ನೋಡಿ.

ಮುಂಗುಸಿ ಮತ್ತು ನಾಗರಹಾವಿನ ಕಾದಾಟ, ಯಾರು ಗೆಲ್ಲಬಹುದು?
ನಾಗರಹಾವು ಮುಂಗುಸಿ ಕಾದಾಟ
Updated By: ಶ್ರೀದೇವಿ ಕಳಸದ

Updated on: Oct 11, 2022 | 5:59 PM

Viral Video : ನಾಗರಹಾವು ಮತ್ತು ಮುಂಗುಸಿ ಬದ್ಧ ವೈರಿಗಳು. ಇವುಗಳು ಕಾದಾಟಕ್ಕಿಳಿದರೆ ಸುಲಭಕ್ಕೆ ಮುಗಿಯುವಂಥದ್ದಲ್ಲ. ಮನುಷ್ಯನನ್ನು ಕೇವಲ 20 ನಿಮಿಷದಲ್ಲಿ ಕೊಲ್ಲುವಂತಹ ಉಗ್ರಶಕ್ತಿ ಇರುವ ನಾಗರಹಾವು ಮುಂಗುಸಿಗೆ ಹೆದರುತ್ತದೆ! ಇನ್ನು ಕಾದಾಟದಲ್ಲಿ ನಾಗರಹಾವು ಮುಂಗುಸಿಯನ್ನು ಕಚ್ಚಿದರೂ ಮುಂಗುಸಿ ಬದುಕುಳಿಯುತ್ತದೆ. ಬಹುಪಾಲು ಸಂದರ್ಭದಲ್ಲಿ ಗೆಲುವು ಮುಂಗುಸಿಯದೇ. ಭಾರತದಲ್ಲಿರುವ ಮುಂಗುಸಿಗಳು ಸಾಮಾನ್ಯವಾಗಿ ನೋಡಲು ಬೂದು ಬಣ್ಣದಿಂದ ಕೂಡಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ನಾಗರಹಾವು ಮತ್ತು ಮುಂಗುಸಿಯ ಸೆಣಸಾಟದ ತೀವ್ರತೆ ಹೇಗಿದೆ ಎಂದು ನೋಡಬಹುದು.

ಒಂದನ್ನೊಂದು ಕಚ್ಚುತ್ತ ಉಗ್ರ ಹೋರಾಟಕ್ಕಿಳಿಯುವ ಈ ವಿಡಿಯೋ ಅನ್ನು ಈಗಾಗಲೇ 1.1 ಮಿಲಿಯನ್​ ಜನರು ಯೂಟ್ಯೂಬ್​ನಲ್ಲಿ ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡುತ್ತಿದ್ದರೆ ಇವುಗಳ ಸೆಣಸಾಟದ ವೇಗಕ್ಕೆ ಉಸಿರು ಏರುಪೇರಾಗುವುದಂತೂ ಗ್ಯಾರಂಟಿ! ಎಷ್ಟು ಬಾರಿ ಕಚ್ಚಿಸಿಕೊಂಡರೂ ಪರಸ್ಪರ ಶರಣಾಗತಿಯಂತೂ ಸಾಧ್ಯವೇ ಇಲ್ಲ. ಮತ್ತೆ ಮತ್ತೆ ಆಕ್ರಮಣ ಮಾಡುತ್ತಲೇ ಇರುತ್ತವೆ. ಯುದ್ಧದ ನಿಯಮದಂತೆ ಕೊನೆಗೊಬ್ಬರು ಸೋಲಲೇಬೇಕು. ಯಾರು ಗೆದ್ದಿದ್ದು, ನೋಡಿದಿರಾ?

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸಾಮಾನ್ಯವಾಗಿ ಈ ಮುಂಗುಸಿಗಳು ಹೇಗೆ ತಮ್ಮ ವಿಜಯೋತ್ಸಾಹ ಆಚರಿಸುತ್ತವೆ ಎನ್ನುವುದನ್ನೂ ಈ ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 5:53 pm, Tue, 11 October 22