
ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ವಿಡಿಯೋಗಳು ನಮಗೆ ಗೊತ್ತಿಲ್ಲದಂತೆ ಮನಸ್ಸು ಕದ್ದು ಬಿಡುತ್ತವೆ. ಮನಸ್ಸು ಕದಿಯುವುದು ಎಂದಾಕ್ಷಣ ಚಂದದ ಹುಡುಗಿಯೋ, ಸುರಸುಂದರಾಂಗನೋ ಅಲ್ಲಿರಬೇಕು ಎಂದೇನಿಲ್ಲ. ಇಲ್ಲೊಬ್ಬ ಗಿಟಾರ್ ವಾದಕ ರಸ್ತೆ ಬದಿಯಲ್ಲಿ ನಿಂತು ಗಿಟಾರ್ ನುಡಿಸುತ್ತಿರುವಾಗ ಅಲ್ಲೇ ಇದ್ದ ತಾತ ಮನದುಂಬಿ ಹೆಜ್ಜೆ ಹಾಕಿದ್ದಾರೆ. ಗಿಟಾರ್ ನುಡಿಸುತ್ತಿರುವಂತೆಯೇ ವೃದ್ಧಾಪ್ಯದಿಂದ ಯೌವನಕ್ಕೆ ಹೊರಳಿದ ವ್ಯಕ್ತಿ ಥೇಟ್ ಯಾವುದೋ ಚಿತ್ರದಲ್ಲಿ ಅಭಿನಯಿಸುತ್ತಿರುವಂತೆಯೇ ತನ್ಮಯರಾಗಿ ಹೆಜ್ಜೆ ಹಾಕಿದ್ದಾರೆ. ಯಾವುದೇ ವೃತ್ತಿಪರ ನೃತ್ಯಗಾರರಿಗೆ ಸೆಡ್ಡು ನೀಡುವಂತೆ ಹೆಜ್ಜೆ ಹಾಕಿರುವ ತಾತ ಕೈಯಲ್ಲಿ ಕೋಲು ಹಿಡಿದು ಕುಣಿದಿರುವನ್ನು ನೋಡಿ ನೆಟ್ಟಿಗರು ಅಬ್ಬಬ್ಬಾ ವಯಸ್ಸು ಕೇವಲ ಲೆಕ್ಕ ಹಾಕೋಕೆ ಮಾತ್ರ ಎಂದು ತಲೆದೂಗಿದ್ದಾರೆ.
ಈ ವಿಡಿಯೋದಲ್ಲಿ ಕಪ್ಪು ಬಣ್ಣದ ಉದ್ದ ಕೋಟ್ ತೊಟ್ಟು, ಟೈ ಧರಿಸಿ, ಒಂದು ಟೊಪ್ಪಿಯನ್ನು ಹಾಕಿಕೊಂಡು, ಸ್ಟೈಲಾಗಿ ಕೈಯಲ್ಲಿ ಕೋಲು ಹಿಡಿದಿರುವುದನ್ನು ನೋಡಿದರೆ ಯಾವುದೇ ಚಿತ್ರದ ಚಿತ್ರೀಕರಣವಾಗುತ್ತಿರಬೇಕು ಎಂದೆನ್ನಿಸುತ್ತದೆ. ವಯಸ್ಸು ಸುಮಾರಾದಂತೆ ಕಂಡರೂ ಗಿಟಾರ್ ಸದ್ದಿಗೆ ಆ ವ್ಯಕ್ತಿ ಹೆಜ್ಜೆ ಹಾಕುವುದನ್ನು ನೋಡಿದರೆ ಎಂಥವರೂ ಒಮ್ಮೆ ನಾಚಿ ನೀರಾಗಬೇಕು. ಏಕೆಂದರೆ ಯಾವ ನೃತ್ಯಗಾರನಿಗೂ ಕಮ್ಮಿ ಇಲ್ಲ ಎನ್ನುವಂತೆ ವಿಭಿನ್ನ ರೀತಿಯಲ್ಲಿ ಕುಣಿಯುವ ವೃದ್ಧ ವ್ಯಕ್ತಿ ಎಲ್ಲಿಯೂ ತಾಳ ತಪ್ಪಿದಂತೆ ಕಾಣುವುದಿಲ್ಲ.
ಯುವಕನೂ ಅತ್ಯಂತ ಸುಂದರವಾಗಿ ಗಿಟಾರ್ ನುಡಿಸುತ್ತಿದ್ದು, ತಾತನೂ ಅಷ್ಟೇ ಖುಷಿಯಿಂದ ತನಗೆ ವಯಸ್ಸೇ ಆಗಿಲ್ಲವೆಂಬಂತೆ ಹೆಜ್ಜೆ ಹಾಕುತ್ತಿರುವುದು ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ ಪ್ರಕಾರ ಈ ವಿಡಿಯೋವನ್ನು ನೆದರ್ಲ್ಯಾಂಡ್ನ ಬೀದಿಯೊಂದರಲ್ಲಿ ಚಿತ್ರೀಕರಿಸಲಾಗಿದೆ. ಈ ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ ನಂತರ ಇದು ಅತ್ಯಂತ ಕಡಿಮೆ ಸಮಯದಲ್ಲಿ ಸಾವಿರಾರು ವೀಕ್ಷಣೆಯನ್ನು ಗಿಟ್ಟಿಸಿಕೊಳ್ಳುವ ಮೂಲಕ ಜಗತ್ತಿನಾದ್ಯಂತ ವೈರಲ್ ಆಗಿದೆ.
This guy is truly living his best life pic.twitter.com/SQHnWoQMwk
— Giles Paley-Phillips (@eliistender10) May 21, 2021
ಈ ವಿಡಿಯೋ ನೋಡಿದವರೆಲ್ಲರೂ ತಾತನ ಜೀವನ ಪ್ರೀತಿಗೆ, ಖುಷಿಗೆ, ಕ್ರೀಯಾಶೀಲತೆಗೆ ಮೆಚ್ಚುಗೆ ಸೂಚಿಸಿದ್ದಾರೆ. ನಡುಬೀದಿಯಲ್ಲಿ ಹೀಗೆ ಮೈ ಹಗುರಾಗಿಸಿಕೊಳ್ಳುವಂತೆ ಕುಣಿಯುವುದು ನಿಜಕ್ಕೂ ಸುಂದರ ಸಂಗತಿ. ಆದರೆ, ಬಹುತೇಕರಿಗೆ ಅದು ಇಷ್ಟವಿದ್ದರೂ ಮನಸ್ಸಿನೊಳಗೇ ಉಳಿದುಬಿಡುತ್ತದೆ ಎಂದಿದ್ದಾರೆ. ವಿಡಿಯೋ ಚಿತ್ರೀಕರಿಸುವಾಗ ಸೈಕಲ್ ಸವಾರನೊಬ್ಬ ಹಾದುಹೋಗಿದ್ದಕ್ಕೆ ಕೆಲವರು ಸಿಟ್ಟಾಗಿದ್ದು ಆತನಿಗೆ ಬೈದಿದ್ದಾರೆ. ಇದೆಲ್ಲದರ ಜತೆಗೆ, ಆ ತಾತನ ಖುಷಿಗೆ ಕಾರಣನಾದ ಗಿಟಾರ್ ವಾದಕನಿಗೂ ಅಭಿನಂದನೆ ಸಲ್ಲಿಸಿದ್ದಾರೆ.
Dance like no one is watching. Some sassy moves going on there. Enjoy your Saturday. Rain permitting. https://t.co/qf2te6XaFF
— loricolly?#FBPE (@loricolly) May 22, 2021
ಇದನ್ನೂ ಓದಿ:
Viral Video: ಇದಪ್ಪಾ ಬ್ಯಾಲೆನ್ಸಿಂಗ್ ಅಂದ್ರೆ! ಈ ’ಬಾಟಲಿಪುತ್ರಿ‘ಯ ಸಾಹಸವನ್ನು ನೋಡಿದರೆ ಮೈ ಜುಂ ಎನ್ನದೇ ಇರದು
ವಿಮಾನ ನಿಲ್ದಾಣದೊಳಗೆ ಕಪಿರಾಯನ ಭರ್ಜರಿ ಬೇಟೆ; ವೈರಲ್ ಆಯ್ತು ಹಳೇ ವಿಡಿಯೋ