Viral Video: ಯುವತಿಗೆ ಸಹಾಯ ಮಾಡಲು ಹೋಗಿ ಪೇಚಿಗೆ ಸಿಲುಕಿದ ಯುವಕ; ತಮಾಷೆಯ ವಿಡಿಯೋ ವೈರಲ್

ಈ ವಿಡಿಯೋವನ್ನು ಇಲ್ಲಿಯವರೆಗೆ 8,300ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಕೆಲವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿರುವ ಯುವತಿಯೊಬ್ಬರು ಈ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ.

Viral Video: ಯುವತಿಗೆ ಸಹಾಯ ಮಾಡಲು ಹೋಗಿ ಪೇಚಿಗೆ ಸಿಲುಕಿದ ಯುವಕ; ತಮಾಷೆಯ ವಿಡಿಯೋ ವೈರಲ್
ವೈರಲ್ ವಿಡಿಯೋ
Edited By:

Updated on: Apr 09, 2022 | 4:28 PM

ಸೋಷಿಯಲ್ ಮೀಡಿಯಾದಲ್ಲಿ ತಮಾಷೆಯ ವಿಡಿಯೋವೊಂದು ವೈರಲ್ ಆಗುತ್ತಿದ್ದು, ನೆಟ್ಟಿಗರನ್ನು ಛೇಡಿಸುವಂತೆ ಮಾಡಿದೆ. ‘ಪಂಜಾಬಿ ಇಂಡಸ್ಟ್ರಿ’ ಎಂಬ ಇನ್​ಸ್ಟಾಗ್ರಾಂ (Instagram) ಪೇಜಿನಲ್ಲಿ ಈ ವಿಡಿಯೋ ಪೋಸ್ಟ್​ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 8,300ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಕೆಲವು ಸಿಸಿಟಿವಿ ದೃಶ್ಯಾವಳಿಗಳನ್ನು (CCTV Video) ಪರಿಶೀಲಿಸುತ್ತಿರುವ ಯುವತಿಯೊಬ್ಬರು ಈ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ. ಯುವತಿಯೊಬ್ಬಳಿಗೆ ಸಹಾಯ ಮಾಡಲು ಹೋದ ವ್ಯಕ್ತಿ ಯಾವ ರೀತಿ ಫಜೀತಿಗೆ ಸಿಲುಕಿದ್ದಾರೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಈ ವಿಡಿಯೋ ಪ್ರಾರಂಭವಾಗುತ್ತಿದ್ದಂತೆ ವ್ಯಕ್ತಿಯೊಬ್ಬ ತನ್ನ ಕಚೇರಿಯಲ್ಲಿ ಕಂಪ್ಯೂಟರ್‌ ರೂಂನಲ್ಲಿ ಕೆಲಸ ಮಾಡುತ್ತಾ ಕುರ್ಚಿಯ ಮೇಲೆ ಕುಳಿತಿರುವುದನ್ನು ನೀವು ನೋಡುತ್ತೀರಿ. ಆಗ ಒಬ್ಬಳು ಹುಡುಗಿ ಕೈಯಲ್ಲಿ ಕೆಲವು ವಸ್ತುಗಳನ್ನು ಹಿಡಿದುಕೊಂಡು ಬಾಗಿಲಿನಿಂದ ಹೊರಹೋಗಲು ಪ್ರಯತ್ನಿಸುತ್ತಾಳೆ. ಆದರೆ, ಆಕೆಯ ಕೈಯಲ್ಲಿ ಸಾಕಷ್ಟು ವಸ್ತುಗಳು ಇದ್ದುದರಿಂದ ಆಕೆಗೆ ಸಹಾಯವಾಗಲೆಂದು ಆ ವ್ಯಕ್ತಿ ಕುರ್ಚಿಯಿಂದ ಎದ್ದು, ಬಾಗಿಲು ತೆರೆದು ಆಕೆ ಹೋಗಲು ಸಹಾಯ ಮಾಡುತ್ತಾನೆ.

ಆಕೆ ಹೋದ ನಂತರ ವಾಪಾಸ್ ತನ್ನ ಕುರ್ಚಿಯಲ್ಲಿ ಕುಳಿತುಕೊಳ್ಳಲು ಹಿಂದೆ ಬಂದವನು ಸೀದಾ ನೆಲದ ಮೇಲೆ ಬೀಳುತ್ತಾನೆ. ಆತ ಎದ್ದಕೂಡಲೆ ಕುರ್ಚಿ ಬೇರೆಡೆಗೆ ಸರಿದಿದ್ದರಿಂದ ಆತ ನೆಲದ ಮೇಲೆ ಬೀಳುತ್ತಾನೆ. ಬಿದ್ದ ರಭಸಕ್ಕೆ ಕೆಲವು ಸೆಕೆಂಡುಗಳ ಕಾಲ ಅಲ್ಲಿಯೇ ಮಲಗುತ್ತಾನೆ. ನಂತರ ಎದ್ದು, ಕುರ್ಚಿಯನ್ನೆಳೆದುಕೊಂಡು ಕೂರುವ ವಿಡಿಯೋ ಭಾರೀ ವೈರಲ್ ಆಗಿದೆ. ಈ ದೃಶ್ಯ ಆ ಕಂಪ್ಯೂಟರ್​ ರೂಂನಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ಪರಿಶೀಲಿಸುತ್ತಿದ್ದ ಯುವತಿ ನಗುತ್ತಾ ಈ ವಿಡಿಯೋವನ್ನು ರೆಕಾರ್ಡ್​ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: Viral Video: ಲೋಕಲ್ ರೈಲಿನಲ್ಲಿ ಜನರೊಂದಿಗೆ ಕುದುರೆ ಪ್ರಯಾಣಿಸುತ್ತಿರುವ ವಿಡಿಯೋ ವೈರಲ್

Viral Video: ಟ್ರಾಫಿಕ್​ನಿಂದ ವಿದ್ಯುತ್ ಉತ್ಪಾದನೆ; ಅಚ್ಚರಿಯಾಗುವ ವಿಡಿಯೋ ವೈರಲ್

Web contact

TV9 Kannada

Read More
Follow Us