ನಿಮಗೆ ಹಾಡು ಕೇಳುವ ಅಭ್ಯಾಸವಿದ್ದರೆ ಈ ಹಾಡನ್ನು ಮಾತ್ರ ಕೇಳಿರುತ್ತಿರ, ಏಕೆಂದರೆ ಇದು ಅಷ್ಟು ಜನಪ್ರಿಯತೆಯನ್ನು ಪಡಡೆದಿತ್ತು. ಇದೀಗ ಈ ಹಾಡಿ ಸಖತ್ ಆಗಿ ತಾಆಯಿ- ಮಗಳು ಡ್ಯಾನ್ಸ್ ಮಾಡಿದ್ದಾರೆ. ಕೋಕ್ ಸ್ಟುಡಿಯೋ ಸೀಸನ್ 14 ಟ್ರ್ಯಾಕ್ ಪಸೂರಿಯನ್ನು ನೀವು ಕೇಳಿರಬಹುದು. ಇದು ಜಗತ್ತಿನಾದ್ಯಂತ ಒಂದು ದೊಡ್ಡ ಅಲೆಗಳನ್ನು ಎಬ್ಬಿಸುತ್ತಿದೆ. ಅಲಿ ಸೇಥಿ ಮತ್ತು ಶೇ ಗಿಲ್ ಹಾಡಿರುವ ಸುಂದರವಾದ ಪಾಕಿಸ್ತಾನಿ ಹಾಡು ಎಲ್ಲರನ್ನೂ ಒಮದು ಬಾರಿಗೆ ಆಕರ್ಷಣೆ ಮಾಡಿತ್ತು. ಅನೇಕ ಕಲಾವಿದರು ಮತ್ತು ನೃತ್ಯಗಾರರು ಈ ಹಾಡಿಗೆ ತಮ್ಮದೇ ರೀತಿಯ ಕಮೆಂಟ್ ಮಾಡಿದ್ದಾರೆ. ಜೊತೆಗೆ ಅದೆಷ್ಟೋ ಜನ ಸಾಮಾಜಿಕ ಜಾಲತಾಣದಲ್ಲಿ ರಿಲಿಸ್ ಮಾಡಿ ಹಂಚಿಕೊಂಡಿದ್ದರು. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಈ ಹಾಡಿಗೆ ತಾಯಿ-ಮಗಳು ಜೋಡಿಯಾಗಿ ಸಖತ್ ಆಗಿ ನೃತ್ಯ ಮಾಡಿದ್ದಾರೆ. ಒಂದೇ ರೀತಿಯ ಬಟ್ಟೆಗಳನ್ನು ಧರಿಸಿ, ತಾಯಿ-ಮಗಳು ನಿವೇದಿತಾ ಮತ್ತು ಇಶಾನ್ವಿ ಹೆಗ್ಡೆ ಈ ಹಾಡಿಗೆ ಸುಂದರವಾಗಿ ನೃತ್ಯ ಮಾಡುತ್ತಾರೆ.
ಇವರಿಬ್ಬರು ನಿವಿ ಮತ್ತು ಶಿವಿ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ 199 ಸಾವಿರ ಅನುಯಾಯಿಗಳನ್ನು ಹೊಂದಿದ್ದಾರೆ. ವೀಡಿಯೋಗೆ ನಮ್ಮ ಟೇಕ್ ಆನ್ ಪಸೂರಿ ಎಂದು ಶೀರ್ಷಿಕೆ ನೀಡಲಾಗಿದೆ. ನಾವು ಸಾಮಾನ್ಯವಾಗಿ ಮಾಡುವುದಕ್ಕಿಂತ ವಿಭಿನ್ನವಾಗಿದೆ. ಈ ಹಾಡು ಇಷ್ಟವಾಯಿತು, ಅನೇಕ ಈ ಡ್ಯಾನ್ಸ್ಗೆ ಹೆಚ್ಚು ಕಮೆಂಟ್ ಮತ್ತು ನಮ್ಮ ಈ ನೃತ್ಯವನ್ನು ಇಷ್ಟಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ವೀಡಿಯೊ ವೈರಲ್ ಆಗಿದ್ದು ಬಳಕೆದಾರರು ಸೊಗಸಾದ ನೃತ್ಯವನ್ನು ಪ್ರಶಂಸಿಸಿದ್ದಾರೆ. ಸುಂದರವಾಗಿದೆ, ಇಬ್ಬರು ನೃತ್ಯ ತುಂಬಾ ಚೆನ್ನಾಗಿದೆ ಎಂದು ಒಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ. ನಿಮ್ಮ ಈ ಡ್ಯಾನ್ಸ್ ನೋಡಿ ನಮಗೆ ತುಂಬಾ ಖುಷಿಯಾಗಿದೆ ಅಮ್ಮ -ಮಗಳ ಡ್ಯಾನ್ಸ್ಗೆ ನಾವು ಸೋತಿದ್ದೇವೆ ಎಂದು ಕಮೆಂಟ್ ಮಾಡಿದ್ದಾರೆ.