Viral Video : ಬರೆವಣಿಗೆ ನಮಗೆ ಏಕಾಗ್ರತೆ ತಂದುಕೊಡುತ್ತದೆ. ಅಧ್ಯಯನಕ್ಕೆ ಪ್ರೇರೇಪಿಸುತ್ತದೆ. ಜ್ಞಾನವಾಹಕವಾಗುತ್ತದೆ. ಸಂವಹನಕ್ಕೆ ಪ್ರೇರೇಪಣೆ ನೀಡುತ್ತದೆ. ಆಲೋಚನೆ ಅಸ್ತಿತ್ವಕ್ಕೆ ಕಾರಣವಾಗುತ್ತದೆ. ಇಷ್ಟು ಮಾತ್ರ ನಮಗೆ ಗೊತ್ತಿತ್ತು. ಕ್ರಮೇಣ ಆಧುನಿಕ ಜೀವನಶೈಲಿಯಲ್ಲಿ ಅಡಕವಾಗಿರುವ ಥೆರಪಿಗಳ ಲಿಸ್ಟಿನಲ್ಲಿ ಗ್ರಾಫಾಲಜಿ ಕೂಡ ಸೇರಿಕೊಂಡಿತು. ಕೀಲಿಮಣೆ ಇದ್ದರೂ ಜನರಲ್ಲಿ ಮತ್ತೆ ಕೈಯಿಂದ ಬರೆಯುವ ಆಸಕ್ತಿ ಮೊಳೆಯಿತು. ಕಾರಣ ನಮ್ಮ ಬರೆವಣಿಗೆಯ ಶೈಲಿಯನ್ನು ನಿರ್ದಿಷ್ಟವಾಗಿ ಅಭ್ಯಾಸ ಮಾಡುತ್ತಾ ಹೋದರೆ ನಮ್ಮ ವ್ಯಕ್ತಿತ್ವದೋಷಗಳು ಪರಿಹಾರಗೊಳ್ಳುತ್ತವೆ ಎಂಬ ಸಂಶೋಧನಾತ್ಮಕ ಅಧ್ಯಯನವನ್ನು ಈ ಗ್ರಾಫಾಲಜಿ ಸೂಚಿಸುತ್ತದೆ. ಆದರೆ ಬರೆವಣಿಗೆಗೆ ಸಂಬಂಧಿಸಿದ ಇದೆಲ್ಲವನ್ನೂ ಮೀರಿದ ವಿಶಿಷ್ಟ ಪ್ರತಿಭೆಯುಳ್ಳ ಯುವತಿಯೊಬ್ಬಳ ವಿಡಿಯೋ ಇದೀಗ ವೈರಲ್ ಆಗಿದೆ.
ಇದನ್ನೂ ಓದಿ— Ashok Maheshwari (@Me_Maheshwari) February 5, 2023
ಈಕೆ ಮಂಗಳೂರಿನ ಆದಿ ಸ್ವರೂಪಾ. ವಯಸ್ಸು 17. ಎರಡೂ ಕೈಗಳಿಂದ ಏಕಕಾಲಕ್ಕೆ ಬರೆಯಬಲ್ಲಳು. ಕಣ್ಣು ಮುಚ್ಚಿಯೂ ಬರೆಯಬಲ್ಲಳು. ಎರಡೂ ಕೈಗಳಿಂದ ಒಟ್ಟು 11 ಶೈಲಿಯಲ್ಲಿ ಕೈಬರಹವನ್ನು ಬರೆಯಬಲ್ಲಳು. ಇಷ್ಟೇ ಅಲ್ಲ ಮತ್ತೆ ಇಂಗ್ಲಿಷ್ ಮತ್ತು ಕನ್ನಡವನ್ನು ಒಂದೇ ಸಲಕ್ಕೆ ಬರೆಯಬಲ್ಲಳು! ಈಕೆಯ ಬರೆಯುವ ಈ ಕೌಶಲ ಅತ್ಯಂತ ವಿಶೇಷ. ಒಟ್ಟಾರೆಯಾಗಿ ನೋಡಿದಾಗ, ಈಕೆಯ ಎಡ ಮತ್ತು ಬಲಮೆದುಳು ಏಕಕಾಲಕ್ಕೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದು ತಿಳಿದುಬರುತ್ತದೆ. 1 ಮಿಲಿಯನ್ ಜನರಲ್ಲಿ ಒಬ್ಬರಿಗೆ ಮಾತ್ರ ಈ ವಿಶೇಷ ಸಾಮರ್ಥ್ಯ ಇರುತ್ತದೆ.
ಇದನ್ನೂ ಓದಿ : ವೃದ್ಧರೊಬ್ಬರು ಕೋತಿಗೆ ರೊಟ್ಟಿ ಕೊಡಲು ಪ್ರಯತ್ನಿಸುತ್ತಿರುವ ಆಪ್ತವಾದ ವಿಡಿಯೋ ವೈರಲ್
ಸ್ವರೂಪಾ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿ ಹೀಗೆ ಎರಡೂ ಕೈಗಳಿಂದ ಬರೆಯಲು ಆಸಕ್ತರಿಗೆ ತರಬೇತಿಯನ್ನೂ ಈಕೆ ಕೊಡುತ್ತಿದ್ದಾಳೆ. ಈಕೆ ಹತ್ತನೇ ತರಗತಿಯ ಪರೀಕ್ಷೆಯನ್ನು ಎರಡೂ ಕೈಯಿಂದಲೇ ಬರೆದಿರುವುದು. ಟ್ವಿಟರ್ನಲ್ಲಿ ವೈರಲ್ ಆಗಿರುವ ಈಕೆಯ ವಿಡಿಯೋ ಅನ್ನು ನೆಟ್ಟಿಗರು ಕುತೂಹಲದಿಂದ ನೋಡುತ್ತಿದ್ದಾರೆ.
ಇದನ್ನೂ ಓದಿ : ಯುರೋಪ್ಗೆ ಡ್ರಗ್ಸ್ ಕಳ್ಳಸಾಗಣೆ ಮಾಡುವುದು ಹೇಗೆ? ವ್ಯಕ್ತಿಯೊಬ್ಬನಿಗೆ ಚಾಟ್ಜಿಪಿಟಿ ಸಲಹೆ ಕೊಟ್ಟಾಗ
ಈಕೆ ಎರಡೂ ಕೈಗಳಿಂದ ಪರೀಕ್ಷೆ ಬರೆದಾಗ ತೆಗೆದುಕೊಂಡ ಸಮಯವೆಷ್ಟು. ಇತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ತೆಗೆದುಕೊಂಡ ಸಮಯವನ್ನೇ ಈಕೆ ತೆಗೆದುಕೊಂಡಿದ್ದಾಳೆಯೆ ಹೇಗೆ ಎಂದು ಅನೇಕರು ಕೇಳಿದ್ದಾರೆ. ಕೆಲವರು ಎರಡೂ ಕೈಯಿಂದ ತಾವು ಬಿಡಿಸಿದ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಶಭಾಷ್ ಮಗಳೇ ಎಂದಿದ್ದಾರೆ ಅನೇಕರು. ಆದರೂ ನೀವು ಮೋದೀಜಿ ಪ್ರತಿಭೆಯೊಂದಿಗೆ ಸ್ಪರ್ಧಿಸಲಾರಿರಿ ಎಂದು ಒಬ್ಬರು ಹೇಳಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:19 pm, Mon, 6 February 23