Viral : ಕೊರೊನಾ ಸಮಯದಲ್ಲಿ ಅನೇಕ ಜನರು ಕೆಲಸ ಕಳೆದುಕೊಂಡರು. ಇನ್ನೂ ಕೆಲವರು ಇದ್ದ ಕೆಲಸವನ್ನು ಬಿಟ್ಟು ಹೊಸದೇನಾದರೂ ಮಾಡಬೇಕೆಂಬ ತುಡಿತಕ್ಕೆ ಬಿದ್ದರು. ಓದಿಗೂ, ಅನುಭವಕ್ಕೂ, ವೃತ್ತಿಗೂ ಸಂಬಂಧವಿಲ್ಲದಂಥ ಹೊಸ ಸಾಹಸಕ್ಕೆ ಕೈಹಾಕಿದ್ದನ್ನು ನೋಡಿ ಅನೇಕರು ಗೇಲಿ ಮಾಡಿದರು. ಇನ್ನೂ ಕೆಲವರು ಹುರುಪು ತುಂಬಿದರು. ಈ ವಿಷಯಕ್ಕೆ ಸಂಬಂಧಿಸಿದ ಅನೇಕ ವಿಡಿಯೋ ಟ್ವೀಟ್ಗಳನ್ನು ಇದೇ ತಾಣದಲ್ಲಿ ಈ ಹಿಂದೆ ನೋಡಿದ್ದೀರಿ. ಇದೀಗ ವೈರಲ್ ಆಗಿರುವ ವಿಷಯ ಏನೆಂದರೆ, ಎಂಬಿಎ ಓದಿದ ವ್ಯಕ್ತಿಯೊಬ್ಬರು ಚಹಾ ಅಂಗಡಿ ಬಿಝಿನೆಸ್ ಮಾಡಿ ರೂ. 90 ಲಕ್ಷದ ಮರ್ಸಿಡೀಝ್ ಕಾರ್ ಖರೀದಿಸಿರುವುದು!
ಎಂಬಿಎ ಚಾಯ್ವಾಲಾ ಎಂದೇ ಖ್ಯಾತಿ ಹೊಂದಿರುವ ಪ್ರಫುಲ್ ಬಿಲ್ಲೋರ್ 2017 ರಲ್ಲಿ ಎಂಬಿಎ ಅರ್ಧಕ್ಕೆ ನಿಲ್ಲಿಸಿ ಅಹಮದಾಬಾದ್ನ ಐಐಎಂ ಮುಂದೆ ಚಹಾ ಅಂಗಡಿ ಇಟ್ಟರು. ಮನಸ್ಸಿದ್ದಲ್ಲಿ ಮಾರ್ಗ. ಅದರಲ್ಲಿ ಅವರು ಯಶಸ್ಸನ್ನೂ ಸಾಧಿಸಿದರು. ಇದೀಗ ಅವರು ‘ಎಂಬಿಎ ಚಾಯ್ವಾಲಾ’ ಬ್ರ್ಯಾಂಡಿನಡಿ ದೇಶದಾದ್ಯಂತ ಅನೇಕ ರೆಸ್ಟೋರೆಂಟ್ಗಳನ್ನು ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ : ‘ಬಿ.ಟೆಕ್ ಚಾಯ್ವಾಲಿ’ ಬಿಹಾರ ವಿದ್ಯಾರ್ಥಿನಿಯ ಈ ಸ್ಟಾರ್ಟ್ಅಪ್; ನೆಟ್ಟಿಗರಿಂದ ಶಭಾಷ್
ಸದ್ಯ ರೂ. 90 ಲಕ್ಷದ ಮರ್ಸಿಡೀಝ್ ಕಾರನ್ನು ಖರೀದಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಅನ್ನು ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಸುಮಾರು ಮೂರು ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ನೆಟ್ಟಿಗರೆಲ್ಲರೂ ಪ್ರಫುಲ್ ಅವರಿಗೆ ಅಭಿನಂದನೆಗಳ ಮಳೆ ಸುರಿಸಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ಶುಭ ಕೋರಿದ್ದಾರೆ.
ಇದನ್ನೂ ಓದಿ : ಫುಡ್ ಸ್ಟಾಲೋ, ಕಾರ್ಪೊರೇಟ್ ಉದ್ಯೋಗವೋ; ಯಾವುದು ಒಳ್ಳೆಯದು? ನೆಟ್ಟಿಗರ ಭಾರೀ ಚರ್ಚೆ
ಅನೇಕರು ಇಂಥ ಸಾಹಸಗಳಿಗೆ ಕೈಹಾಕುತ್ತಾರೆ. ಆದರೆ ನೀವು ಅತ್ಯಂತ ಕಡಿಮೆ ಅವಧಿಯಲ್ಲಿ ಯಶಸ್ವಿಗೊಳಿಸಿದ್ದೀರಿ ಎಂದಿದ್ದಾರೆ ಅನೇಕರು. ಸದ್ಯದಲ್ಲಿಯೇ ಅಮೆರಿಕದಲ್ಲಿ ಎಂಬಿಎ ಚಾಯ್ವಾಲಾ ಗ್ರೂಪ್ ತೆರೆಯುವ ನಿರೀಕ್ಷೆ ಇದೆ ಎಂದು ಪ್ರಫುಲ್ ಮತ್ತೊಂದು ಪೋಸ್ಟ್ನಲ್ಲಿ ಅಪ್ಡೇಟ್ ಮಾಡಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:20 pm, Thu, 16 February 23