Video Viral: ಮ್ಯಾಗಿಯನ್ನು ಮೈಕ್ರೋಸ್ಕೋಪ್ ಮೂಲಕ ನೋಡಿದಾಗ ಬ್ಯಾಕ್ಟಿರೀಯಾ ಪತ್ತೆ; ಇಲ್ಲಿದೆ ನೋಡಿ ವಿಡಿಯೋ
ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದರೇ ಇನ್ನು ಮುಂದೆ ಮ್ಯಾಗಿ ನೂಡಲ್ಸ್ ತಿನ್ನಲು ಹೆದರುವುದಂತೂ ಖಂಡಿತಾ. ಹೌದು ವಿಡಿಯೋದಲ್ಲಿ ಮೈಕ್ರೋಸ್ಕೋಪ್ ಮೂಲಕ ಮ್ಯಾಗಿಯನ್ನು ನೋಡಿದಾಗ ಅದರಲ್ಲಿ ಸಾಕಷ್ಟು ಸೂಕ್ಷ್ಮಾಣೂ ಜೀವಿಗಳು ಹರಿದಾಡುತ್ತಿರುವುದು ಕಂಡುಬಂದಿದೆ.
ಕೈಗೆಟುಕುವ ಬೆಲೆಯಲ್ಲಿ ಮತ್ತು ನಿಮಿಷಗಳಲ್ಲಿ ತಯಾರಿಸಿ ಹೊಟ್ಟೆ ತುಂಬಿಸಿಕೊಳ್ಳಲು ಬಯಸುವ ಪ್ರತಿಯೊಬ್ಬರಿಗೂ ಮ್ಯಾಗಿ ನೂಡಲ್ಸ್ ಸಖತ್ ಫೇವರೇಟ್. ಆದರೆ ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದರೇ ಇನ್ನು ಮುಂದೆ ಮ್ಯಾಗಿ ನೂಡಲ್ಸ್ ತಿನ್ನಲು ಹೆದರುವುದಂತೂ ಖಂಡಿತಾ. ಹೌದು ವೈರಲ್ ಆಗಿರುವ ವಿಡಿಯೋದಲ್ಲಿ ಮೈಕ್ರೋಸ್ಕೋಪ್ ಮೂಲಕ ಮ್ಯಾಗಿಯನ್ನು ನೋಡಿದಾಗ ಅದರಲ್ಲಿ ಸಾಕಷ್ಟು ಸೂಕ್ಷ್ಮಾಣೂ ಜೀವಿಗಳು ಹರಿದಾಡುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
@cooltechtipz ಎಂಬ ಟ್ವಿಟರ್ ಖಾತೆಯಲ್ಲಿ ಮೇ 22 ರಂದು ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ನಾಲ್ಕು ದಿನಗಳಲ್ಲಿ 3.2 ಮಿಲಿಯನ್ ಅಂದರೆ 30 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ 14 ಸಾವಿರಕ್ಕೂ ಹೆಚ್ಚಿನ ಜನರು ವಿಡಿಯೋಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
The image of the Noodle we consume daily under the microscope: 👀 pic.twitter.com/01axZ8kuNV
— Learn Something (@cooltechtipz) May 22, 2024
ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಕಾಮೆಂಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ” ಎಲ್ಲಾ ಆಹಾರಗಳಲ್ಲಿಯೂ ಸೂಕ್ಷ್ಮಾಣು ಜೀವಿ ಸಾಮಾನ್ಯ. ತರಕಾರಿಗಳಲ್ಲಿಯೂ ಇಂತಹ ಚಿಕ್ಕ ಚಿಕ್ಕ ಬಾಕ್ಟೀರಿಯಾ ಇರುತ್ತದೆ. ಅದಿಕ್ಕೆ ನೀರಿನಲ್ಲಿ ಚೆನ್ನಾಗಿ ಕುದಿಸಿ, ಬೇಯಿಸಿ ತಿನ್ನಿ ” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ