ಸೀಲಿಂಗ್​ ಒಡೆದು ಹೊರಬಿದ್ದ ಜೋಡಿ ಹೆಬ್ಬಾವನ್ನು ನೋಡಿ ಬೆಚ್ಚಿ ಬೀಳುತ್ತಿರುವ ನೆಟ್ಟಿಗರು

| Updated By: ಶ್ರೀದೇವಿ ಕಳಸದ

Updated on: Feb 16, 2023 | 11:45 AM

Pythons : ಸೀಲಿಂಗ್​ನಿಂದ ತೂರಿಬಿದ್ದ ಬಾಲ ನೋಡಿ ಸಣ್ಣ ಹಾವಿರಬಹುದು ಎಂದುಕೊಂಡಿದ್ದಾರೆ. ಸೀಲಿಂಗ್​ ಒಡೆದು ಹೊರಬಿದ್ದ ಆ ಹೆಬ್ಬಾವುಗಳ ಗಾತ್ರ ನೋಡಿ ಅಲ್ಲಿದ್ದ ಜನ ಭಯದಿಂದ ಕೂಗಿದ್ದಾರೆ. ನೋಡಿ ವಿಡಿಯೋ.

ಸೀಲಿಂಗ್​ ಒಡೆದು ಹೊರಬಿದ್ದ ಜೋಡಿ ಹೆಬ್ಬಾವನ್ನು ನೋಡಿ ಬೆಚ್ಚಿ ಬೀಳುತ್ತಿರುವ ನೆಟ್ಟಿಗರು
ಸೀಲಿಂಗ್​ನಿಂದ ಹೊರಬಿದ್ದ ಎರಡು ಹೆಬ್ಬಾವುಗಳು
Follow us on

Viral Video : ಹಾವು, ಹಲ್ಲಿ, ಗೆದ್ದಲು, ಇಲಿ, ಹೆಗ್ಗಣ ಮುಂತಾದವುಗಳಿಗೆ ಮನೆಗಳು, ಅಂಗಡಿಗಳು, ಗೋದಾಮುಗಳು, ಕಾರ್ಖಾನೆಗಳು ಅತ್ಯಂತ ಸುರಕ್ಷಿತ ತಾಣಗಳು. ಹಾಗಾಗಿ ಯಾವ ಸಮಯದಲ್ಲಿ ಎಲ್ಲಿ ಅಡಗಿರುತ್ತವೆ ಎನ್ನುವುದು ಗೊತ್ತೇ ಆಗದಂತೆ ಜೀವಿಸುತ್ತಿರುತ್ತವೆ. ಹಾಗೆಂದು ಅವುಗಳು ಗೂಡೊಳಗೆ, ಗೋಡೆಯೊಳಗೆ ಎಷ್ಟು ದಿನಗಳಂತ ಇರಲು ಸಾಧ್ಯ? ಒಮ್ಮೆ ಅವುಗಳೇ ಹೊರಬರಬೇಕು ಅಥವಾ ಆ ಸ್ಥಳವನ್ನು ಸ್ವಚ್ಛಗೊಳಿಸುವಾಗ ಅವೇ ಕಣ್ಣಿಗೆ ಬೀಳಬೇಕು. ಉಳಿದ ಪ್ರಾಣಿಗಳು ಬಿಡಿ. ಹೆಬ್ಬಾವು ಕಣ್ಣಿಗೆ ಬಿದ್ದರೆ? ಒಂದಲ್ಲ ಎರಡು!

ನೋಡಿ ಸೀಲಿಂಗ್​​ನಿಂದ ಮೊದಲು ಬಾಲ ಇಳಿಬಿದ್ದಿದೆ. ಸಣ್ಣ ಹಾವಿರಬೇಕೆಂದು ಹಾವು ಹಿಡಿಯುವವರು ಅದನ್ನು ಎಳೆಯಲು ನೋಡಿದಾಗ ಸೀಲಿಂಗ್​ ಮುರಿದುಬಿದ್ದಿದೆ. ಅದರೊಳಗಿಂದ ಜೋಡಿ ಹೆಬ್ಬಾವುಗಳು ಕಾಣಿಸಿಕೊಂಡಿವೆ. ಅಲ್ಲಿದ್ದ ಜನ ಭಯಭೀತರಾಗಿ ಕೂಗಾಡಿದ್ದಾರೆ. ಊಹಿಸಲು ಅಸಾಧ್ಯವಾದಂಥ ದೃಶ್ಯ, ಯಾರಿಗೂ ಗಾಬರಿ ಸಹಜ ಅಲ್ಲವೆ?

ಇದನ್ನೂ ಓದಿ : ತೆಲಂಗಾಣದ ಆಸ್ಪತ್ರೆಯಲ್ಲಿ ರೋಗಿಯ ಬೆಡ್ ಕೆಳಗೆ ಹಾವು ಪತ್ತೆ, ಈ ತಿಂಗಳಲ್ಲಿ ಇದು ಎರಡನೇ ಪ್ರಕರಣ

ಈಗಾಗಲೇ ಈ ವಿಡಿಯೋ ಅನ್ನು ಸುಮಾರು 15,000 ಜನ ನೋಡಿದ್ದಾರೆ. ಅವುಗಳು  ಹೊರಬೀಳುತ್ತಿದ್ದಂತೆ ನಿಜಕ್ಕೂ ನನ್ನ ಎದೆಬಡಿತ ನಿಂತೇಹೋಯಿತು ಎಂದು ಒಬ್ಬರು ಹೇಳಿದ್ದಾರೆ. ಇಂಡೋನೇಶಿಯಾ, ಮಲೇಶಿಯಾದ ಮನೆಗಳಲ್ಲಿ ಇವೆಲ್ಲ ಸರ್ವೇಸಾಮಾನ್ಯ ಎಂದಿದ್ದಾರೆ ಮತ್ತೊಬ್ಬರು. ಇದು ಅನಕೊಂಡಾ ಅಥವಾ ಪೈಥಾನ್​? ಎಂದು ಮಗದೊಬ್ಬರು ಕೇಳಿದ್ದಾರೆ.

ಇದನ್ನೂ ಓದಿ : ಉತ್ತರಪ್ರದೇಶದ ಶಾಲಾ ಬಸ್ಸಿನಲ್ಲಿ ಹೆಬ್ಬಾವು ಪತ್ತೆ, ವಿಡಿಯೋ ವೈರಲ್

ನಾನು ಮೊದಲ ಸಲ ನೋಡಿದ ಭಯಾನಕ ದೃಶ್ಯವಿದು ಎಂದು ಇನ್ನೂ ಒಬ್ಬರು ಹೇಳಿದ್ದಾರೆ. ಈ ವಿಡಿಯೋ ಅಪ್​ಲೋಡ್ ಮಾಡಿ ನನಗೆ ಕನಸಿನಲ್ಲಿಯೂ ಭಯ ಬೀಳುವಂತೆ ಮಾಡಿದ್ದೀರಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಇದು ಬಹುಶಃ ಚೀನಾದಲ್ಲಿ ಇರಬೇಕು. ಅವರಿಗೆ ಎಲ್ಲವೂ ಆಹಾರವೇ. ಅದಕ್ಕೇ ಸಾಕಿಕೊಂಡಿದ್ದಿರಬೇಕು ಎಂದಿದ್ದಾರೆ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:38 am, Thu, 16 February 23