Viral Video: ಮುಖೇಶ್ ಅಂಬಾನಿಯವರ ಫೇವರೇಟ್​​ ರೆಸ್ಟೋರೆಂಟ್​ ‘ಕೆಫೆ ಮೈಸೂರು’

ಇತ್ತೀಚೆಗಷ್ಟೇ ಅಂಬಾನಿಯವರ ಕಿರಿಯ ಪುತ್ರ ಅನಂತ್​ ಅಂಬಾನಿಯವರ ವಿವಾಹ ಪೂರ್ವ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ಇದೀಗಾ ಅಂಬಾನಿಯವರ ಹಳೆಯ ಸಂದರ್ಶನದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

Viral Video: ಮುಖೇಶ್ ಅಂಬಾನಿಯವರ ಫೇವರೇಟ್​​ ರೆಸ್ಟೋರೆಂಟ್​ ಕೆಫೆ ಮೈಸೂರು
Viral Video
Image Credit source: Pinterest

Updated on: Mar 09, 2024 | 6:48 PM

ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಖೇಶ್ ಅಂಬಾನಿ ತನ್ನ ನೆಚ್ಚಿನ ರೆಸ್ಟೋರೆಂಟ್ ಯಾವುದು ಎಂಬುದರ ಕುರಿತು ಸಂದರ್ಶನದಲ್ಲಿ ಮಾತಾನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. “ಮುಂಬೈನಲ್ಲಿರುವ ಆ ರೆಸ್ಟೋರೆಂಟ್ ಹೆಸರು ‘ಕೆಫೆ ಮೈಸೂರು’. ಕಾಲೇಜಿನಲ್ಲಿ ಓದುವಾಗ ಅಲ್ಲಿಗೆ ನಿಯಮಿತವಾಗಿ ಹೋಗುತ್ತಿದ್ದೆ. ಈಗ ಅಲ್ಲಿಗೆ ಹೋಗಲು ಸಾಧ್ಯವಾಗದಿದ್ದರೂ, ಅಲ್ಲಿಂದ ಆಹಾರವನ್ನು ಆರ್ಡರ್ ಮಾಡಿ ತಿನ್ನುತ್ತೇನೆ. ನನ್ನ ಮೆಚ್ಚಿನ ಆಹಾರ ಇಡ್ಲಿ, ದೋಸೆ. ನಾನು ದಕ್ಷಿಣ ಭಾರತದ ಆಹಾರಗಳನ್ನು ಇಷ್ಟಪಡುತ್ತೇನೆ” ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಕೆಫೆ ಮೈಸೂರು ಮುಂಬೈನಲ್ಲಿರುವ ದಕ್ಷಿಣ ಭಾರತದ ಅತ್ಯಂತ ಹಳೆಯ ರೆಸ್ಟೋರೆಂಟ್‌ಗಳಲ್ಲಿ ಒಂದಾಗಿದೆ. ಈ ರೆಸ್ಟೋರೆಂಟ್ ಅನ್ನು 1936 ರಲ್ಲಿ ನಿರ್ಮಿಸಲಾಯಿತು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರಸ್ತೆಯಲ್ಲಿರುವ ಈ ರೆಸ್ಟೋರೆಂಟ್ ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ತೆರೆದಿರುತ್ತದೆ. ಪ್ರತಿ ಬುಧವಾರ ಮುಚ್ಚಲಾಗುತ್ತದೆ. ದೋಸೆ ಮತ್ತು ಇಡ್ಲಿಯ ಹೊರತಾಗಿ, ಈ ರೆಸ್ಟೋರೆಂಟ್ ಸ್ಯಾಂಡ್‌ವಿಚ್‌ಗಳು, ಬೀದಿ ಆಹಾರ, ಸಿಹಿತಿಂಡಿಗಳು ಇತ್ಯಾದಿಗಳನ್ನು ಸಹ ನೀಡುತ್ತದೆ. ಈ ರೆಸ್ಟೋರೆಂಟ್‌ನಲ್ಲಿ ಕನಿಷ್ಠ 81 ಬಗೆಯ ದೋಸೆಗಳು ಲಭ್ಯವಿವೆ. ಈ ರೆಸ್ಟೋರೆಂಟ್‌ನಿಂದ ನೀವು ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಬಹುದು. ಉಪ್ಮಾ, ಪೂರಿ, ಸಿಹಿತಿಂಡಿಗಳು, ಲಸ್ಸಿ, ಮಿಲ್ಕ್ ಶೇಕ್ ಇತ್ಯಾದಿ ಎಲ್ಲವನ್ನೂ ಆರ್ಡರ್ ಮಾಡಬಹುದು.

ಇದನ್ನೂ ಓದಿ: ಉತ್ತರ ಕರ್ನಾಟಕದ ಖಡಕ್ ಜೋಳದ ರೊಟ್ಟಿ ನಾನಾ ರೀತಿಯ ಪಲ್ಯ, ಅಜ್ಜಿಯ ಕೈ ರುಚಿ ಅದ್ಭುತ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇತ್ತೀಚೆಗಷ್ಟೇ ಅಂಬಾನಿಯವರ ಕಿರಿಯ ಪುತ್ರ ಅನಂತ್​ ಅಂಬಾನಿಯವರ ವಿವಾಹ ಪೂರ್ವ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ಇದೀಗಾ ಅಂಬಾನಿಯವರ ಹಳೆಯ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ