Viral Video: ‘ಕ್ಯಾನ್ಸರ್​ಮುಕ್ತ​ಳಾಗಿ ನಿಮ್ಮೆದುರು ಇಂದು ಹೀಗೆ ಇರುತ್ತೇನೆಂದು ಅಂದುಕೊಂಡಿರಲೇ ಇಲ್ಲ’

Breast Cancer : ಕ್ಯಾನ್ಸರ್​ ಎಂದಾಕ್ಷಣ ಅನೇಕರು ಭಯಭೀತರಾಗಿ ಬದುಕುವ ಆಸೆಯನ್ನೇ ಕಳೆದುಕೊಂಡುಬಿಡುತ್ತಾರೆ. ಆದರೆ ಏನೇ ಆದರೂ ನಾನು ಬದುಕುತ್ತೇನೆ ಎಂಬ ಆತ್ಮವಿಶ್ವಾಸ ಮತ್ತು ಹೋರಾಟ ಮನೋಭಾವ ಕೆಲವರಲ್ಲಿ ಮಾತ್ರ ಇರುತ್ತದೆ. ಈ ಪೈಕಿ ಸುಮಿತಿ ಮಲ್ಹೋತ್ರಾ ಗಮನ ಸೆಳೆಯುತ್ತಾರೆ. 'ನಾನೀಗ ಸ್ತನ ಕ್ಯಾನ್ಸರ್ ಮುಕ್ತಳಾಗಿದ್ದೇನೆ' ಎನ್ನುತ್ತಾರೆ. ಹೇಗೆ ಎಂದು ತಿಳಿದುಕೊಳ್ಳಬೇಕೆ?

Viral Video: ಕ್ಯಾನ್ಸರ್​ಮುಕ್ತ​ಳಾಗಿ ನಿಮ್ಮೆದುರು ಇಂದು ಹೀಗೆ ಇರುತ್ತೇನೆಂದು ಅಂದುಕೊಂಡಿರಲೇ ಇಲ್ಲ
ಸುಮಿತಿ ಮಲ್ಹೋತ್ರಾ

Updated on: Oct 04, 2023 | 3:10 PM

Cancer: ‘ನನ್ನ ಅಮ್ಮ 5 ವರ್ಷಗಳ ಕಾಲ ಕ್ಯಾನ್ಸರ್​ನೊಂದಿಗೆ ಹೋರಾಡಿದಳು. ಆಕೆ ಆರೋಗ್ಯದಿಂದ ಮತ್ತು ಸಂತೋಷದಿಂದ ಇರುವಂತೆ ನೋಡಿಕೊಳ್ಳುತ್ತೇನೆಂದು ಪ್ರಮಾಣ ಮಾಡಿದ್ದೆ. ಆದರೆ 2021ರಲ್ಲಿ ನಮ್ಮನ್ನೆಲ್ಲ ಬಿಟ್ಟುಹೋದಳು. ಈ ಅಗಲಿಕೆಯನ್ನು ಸಹಿಸಿಕೊಳ್ಳಲಾರದೆ ನಾನು ಸುಮಾರು ಆರು ತಿಂಗಳುಗಳ ಕಾಲ ಖಿನ್ನತೆಗೆ (Cancer) ಜಾರಿದೆ. ನಂತರ ಎಡಗಡೆಯ ಸ್ತನದಲ್ಲಿ ಗಡ್ಡೆ ಕಾಣಿಸಿಕೊಂಡಿತು, ನಂತರ ನಾನೂ ಕ್ಯಾನ್ಸರ್​ಗೆ ಒಳಗಾದೆ. 16 ಸಲ ಕಿಮೋಥೆರಪಿ, 20 ಸಲ ರೇಡಿಯೇಷನ್​ ಥೆರಪಿಯಿಂದ ಕೂದಲು ಉದುರಿತು. ನನ್ನ ಕುಟುಂಬ ನನ್ನೊಂದಿಗೆ ನಿಂತಿತು, ನನ್ನೊಳಗಿನ ಹೋರಾಟಗಾರ್ತಿಯನ್ನು ಬೆಂಬಲಿಸಿತು.’

ಇದನ್ನೂ ಓದಿ: Viral: ‘ಆನೆ ನನ್ನ ಮನೆ ಧ್ವಂಸ ಮಾಡಿ ನನಗೆ ಜೀವನ ಪಾಠ ಕಲಿಸಿತು’

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ನನ್ನ 10 ವರ್ಷದ ಮಗ ತನ್ನ ಕಾಳಜಿಯನ್ನು ತಾನೇ ತೆಗೆದುಕೊಳ್ಳಲಾರಂಭಿಸಿದ. ಒಂದು ದಿನ ವೈದ್ಯರು, ‘ನಾನು ಕ್ಯಾನ್ಸರ್​ಮುಕ್ತಳಾಗಿದ್ದೇನೆ ಎಂದು ಹೇಳಿದರು’ ಒಂದು ದಿನ ನಿಮ್ಮೆಲ್ಲರೆದುರು ಹೀಗೆ ಎದ್ದುಕುಳಿತುಕೊಳ್ಳುತ್ತೇನೆ ಎಂದು ಅಂದುಕೊಂಡಿರಲೇ ಇಲ್ಲ!’ ಸುಮಿತಿ ಮಲ್ಹೋತ್ರಾ

ಕ್ಯಾನ್ಸರ್​ಮುಕ್ತೆ ಸುಮಿತಿ ಮಲ್ಹೋತ್ರಾ

ನಾಲ್ಕು ಗಂಟೆಗಳ ಹಿಂದೆ officialpeopleofindia ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ ಸುಮಾರು 23,000 ಜನರು ಲೈಕ್ ಮಾಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿರುವ ಎಲ್ಲ ಖಾತೆಗಳ ಪೈಕಿ ಇದು ಅತ್ಯಂತ ಸ್ಪೂರ್ತಿ ತುಂಬುತ್ತದೆ ಎಂದಿದ್ದಾರೆ ಒಬ್ಬರು. ನೀವು ಅತ್ಯಂತ ಸುಂದರವಾಗಿದ್ದೀರಿ ಹಾಗೆಯೇ ಧೈರ್ಯಶಾಲಿ ಕೂಡ. ನೀವು ಆರೋಗ್ಯದಿಂದ ಸಂತೋಷದಿಂದ ಇರುತ್ತೀರಿ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಹುಟ್ಟುಮಚ್ಚೆ; ಈ ‘ಸಂಜಯ’ನಿಂದಲೇ ಸಾಗರದ ‘ಮಂದಾರ’ ಅರಳಿದ ಕಥೆ ಇದು

ಗಟ್ಟಿಗಾತಿ ನೀವು, ನಾನು 20 ವರ್ಷದ ಹಿಂದೆ ಕ್ಯಾನ್ಸರ್​ಮುಕ್ತಳಾಗಿದ್ದೇನೆ ಎಂದಿದ್ದಾರೆ ಮತ್ತೊಬ್ಬರು. ನೀವು ಅನೇಕ ಜನರಿಗೆ ಮಾದರಿ, ಆರೋಗ್ಯ ಹೀಗೆಯೇ ದೃಢವಾಗಿರಲಿ ಎಂದಿದ್ದಾರೆ ಮಗದೊಬ್ಬರು. ನಿಮ್ಮ ನಗು ಬಹಳ ಸುಂದರವಾಗಿದೆ, ಅದು ಇನ್ನಷ್ಟು ಆತ್ಮವಿಶ್ವಾಸದಿಂದ ಕಂಗೊಳಿಸಲಿ ಎಂದಿದ್ದಾರೆ ಅನೇಕರು. ಮಹಿಳೆಯರೇ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ, ಪ್ರತೀ ವರ್ಷವೂ ನೀವು ಮಾಸ್ಟರ್​ ಹೆಲ್ಥ್​ ಚೆಕಪ್​ಗೆ ಹೋಗಿ ಎಂದಿದ್ದಾರೆ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ