Viral Video : ಸೆಲೆನಾ ಗೊಮೇಝ್ ಮತ್ತು ರೇಮಾ ಅವರ ಹಾಡು ಈ ಹಿಂದೆ ವೈರಲ್ ಆಗಿದ್ದನ್ನು ನೋಡಿದ್ದೀರಿ. ಈ ಹಾಡಿಗೆ ಬಾಸ್ಕೆಟ್ ಬಾಲ್ ಆಡುತ್ತ ಇಬ್ಬರು ಯುವಕರು ತಬಲಾ ನುಡಿಸಿದ್ದರು. ಇದೀಗ ಇವರದೇ ಮತ್ತೊಂದು ಹಾಡು ‘ಕಾಮ್ ಡೌನ್’ ವೈರಲ್ ಆಗಿದೆ. ಆಫ್ರಿಕಾದ ಬುಡಕಟ್ಟು ಮಕ್ಕಳು ಈ ಹಾಡಿಗೆ ನಡುರಸ್ತೆಯಲ್ಲಿ ಉತ್ಸಾಹದಿಂದ ಹೆಜ್ಜೆ ಹಾಕಿದ್ದಾರೆ. ಕೇಳಿದ ನಿಮಗೆ ಈ ಹಾಡು ಹುಚ್ಚು ಹಿಡಿಸುವುದು ಗ್ಯಾರಂಟಿ!
ನೈಜೀರಿಯಾದ ಗಾಯಕರಾದ ರೆಮಾ ಮತ್ತು ಸೆಲೆನಾ ಗೊಮೇಝ್ ಹಾಡಿರುವ ಹಾಡು ‘ಕಾಮ್ ಡೌನ್’. ಕಳೆದ ವರ್ಷ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿರುವ ಹಾಡುಗಳಲ್ಲಿ ಇದೂ ಒಂದಾಯಿತು. ಈಗಲೂ ಇದು ಟ್ರೆಂಡಿಂಗ್ನಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾದ ರೀಲ್ಸ್ಗಳೇ ಇದಕ್ಕೆ ಸಾಕ್ಷಿ.
ಇದನ್ನೂ ಓದಿ : Viral Video: ‘ಎಲೆಕ್ಟ್ರಿಸಿಟಿ’ಯ ಜೋಶ್ನೊಂದಿಗೆ ಬಂದಿದ್ದಾರೆ ಮಸಾಕಾ ಕಿಡ್ಸ್ ಆಫ್ರಿಕಾನಾ ಮಕ್ಕಳು!
ಆಫ್ರಿಕಾದ ಮಸಾಕಾ ಕಿಡ್ಸ್ ಆಫ್ರಿಕಾನಾ ಇನ್ಸ್ಟಾಗ್ರಾಂ ಪುಟವು ಇದೀಗ ಈ ವಿಡಿಯೋ ಹಂಚಿಕೊಂಡಿದೆ. ಆಗಾಗ ಈ ಪುಟದಲ್ಲಿ ಹಂಚಿಕೊಂಡ ಮಕ್ಕಳ ನೃತ್ಯದ ವಿಡಿಯೋಗಳು ವೈರಲ್ ಆಗಿದ್ದನ್ನು ಗಮನಿಸಿದ್ದೀರಿ. ಈಗ ಈ ಮೂವರೂ ಮಕ್ಕಳು ಕಾಮ್ ಡೌನ್ ಹಾಡಿಗೆ ನರ್ತಿಸುವಾಗ ಅವರ ಮುಖದಲ್ಲಿ ಉಕ್ಕುತ್ತಿರುವ ಸಂತೋಷ ಗಮನಿಸಿ. ಇನ್ಸ್ಟಾಗ್ರಾಂ ಖಾತೆದಾರರಂತೂ ಥ್ರಿಲ್ಗೆ ಒಳಗಾಗಿದ್ದಾರೆ. ಇವರ ಪ್ರತಿಭೆಯನ್ನು ಕೊಂಡಾಡಿದ್ದಾರೆ. ನಮ್ಮ ಇಡೀ ದಿನ ನಿಮ್ಮಿಂದಾಗಿ ಖುಷಿ ಮತ್ತು ಉತ್ಸಾಹದಿಂದ ಕೂಡಿರುತ್ತದೆ ಎಂದಿದ್ದಾರೆ.
ಇದನ್ನೂ ಓದಿ : Viral Video: ಆಫ್ರಿಕದ ಮಕ್ಕಳ ಈ ನೃತ್ಯ ಹಾಡು ಗುಂಗು ಹಿಡಿಸಿದಿದ್ದರೆ ಹೇಳಿ
ಈ ಮಕ್ಕಳ ನಗುವೇ ಅವರ ಮನಸ್ಸನ್ನು ತಿಳಿಸುತ್ತದೆ. ಆಗಾಗ ಈ ಪುಟದಲ್ಲಿ ಇಂಥ ಮಕ್ಕಳ ವಿಡಿಯೋ ನೋಡುತ್ತಿರುತ್ತೇನೆ ಜೀವಂತಿಕೆಯನ್ನು ಅರಳಿಸುವಂತಿರುತ್ತವೆ ಎಂದು ಒಬ್ಬರು ಹೇಳಿದ್ದಾರೆ. ಕಾಮ್ ಡೌನ್ ಆಲ್ಬಮ್ 2022ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ