ಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ಅಮ್ಮನಿಗಿಂತಲೂ ಅಪ್ಪನೆಂದರೆ ಅಚ್ಚುಮೆಚ್ಚು. ಅಪ್ಪಂದಿರಿಗೂ ಅಷ್ಟೆ ಮಗನಿಗಿಂತ ಮಗಳೆಂದರೆ ಒಂದು ಮುಷ್ಠಿ ಜಾಸ್ತಿಯೇ ಪ್ರೀತಿ. ಮೊದಲ ಬಾರಿಗೆ ವಿಮಾನ ಹತ್ತಿದ ಪುಟ್ಟ ಹುಡುಗಿಯೊಬ್ಬಳು ಆ ವಿಮಾನದಲ್ಲಿ ತನ್ನ ಅಪ್ಪನೇ ಪೈಲಟ್ ಎಂದು ಗೊತ್ತಾಗುತ್ತಿದ್ದಂತೆ ಖುಷಿಯಿಂದ ಸಂಭ್ರಮಿಸಿದ್ದಾಳೆ. ಕೈಯಲ್ಲಿ ವಿಮಾನದ ಟಿಕೆಟ್ ಹಿಡಿದು, ಸೀಟ್ ಮೇಲೆ ಹತ್ತಿ ನಿಂತು ಪೈಲಟ್ ಡ್ರೆಸ್ನಲ್ಲಿದ್ದ ಅಪ್ಪನನ್ನು ಕರೆಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಮೊದಲ ಬಾರಿಗೆ ವಿಮಾನ ಹತ್ತಿದ್ದ ಆ ಹುಡುಗಿಗೆ ಅದರ ಖುಷಿ ಒಂದೆಡೆಯಾದರೆ ವಿಮಾನದೊಳಗೆ ಬಂದ ಕೂಡಲೆ ಪೈಲಟ್ ಸೀಟಿನಿಂದ ಎದ್ದು ಹೊರಗೆ ಬಂದ ಅಪ್ಪನನ್ನು ನೋಡಿ ಆದ ಖುಷಿ ಇನ್ನೊಂದೆಡೆ. ದೆಹಲಿಯ ಗೋ ಏರ್ ವಿಮಾನದಲ್ಲಿ ಅಪ್ಪ-ಮಗಳ ಈ ಸಂಭ್ರಮದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಮನ ಗೆದ್ದಿದೆ. ಮುದ್ದಾದ ಈ ವಿಡಿಯೋ ನೋಡಿದವರು ಆ ಪುಟ್ಟ ಹುಡುಗಿಯ ಖುಷಿ ಕಂಡು ತಾವೂ ಖುಷಿಯಾಗಿದ್ದಾರೆ.
ಶನಾಯ ಎಂಬ ಪುಟ್ಟ ಹುಡುಗಿ ‘ಪಪ್ಪಾ’ ಎಂದು ಜೋರಾಗಿ ಅಪ್ಪನನ್ನು ಕರೆಯುತ್ತಿರುವ ವಿಡಿಯೋ ಇಲ್ಲಿದೆ. ಮಗಳಿಗೆ ಸರ್ಪ್ರೈಸ್ ಕೊಡಲೆಂದೇ ಅಪ್ಪ ಪೈಲಟ್ ಸೀಟಿನಿಂದ ಹೊರಗೆ ಬಂದು ನಿಂತಿದ್ದರು. ಬೇರೆ ಪ್ರಯಾಣಿಕರು ತಮ್ಮ ಸೀಟಿನತ್ತ ಹೋಗುತ್ತಿರುವಾಗ ಆ ಹುಡುಗಿಯ ಅಪ್ಪ ತನ್ನ ಮಗಳತ್ತ ದೂರದಿಂದಲೇ ಕೈ ಬೀಸಿ, ಸ್ಮೈಲ್ ಮಾಡಿದ್ದಾರೆ.
ಈ ವಿಡಿಯೋಗೆ ಇನ್ಸ್ಟಾಗ್ರಾಂನಲ್ಲಿ 1.4 ಲಕ್ಷಕ್ಕೂ ಹೆಚ್ಚು ಲೈಕ್ಗಳು ಬಂದಿವೆ. 12 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ನೀವಿನ್ನೂ ಈ ವಿಡಿಯೋ ನೋಡದಿದ್ದರೆ ನೋಡಿಬಿಡಿ.
ಇದನ್ನೂ ಓದಿ: Viral Video: ನವರಾತ್ರಿ ದಿನವೇ 2 ತಲೆ, 3 ಕಣ್ಣುಗಳಿರುವ ಕರು ಜನನ; ದುರ್ಗೆಯ ಅವತಾರವೆಂದು ಪೂಜಿಸಿದ ಜನರು!
Viral Video: ಮನುಷ್ಯರಂತೇ ಕುಳಿತು ಬಟ್ಟೆ ಒಗೆಯುವ ಈ ಚಿಂಪಾಜಿಯ ವಿಡಿಯೋವನ್ನೊಮ್ಮೆ ನೀವು ನೋಡಲೇಬೇಕು!