ಹಮೀರ್‌ಪುರ: ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ವ್ಯಕ್ತಿಯೊಬ್ಬರು ಬೃಹತ್ ಮೊಸಳೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಆ ವ್ಯಕ್ತಿ ಗೋಣಿ ಚೀಲದಂತೆ ಹೆಗಲ ಮೇಲೆ ಮೊಸಳೆಯನ್ನು
ಹೊತ್ತುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಕೆಲ ದಿನಗಳ ಹಿಂದೆ ಗ್ರಾಮದ ಹೊಲ ಒಂದರಲ್ಲಿ ಮೊಸಳೆ ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರು ಮೊಸಳೆ ದಾಳಿಯ ಭೀತಿಯಲ್ಲಿ ಜೀವನ ನಡೆಸುತ್ತಿದ್ದರು. ಈ ಬಗ್ಗೆ ಅರಣ್ಯ ಇಲಾಖೆಗೆ ಕರೆ ಮಾಡಿ ಮೊಸಳೆಯನ್ನು ಸೆರೆಹಿಡಿಯಲು ಒತ್ತಾಯಿಸಿದ್ದರು.
मगरमच्छ को कंधे पर लादकर ले जाते युवक का वीडियो सोशल मीडिया पर तेजी से हो वायरल !!
बीते तीन हफ्ते से गांव में दहशत फैलाए था विशालकाय मगरमच्छ !!
तीन हफ्ते की कड़ी निगरानी के बाद वनविभाग की टीम और एक्सपर्ट लोगों ने मगरमच्छ को पकड़ा !!
हमीरपुर का वायरल वीडियो !!#ViralVideo… pic.twitter.com/jKT6eJxUjX— MANOJ SHARMA LUCKNOW UP🇮🇳🇮🇳🇮🇳 (@ManojSh28986262) November 26, 2024
ಇದನ್ನೂ ಓದಿ: ಡೀಪ್ ಫ್ರೈಡ್ ಫ್ರಾಗ್; ವಿಶಿಷ್ಟವಾದ ಕಪ್ಪೆ ಪಿಜ್ಜಾವನ್ನು ಪರಿಚಯಿಸಿದ ಪಿಜ್ಜಾ ಹಟ್
ಇದೀಗ ಅರಣ್ಯ ಇಲಾಖೆಯ ಸಿಬ್ಬಂದಿ ಮೊಸಳೆಯನ್ನು ಹಿಡಿದಿದ್ದು, ಮೊಸಳೆಯ ಬಾಯಿ, ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಲಾಗಿದೆ. ನಂತರ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಹೆದರದೆ ಧೈರ್ಯವಾಗಿ ಮೊಸಳೆಯನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ಹೊಲದಿಂದ ಹೊರಗೆ ಹೋಗಿದ್ದಾರೆ. ನಂತರ ಮೊಸಳೆಯನ್ನು ಸುರಕ್ಷಿತ ಸ್ಥಳದಲ್ಲಿ ಬಿಟ್ಟಿರುವುದಾಗಿ ಎಂದು ವರದಿಯಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ