Viral: ಡೀಪ್‌ ಫ್ರೈಡ್‌ ಫ್ರಾಗ್; ವಿಶಿಷ್ಟವಾದ ಕಪ್ಪೆ ಪಿಜ್ಜಾವನ್ನು ಪರಿಚಯಿಸಿದ ಪಿಜ್ಜಾ ಹಟ್‌

ಯುವಕರು, ಮಕ್ಕಳಿಗಂತೂ ಪಿಜ್ಜಾ ಎಂದ್ರೆ ಬಲು ಇಷ್ಟ. ಚೀಸ್‌, ಮಶ್ರೂಮ್‌, ಚಿಕನ್‌ ಇತ್ಯಾದಿ ಪಿಜ್ಜಾಗಳನ್ನೆಲ್ಲಾ ಸವಿದಿರುತ್ತೀರಿ ಅಲ್ವಾ. ಆದ್ರೆ ಇದೀಗ ಕಪ್ಪೆ ಪಿಜ್ಜಾ ಕೂಡಾ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಈ ಸುದ್ದಿಯನ್ನು ಕೇಳಿ ಪಿಜ್ಜಾ ಪ್ರಿಯರು ಫುಲ್‌ ಶಾಕ್‌ ಆಗಿದ್ದಾರೆ. ಚೀನಾದ ಪಿಜ್ಜಾ ಹಟ್‌ ಡೀಪ್‌ ಫ್ರೈಡ್‌ ಫ್ರಾಗ್‌ ಎಂಬ ಹೊಸ ಬಗೆಯ ಕಪ್ಪೆಯ ಪಿಜ್ಜಾವನ್ನು ಪರಿಚಯಿಸಿದ್ದು, ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral: ಡೀಪ್‌ ಫ್ರೈಡ್‌ ಫ್ರಾಗ್; ವಿಶಿಷ್ಟವಾದ ಕಪ್ಪೆ ಪಿಜ್ಜಾವನ್ನು ಪರಿಚಯಿಸಿದ ಪಿಜ್ಜಾ ಹಟ್‌
ವೈರಲ್​​ ಪೋಸ್ಟ್​
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 26, 2024 | 12:33 PM

ಚೀನಾ ತನ್ನ ವಿಲಕ್ಷಣ ಆಹಾರ ಪದ್ಧತಿಯಿಂದಲೇ ಫೇಮಸ್‌ ಆಗಿದೆ. ಹುಳ, ಕಪ್ಪೆ, ಕೀಟಗಳಿಂದ ಹಿಡಿದು ಹಾವು, ನಾಯಿ ಮಾಂಸದವರೆಗೆ ವಿಲಕ್ಷಣ ಆಹಾರಗಳನ್ನು ತಿನ್ನುವುದೆಂದರೆ ಇಲ್ಲಿನ ಜನರಿಗೆ ಪಂಚಪ್ರಾಣ ಅಂತಾನೇ ಹೇಳ್ಬೋದು. ಇವರುಗಳು ತಾವು ಸೇವಿಸುವ ವಿಯರ್ಡ್‌ ಫುಡ್‌ಗಳಿಂದಲೇ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ. ಇದೀಗ ಅಂತಹದ್ದೇ ಸುದ್ದಿಯೊಂದು ಸಖತ್‌ ವೈರಲ್‌ ಆಗುತ್ತಿದ್ದು, ಚೀನಾದ ಮಾರುಕಟ್ಟೆಗೆ ಕಪ್ಪೆಯ ವಿಶೇಷ ಪಿಜ್ಜಾ ಲಗ್ಗೆಯಿಟ್ಟಿದೆ. ಪಿಜ್ಜಾ ಹಟ್‌ ಆಹಾರ ಪ್ರಿಯರಿಗಾಗಿ ತನ್ನ ಈ ಹೊಸ ಬಗೆಯ ಪಿಜ್ಜಾವನ್ನು ಪರಿಚಯಿಸಿದ್ದು, ಈ ಪಿಜ್ಜಾದ ಕಥೆ ಕೇಳಿ ಇನ್ನೂ ಈ ಕಣ್ಣಲ್ಲಿ ಏನೇನು ನೋಡೋದಿದೆಯೋ ಎಂದು ನೆಟ್ಟಿಗರು ತಲೆ ಚಚ್ಚಿಕೊಂಡಿದ್ದಾರೆ.

ಚೀನಾದ ಪಿಜ್ಜಾ ಹಟ್‌ ʼಗಾಬ್ಲಿನ್‌ ಪಿಜ್ಜಾʼ ಎಂಬ ಹೆಸರಿನ ಕಪ್ಪೆಯ ಪಿಜ್ಜಾವನ್ನು ಪರಿಚಯಿಸಿದೆ. ಚೀನಾದ ಈ ಹೊಸ ಪಿಜ್ಜಾ ಪಾಕ ವಿಧಾನವು ಮೊಬೈಲ್‌ ಗೇಮ್‌ ಡಂಜಿಯನ್ಸ್‌ ಮತ್ತು ಫೈಟರ್ಸ್‌ ಒರಿಜಿನ್ಸ್‌ ಬ್ರ್ಯಾಂಡ್‌ಗಳ ಸಹಯೋಗದ ಭಾಗವಾಗಿದೆ. ಇದು ಪಿಜ್ಜಾ ಪ್ರಿಯರನ್ನು ಮತ್ತು ಪಾಪ್‌ ಸಂಸ್ಕೃತಿಯ ಅಭಿಮಾನಿಗಳನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ. ನವೆಂಬರ್‌ 18 ರಂದು ಈ ಪಿಜ್ಜಾವನ್ನು ಪರಿಚಯಿಸಲಾಗಿದ್ದು, ಚೀನಾದ ಮೂರು ಪಿಜ್ಜಾ ಹಟ್‌ ಔಟ್‌ಲೆಟ್‌ಗಳಲ್ಲಿ ಈ ಗಾಬ್ಲಿನ್‌ ಪಿಜ್ಜಾ ಲಭ್ಯವಿದೆ. ಇದರ ಬೆಲೆ 169 ಯುವಾನ್‌ (ಅಂದಾಜು 2,000 ರೂ.) ಆಗಿದೆ.

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ಈ ಕುರಿತ ಪೋಸ್ಟ್‌ ಒಂದನ್ನು ಜೇಮ್ಸ್‌ ವಾಕರ್‌ (jwalkermobile) ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಚೀನಾದಲ್ಲಿ ಅಗ್ರಸ್ಥಾನದಲ್ಲಿರುವ ಈ ಕಪ್ಪೆ ಪಿಜ್ಜಾವನ್ನು ನೀವು ಪ್ರಯತ್ನಿಸುವಿರಾ?” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ಫೋಟೋದಲ್ಲಿ ಪಿಜ್ಜಾದ ಮೇಲೆ ಟಾಪಿಂಗ್‌ ರೀತಿಯಲ್ಲಿ ಡೀಪ್‌ ಫ್ರೈಡ್‌ ಕಪ್ಪೆಯನ್ನು ಇಟ್ಟಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ:  ಹಿಮಾವೃತ ರಸ್ತೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ

ನವೆಂಬರ್‌ 21 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 17 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಪೈನಾಪಲ್‌ ಪಿಜ್ಜಾವನ್ನು ಬೇಕಾದ್ರೆ ತಿನ್ಬೋದು, ಆದ್ರೆ ಇದನ್ನು ಮಾತ್ರ ತಿನ್ನಲಾರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಛೀ ಛೀ… ಇದನ್ನು ನೋಡುವಾಗಲೇ ಅಸಹ್ಯವಾಗುತ್ತಿದೆʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!