ಮತ್ತೆ ನೆಟ್ಟಿಗರ ಮನಕದ್ದ ಈ ಅಜ್ಜಿಯ ಗರ್ಭಾ ನೃತ್ಯ

| Updated By: ಶ್ರೀದೇವಿ ಕಳಸದ

Updated on: Oct 06, 2022 | 3:33 PM

Garbha Dance : ಈ ಅಜ್ಜಿ ಇಷ್ಟೊಂದು ನಿರಾಯಾಸವಾಗಿ, ಅನುಭವಿಸಿ ಗರ್ಭಾ ನೃತ್ಯ ಮಾಡಿದ್ದಕ್ಕೇ ಹಳೆಯದಾದರೂ ಈಗ ಮತ್ತೆ ವೈರಲ್ ಆಗುತ್ತಿದೆ ಈ ವಿಡಿಯೋ. ನೀವೂ ಒಮ್ಮೆ ನೋಡಿಬಿಡಿ.

ಮತ್ತೆ ನೆಟ್ಟಿಗರ ಮನಕದ್ದ ಈ ಅಜ್ಜಿಯ ಗರ್ಭಾ ನೃತ್ಯ
Old woman gracefully performs Garba
Follow us on

Viral Video : ಹಳೆಯ ವಿಡಿಯೋ ಮತ್ತೆ ವೈರಲ್ ಆಗಿದೆ ಎಂದರೆ ವಿಡಿಯೋ ಕಂಟೆಂಟ್​ ಬಹಳ ಚೆನ್ನಾಗಿದೆ ಎಂದರ್ಥ. ಹಿರಿಯ ಮಹಿಳೆಯೊಬ್ಬರು ಗರ್ಭಾ ನೃತ್ಯ ಮಾಡಿದ ಹಳೆಯ ವಿಡಿಯೋ ಈಗ ಮತ್ತೆ ನವರಾತ್ರಿಯ ಸಮಯದಲ್ಲಿ ವೈರಲ್ ಆಗಿದೆ. ಸಾಕಷ್ಟು ಗರ್ಭಾ ನೃತ್ಯದ ವಿಡಿಯೋಗಳು ಆನ್​ಲೈನ್​ನಲ್ಲಿ ಕಾಣಿಸಿಕೊಂಡರೂ ಈ ಹಿರಿಯ ಮಹಿಳೆಯರ ಗರ್ಭಾ ನೃತ್ಯ ಮಾತ್ರ ಆಕರ್ಷಕವಾಗಿದೆ. ಎಷ್ಟೊಂದು ನಿರಾಯಾಸವಾಗಿ ನರ್ತಿಸಿದ್ದಾರೆ ಗಮನಿಸಿ. ದೇವೇಶ್​ ಮೀರ್ಚಂದಾನಿ ಎಂಬುವವರ ಯೂಟ್ಯೂಬ್ ಚಾನೆಲ್​ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

ಸರಳವಾದ ಸೀರೆಯನ್ನುಟ್ಟು ನೃತ್ಯವನ್ನು ಆನಂದಿಸುವುದನ್ನು ನೋಡಿದ ಯಾರಿಗೂ ಅರೆ ವ್ಹಾ ಎನ್ನಿಸದೇ ಇರದು. ಈಕೆ ನೃತ್ಯವನ್ನು ಅನುಭವಿಸುತ್ತಿದ್ದಾರೆ ಎನ್ನುವುದಕ್ಕೆ ಮುಖದ ಮೇಲಿನ ನಗುವೇ ಸಾಕ್ಷಿ. ನೃತ್ಯದ ಮಟ್ಟುಗಳು ಕೂಡ ತತ್​ಕ್ಷಣವೇ ಯೋಚಿಸಿ ಮಾಡುವಂಥವು. ಈ ವಿಡಿಯೋ 2019 ರ ಅಕ್ಟೋಬರ್​ನಲ್ಲಿ ಹಂಚಿಕೊಳ್ಳಲಾಗಿದೆ. ಈ ತನಕ 1.9 ಮಿಲಿಯನ್​ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 13,000ಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ವಿಡಿಯೋ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋಡಿ ಮಾಡುವಂಥ ನೃತ್ಯ ಎಂದಿದ್ಧಾರೆ ಒಬ್ಬರು. ಮೇಡಮ್ ನೀವು ತುಂಬಾ ಆಕರ್ಷಕವಾಗಿದ್ದೀರಿ. ಪ್ರತೀ ಬಾರಿಯೂ ಈ ನೃತ್ಯ ನೋಡಿದಾಗ ಅಚ್ಚರಿಗೆ ಒಳಗಾಗುತ್ತೇನೆ. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಎಂದಿದ್ದಾರೆ ಮತ್ತೊಬ್ಬರು. ಈ ಆಂಟೀ ನೆಟ್ಟಿಗರ ಮನ ಕದ್ದಿದ್ದಾರೆ ಎಂದಿದ್ದಾರೆ ಮಗದೊಬ್ಬರು.

ಚೆಂದ ನರ್ತಿಸಿದ್ದಾರಲ್ಲವಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 3:32 pm, Thu, 6 October 22