Viral Video: ಮದುವೆ ಮಂಟಪದಲ್ಲಿ ಕಿತ್ತಾಡಿದ ವಧುವರರು!
ದಂಪತಿಗಳು ತಮ್ಮ ಮದುವೆಯ ದಿನದಂದು ಮಂಟಪದಲ್ಲಿ ಕಿತ್ತಾಡಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದೆ. ಮದುವೆ ಮಂಟಪದಲ್ಲಿ ವಧುವರರು ಜಗಳ ಮಾಡಿಕೊಂಡಿದ್ದಾರೆ. ಅವರ ಸಂಬಂಧಿಕರು ತಡೆದರು, ಇವರ ಜಗಳ ಮಾತ್ರ ನಿಂತಿಲ್ಲ.
ಭಾರತೀಯ ಮದುವೆಗಳು ಒಂದು ರೀತಿಯ ಅದ್ಭುತ ವಿಚಾರಗಳನ್ನು ಹೊಂದಿದೆ, ಒಂದೊಂದು ಕಡೆ ಒಂದು ರೀತಿಯ ಸಂಪ್ರದಾಯಗಳು ಇರುತ್ತದೆ. ಆದರೆ ವಿಭಿನ್ನವಾಗಿದ್ದರು, ಆದರೆ ಪ್ರತಿ ಮದುವೆ ಮನೆಯಲ್ಲೂ ಹಬ್ಬ ವಾತಾವರಣ ಇರುತ್ತದೆ, ಬಂಧು-ಬಳಗ ಎಲ್ಲವೂ ಸೇರಿ ಒಂದು ಹಬ್ಬದಂತೆ ಆಚರಣೆ ಮಾಡುತ್ತಾರೆ. ಕೆಲವೊಮ್ಮೆ, ಸಂತೋಷದ ಕ್ಷಣಗಳ ಬದಲಿಗೆ, ಕುಟುಂಬಗಳು ಅಥವಾ ವಧು-ವರರ ನಡುವಿನ ಜಗಳಗಳ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ.
ಅಂತಹ ಒಂದು ವೀಡಿಯೊ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ವಧುವರರು ತಮ್ಮ ಮದುವೆಯ ದಿನದಂದು ಮಂಟಪದಲ್ಲಿ ಕಿತ್ತಾಡಿಕೊಂಡಿದ್ದಾರೆ. ವಧು ವರನ ಕಡೆಗೆ ಕೈಯನ್ನು ತಳ್ಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ, ನಂತರ ಇಬ್ಬರ ನಡುವೆ ದೊಡ್ಡ ಜಗಳ ನಡೆಯುತ್ತದೆ.
View this post on Instagram
ವಧು ಮತ್ತು ವರರು ಇತರ ಜನರೊಂದಿಗೂ ಹೊಡೆದಾಡಿಕೊಳ್ಳುತ್ತಾರೆ. ಆದರೆ ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ತೇಗುಸ್ತಿ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ.