ನವದೆಹಲಿ: ಸ್ಮಾರ್ಟ್ಫೋನ್ ಇರುವವರು ಇಂಟರ್ನೆಟ್ (Internet) ಬಳಸದೆ ಇರಲು ಸಾಧ್ಯವೇ ಇಲ್ಲ. ಇಂಟರ್ನೆಟ್ ಬಳಸುವವರು ಇನ್ಸ್ಟಾಗ್ರಾಂ (Instagram), ಟ್ವಿಟ್ಟರ್ (Twitter), ಫೇಸ್ಬುಕ್ (Facebook) ಪೇಜನ್ನು ಬ್ರೌಸ್ ಮಾಡುತ್ತಲೇ ಇರುತ್ತಾರೆ. ಆಗ ನಿಮಗೆ ಕೆಲವು ವಿಚಿತ್ರವಾದ ವಿಡಿಯೋಗಳು ಕಾಣಬಹುದು. ಆ ವಿಡಿಯೋಗಳನ್ನು ನೋಡುವಾಗ ಈ ರೀತಿಯೂ ಆಗಲು ಸಾಧ್ಯವಾ? ಎಂಬ ಅನುಮಾನ ಬರುವುದು ಸಹಜ. ಅಂಥದ್ದೇ ಒಂದು ವಿಚಿತ್ರವಾದ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದೆ.
ಕಿಟ್ಕ್ಯಾಟ್ ಚಾಕೋಲೇಟ್ ಎಂದಾದರೂ ತಿಂದಿದ್ದೀರಾ? ಆ ಕಿಟ್ ಕ್ಯಾಟ್ ಚಾಕೋಲೇಟ್ ಅನ್ನು ತಿನ್ನುವವರನ್ನು ನೋಡಿದ್ದೀರಾ. ಆದರೆ, ಅದೇ ಚಾಕೋಲೇಟನ್ನು ಚಾಕುವಿನ ರೀತಿ ಬಳಸಿಕೊಳ್ಳಲು ಸಾಧ್ಯ ಎಂದು ನಿಮಗೆ ಗೊತ್ತಾ? ವ್ಯಕ್ತಿಯೊಬ್ಬ ಕಿಟ್ಕ್ಯಾಟ್ ಚಾಕೊಲೇಟ್ ಬಾರ್ ಅನ್ನು ಚಾಕುವಿನಿಂದ ಹರಿತಗೊಳಿಸಿ ಚೂಪಾಗಿಸಿ, ಆ ಕಿಟ್ ಕ್ಯಾಟ್ ಚಾಕೋಲೇಟ್ನಿಂದ ಟೊಮ್ಯಾಟೋ ಹಣ್ಣನ್ನು ಕತ್ತರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಹೌದು! ಇದು ವಿಚಿತ್ರ ಎನಿಸಿದರೂ ಸತ್ಯ. ಇನ್ಸ್ಟಾಗ್ರಾಂನಲ್ಲಿ ಕಿಟ್ಕ್ಯಾಟ್ನಿಂದ ಟೊಮ್ಯಾಟೋ ಹಣ್ಣನ್ನು ಕಟ್ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು 19 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.
ಈ ವಿಡಿಯೋ ಅಸಲಿಯೋ, ನಕಲಿಯೋ ಎಂದು ಖಚಿತವಾಗಿಲ್ಲ. ಈ ಹೊಸ ಪ್ರಯೋಗವನ್ನು ನೋಡಿ ನೆಟ್ಟಿಗರು ಶಾಕ್ ಆಗಿರುವುದಂತೂ ನಿಜ.
ಇದನ್ನೂ ಓದಿ: Viral Photo: ಕುಕ್ಕರ್ ಜೊತೆ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್ ನೀಡಿದ ಯುವಕ; ಕಾರಣವೇನು ಗೊತ್ತಾ?
Shocking Video: ಹೋಟೆಲ್ ಊಟದಲ್ಲಿ ಶಿಶ್ನದ ತುಂಡು ಪತ್ತೆ!; ತಿನ್ನೋ ಆಹಾರದಲ್ಲಿ ಗುಪ್ತಾಂಗ ಕಂಡು ಮಹಿಳೆ ಶಾಕ್