Viral Video : ಅಬ್ಬಬ್ಬಾ! ಪಾತ್ರೆ ತೊಳೆಯುವುದರಲ್ಲಿ ನಿಮ್ಮನ್ನೇ ಮೀರಿಸುತಿದೆ ಈ ಕೋತಿ

| Updated By: ಅಕ್ಷತಾ ವರ್ಕಾಡಿ

Updated on: Mar 17, 2024 | 1:40 PM

ಸೋಶಿಯಲ್ ಮೀಡಿಯಾ ಜಗತ್ತು ಬಹುದೊಡ್ಡದಿದೆ. ದಿನ ಬೆಳಗಾಗದರೆ ಒಂದಲ್ಲ ಒಂದು ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಕೆಲವೊಮ್ಮೆ ವೈರಲ್ ಆಗುವ ಪ್ರಾಣಿಗಳ ವಿಡಿಯೋವು ನೆಟ್ಟಿಗರ ಹೃದಯವನ್ನು ಗೆಲ್ಲುತ್ತದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ವಿಡಿಯೋದಲ್ಲಿ ಕೋತಿ ಮರಿಯೊಂದು ಟೀ ಸ್ಟಾಲ್ ಮುಂದೆ ಕುಳಿತು ಪಾತ್ರೆಯನ್ನು ತೊಳೆಯುತ್ತಿದೆ. ಈ ತುಣುಕನ್ನು ನೋಡಿದ ನೆಟ್ಟಿಗರು ಕೋತಿಯ ಈ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ.

Viral Video : ಅಬ್ಬಬ್ಬಾ! ಪಾತ್ರೆ ತೊಳೆಯುವುದರಲ್ಲಿ ನಿಮ್ಮನ್ನೇ ಮೀರಿಸುತಿದೆ ಈ ಕೋತಿ
Monkey washes plates at chai stall 
Follow us on

ಮನುಷ್ಯನು ಏನಾದರೂ ಮಾಡಿದರೆ ನೀನೇನು ಕಪಿಯಂತೆ ಆಡುತ್ತೀಯ ಎಂದು ಹೇಳುವುದನ್ನು ಕೇಳಿರಬಹುದು. ಮನುಷ್ಯನಿಗೆ ಮಂಗನಿಗೂ ಹೆಚ್ಚೇನು ವ್ಯತ್ಯಾಸವಿಲ್ಲ. ಈ ಮಂಗಗಳನ್ನು ಮನುಷ್ಯನ ವಂಶಸ್ಥರು ಎನ್ನಲಾಗುತ್ತದೆ. ಈ ಕೋತಿಗಳ ಕುಚೇಷ್ಟೆಗಳನ್ನು ನೋಡುವುದೇ ಚಂದ. ಕೆಲವೊಮ್ಮ ಪ್ರಾಣಿಗಳಲ್ಲಿ ಈ ಕೋತಿಯನ್ನು ಅತೀ ಹೆಚ್ಚು ಚೇಷ್ಟೆ ಮಾಡುವ ಪ್ರಾಣಿಯೆಂದೇ ಗುರುತಿಸುತ್ತೇವೆ. ಈ ಮಂಗನ ಚೇಷ್ಟೆಯು ಕೆಲವು ಸಲ ನಗು ತರಿಸಿದರೆ, ಕೆಲವೊಮ್ಮೆ ಸಹಿಸಿಕೊಳಳುವುದಕ್ಕೂ ಸಾಧ್ಯವಾಗುವುದಿಲ್ಲ. ಇದೀಗ ಮಂಗವೊಂದು ಹೋಟೆಲ್‍ವೊಂದರಲ್ಲಿ ಪಾತ್ರೆ ತೊಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟೀ ಅಂಗಡಿಯ ಹೊರಗಡೆ ಮನುಷ್ಯ ಕುಳಿತುಕೊಳ್ಳುವ ರೀತಿಯಲ್ಲೇ ಕುಳಿತು ತನ್ನ ಪಾಡಿಗೆ ತಟ್ಟೆ ತೊಳೆಯುವ ಕೆಲಸದಲ್ಲಿ ಬ್ಯುಸಿಯಾಗಿದೆ. ಈ ವಿಡಿಯೋವನ್ನು chutiyapa over ಎನ್ನುವ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಯೊಂದಿಗೆ ‘ಇಂಟರ್ನ್‌ಶಿಪ್ ನಂತರ ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು.’ ಎಂದು ಬರೆಯಲಾಗಿದೆ.

 


ಈ ವಿಡಿಯೋಗೆ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅಭಿನಯದ ರಯೀಸ್ ಸಿನಿಮಾದಲ್ಲಿನ ಸಂಭಾಷಣೆಯನ್ನು ಬ್ಲಾಕ್ ಗ್ರೌಂಡ್ ಆಗಿ ನೀಡಲಾಗಿದೆ. ಹಿನ್ನಲೆಯಲ್ಲಿ ನನ್ನ ಅಮ್ಮ ಯಾವಾಗಲೂ ಹೇಳುತ್ತಿದ್ದರು. ಯಾವುದೇ ವ್ಯವಹಾರವೂ ಚಿಕ್ಕದ್ದಲ್ಲ ಮತ್ತು ಯಾವುದೇ ಧರ್ಮವು ವ್ಯವಹಾರಕ್ಕಿಂತ ದೊಡ್ಡದ್ದಲ್ಲ ಎಂದು ಹೇಳುತ್ತಿರುವುದನ್ನು ಕೇಳಬಹುದು. ಇದಕ್ಕೆ ಈ ಕೋತಿ ಮರಿಯೊಂದು ಪಾತ್ರೆ ತೊಳೆಯುವ ವಿಡಿಯೋವನ್ನು ಎಡಿಟ್ ಮಾಡಲಾಗಿದೆ.

ಇದನ್ನೂ ಓದಿ: ನಾಲ್ಕು ಇಂಚಿನ ಬಾಲದೊಂದಿಗೆ ಜನಿಸಿದ ಮಗು; ಬೆರಗಾದ ವೈದ್ಯ ಲೋಕ 

ಈ ವಿಡಿಯೋದ ಪ್ರಾರಂಭದಲ್ಲಿ ಟೀ ಸ್ಟಾಲನ್ನು ತೋರಿಸಲಾಗಿದೆ. ಅಂಗಡಿಯ ಸುತ್ತಮುತ್ತ ಜನರು ನಿಂತಿದ್ದು, ತನ್ನಷ್ಟಕ್ಕೆ ಏನ್ನನ್ನೋ ಕುತೂಹಲದಿಂದ ನೋಡುತ್ತಿರುವುದನ್ನು ಕಾಣಬಹುದು. ಆ ಬಳಿಕ ನೋಡಿದರೆ ಮಂಗವೊಂದು ಟೇಬಲ್ ಮೇಲೆ ಕುಳಿತು ಆರಾಮವಾಗಿ ಪಾತ್ರೆ ತೊಳೆಯುತ್ತಿರುವುದನ್ನು ತೋರಿಸಲಾಗಿದೆ. ಈ ಕೋತಿಯು ಪಾತ್ರೆ ತೊಳೆದ ಬಳಿಕ ತಟ್ಟೆ ಕೊಳೆ ಹೋಗಿದೆಯೋ ಇಲ್ಲವೋ ಎಂದು ಪರೀಕ್ಷಿಸುವ ಸಲುವಾಗಿ ತಟ್ಟೆಯ ವಾಸನೆ ನೋಡುತ್ತಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾ ಹರಿದಾಡುತ್ತಿದ್ದಂತೆ ಈಗಾಗಲೇ 2 ಲಕ್ಷ 10 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ವಿಡಿಯೋವನ್ನು ನೋಡಿದ ಕೆಲವರು ಕಮೆಂಟ್ ಮಾಡಿದ್ದು, ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:36 pm, Sun, 17 March 24