ಈ ಹಾವಿನ ಚಲನೆ ನೋಕಿಯಾ ಐಕಾನಿಕ್​ ಗೇಮ್​ ನೆನಪಿಸುವಂತಿದೆ ಎನ್ನುತ್ತಿದ್ಧಾರೆ ನೆಟ್ಟಿಗರು

Nokia’s Iconic Game : ವಿಡಿಯೋಗೇಮ್​, ಮೊಬೈಲ್​ಗೇಮ್​ಗಳಿಗೆ ಇಂಥ ಪ್ರಾಣಿಗಳೇ ಸ್ಫೂರ್ತಿಯೇನೋ. ಇದೀಗ ಗೋಡೆ ಹತ್ತುತ್ತಿರುವ ಈ ಹಾವಿನ ಕೌಶಲ ನೋಡಿ. ನೆಟ್ಟಿಗರೆಲ್ಲಾ ಹಳೆಯ ನೋಕಿಯಾ ಗೇಮ್​ ನೆನಪಿನಲ್ಲಿ ತೇಲುತ್ತಿದ್ಧಾರೆ.

ಈ ಹಾವಿನ ಚಲನೆ ನೋಕಿಯಾ ಐಕಾನಿಕ್​ ಗೇಮ್​ ನೆನಪಿಸುವಂತಿದೆ ಎನ್ನುತ್ತಿದ್ಧಾರೆ ನೆಟ್ಟಿಗರು
Snake climbing a wall reminds people of Nokia's iconic game
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 06, 2022 | 4:31 PM

Viral Video : ನಮ್ಮೆಲ್ಲರ ಬಾಲ್ಯವೂ ಕೆಲವು ಅಮೂಲ್ಯ ಕ್ಷಣಗಳಿಂದ ಕೂಡಿರುತ್ತವೆ. ಅವು ಆಗಾಗ ನೆನಪಾಗಿ ಆ ದಿನಗಳನ್ನು ನೆನೆದು ಮನಸ್ಸು ತಂಪಾಗುತ್ತಿರುತ್ತದೆ. ಈಗ ಫೇಸ್​ಬುಕ್​ನಲ್ಲಿ ವೈರಲ್ ಆಗಿರುವ ಈ ವಿಡಿಯೋ ಏನನ್ನು ನೆನಪಿಸುತ್ತದೆ? ಈ ಹಾವು ತನ್ನ ಪಾಡಿಗೆ ತಾನು ಗೋಡೆಯನ್ನು ಏರುತ್ತಿದೆ. ಇನ್ನೂ ಯೋಚಿಸಿ. ಹೌದಲ್ಲವೆ? ನೀವು ಆರಂಭದಲ್ಲಿ ಬೇಸಿಕ್​ ನೋಕಿಯಾ ಮೊಬೈಲ್​ನಲ್ಲಿ ಆಡುತ್ತಿದ್ದ ಐಕಾನಿಕ್ ಗೇಮ್​ ಅನ್ನು ಈ ಹಾವಿನ ವಿಡಿಯೋ ನೆನಪಿಸುತ್ತಿದೆಯಲ್ಲ? ಈ ಹಾವಿನ ಗೋಡೆ ಏರುವ ಕೌಶಲವನ್ನು ನೋಡಿದ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ.

ಕೊರೊನಾಡೋ ನ್ಯಾಷನಲ್ ಮೆಮೋರಿಯಲ್ ಎಂಬ ಫೇಸ್​ಬುಕ್​ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಕೆಲ ದಿನಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋವನ್ನು 1,000 ಕ್ಕೂ ಹೆಚ್ಚು ಜನರು ಮೆಚ್ಚಿದ್ದಾರೆ. ವಿವಿಧ ಪ್ರತಿಕ್ರಿಯೆಗಳಿಂದ ಜನರು ಈ ಪೋಸ್ಟ್​ಗೆ ಸ್ಪಂದಿಸಿದ್ದಾರೆ. ‘ನಾನು ನನ್ನ ಹಳೆಯ ನೋಕಿಯಾ ಹ್ಯಾಂಡ್​ಸೆಟ್​ನಲ್ಲಿ ಈ ಆಟವನ್ನು ಆಡುತ್ತಿದ್ದೆ. ಆದರೂ ಆ ಎನಿಮೇಷನ್ ಅಷ್ಟೊಂದು ಚೆನ್ನಾಗಿರಲಿಲ್ಲ’ ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ಅಬ್ಬಾ ಇದು ಥೇಟ್ ವಿಡಿಯೋಗೇಮ್​ನಂತೆಯೇ ಕಾಣುತ್ತಿದೆ. ಅದ್ಭುತ ಹಾವು! ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಿಮಗೀಗ ಹಳೆಯ ಹ್ಯಾಂಡ್​ಸೆಟ್​ ಬೇಕು ಅನ್ನಿಸುತ್ತಿದೆಯಾ? ಹುಚ್ಚುಹಿಡಿದು ಆಡುತ್ತಿದ್ದ ಆ ದಿನಗಳನ್ನು ನೆನಪಿಸಿಕೊಳ್ಳಿ ಒಮ್ಮೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:29 pm, Thu, 6 October 22

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ