Viral Video : ಬಾಲಿವುಡ್ ಹಾಡುಗಳು ಜಗತ್ತಿನೆಲ್ಲೆಡೆ ಸೆಳೆಯುತ್ತವೆ ಎನ್ನುವುದಕ್ಕೆ ಆಗಾಗ ವೈರಲ್ ಆಗುವ ವಿಡಿಯೋಗಳೇ ಸಾಕ್ಷಿ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ ಪಾಕಿಸ್ತಾನಿ ದಂಪತಿ ಬಾಲಿವುಡ್ನ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಓಂಕಾರ ಸಿನೆಮಾದ ಬೀಡಿ ಜಲೈಲೆ ಹಾಡಿಗೆ ಮನಸೋತ ಇವರು ಮದುವೆ ಮನೆಯಲ್ಲಿ ಹೀಗೆ ತನ್ಮಯರಾಗಿ ನರ್ತಿಸಿದ್ಧಾರೆ. 2010ರಲ್ಲಿ ಬಿಡುಗಡೆಯಾದ ಈ ಸಿನೆಮಾದ ಹಾಡನ್ನು ಸುನಿಧಿ ಚವ್ಹಾಣ್ ಮತ್ತು ಸುಖವಿಂದರ್ ಸಿಂಗ್ ಹಾಡಿದ್ಧಾರೆ. ಆದರೆ ಇಷ್ಟು ವರ್ಷಗಳ ನಂತರವೂ ಇದು ಕೇಳಿದವರನ್ನು ಕುಣಿಯುವಂತೆ ಮಾಡುತ್ತಿದೆ.
ಬಿಲಲ್ ಇಯಾಝ್ ಎನ್ನುವವರು ಈ ವಿಡಿಯೋ ಅನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸುಮಾರು 48,000 ಜನರು ಈ ವಿಡಿಯೋ ನೋಡಿದ್ದಾರೆ. ಈ ಹಿಂದೆ ಕೂಡ ಪಾಕಿಸ್ತಾನಿ ಯುವತಿಯೊಬ್ಬಳು ಲತಾ ಮಂಗೇಶ್ಕರ್ ಹಾಡಿದ ಮೇರಾ ದಿಲ್ ಯೇ ಪುಕಾರೆ ಹಾಡಿಗೆ ನರ್ತಿಸಿದ ವಿಡಿಯೋ ವೈರಲ್ ಆಗಿದ್ದನ್ನು ನೆನಪಿಸಿಕೊಳ್ಳಬಹುದು. ಈ ಹಾಡಿಗೆ ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣಗಳ ಇನ್ಫ್ಲ್ಯೂಯೆನ್ಸರ್ಗಳು ರೀಲ್ಗಳನ್ನು ಮಾಡಿದರು. ಮಿಲಿಯನ್ಗಟ್ಟಲೆ ಜನರು ಈ ವಿಡಿಯೋ ನೋಡಿ ಹಳೆಯ ಈ ಸುಮಧುರವಾದ ಹಾಡಿನಲ್ಲಿ ಕಳೆದುಹೋದರು. ಇದೀಗ ಈ ಕೆಳಗಿನ ಲಿಂಕ್ನಲ್ಲಿ ಓಂಕಾರ ಸಿನೆಮಾದ ಬೀಡಿ ಜಲೈಲೆ ಮೂಲ ಹಾಡನ್ನು ಕೇಳಬಹುದು, ನೋಡಬಹುದು.
ಇದೀಗ ಪಾಕಿಸ್ತಾನಿ ದಂಪತಿ ಈ ಹಾಡಿಗೆ ನರ್ತಿಸಿದ ವಿಡಿಯೋ ಅನ್ನು ಸುಮಾರು 3.2 ಮಿಲಿಯನ್ ಜನರು ನೋಡಿದ್ದಾರೆ. ನೆಟ್ಟಿಗರು ಇವರಿಬ್ಬರ ನೃತ್ಯವನ್ನು ನೋಡಿ ಉತ್ಸಾಹಿತರಾಗಿದ್ದಾರೆ. ಏನಿಲ್ಲವೆಂದರೆ ವಾರಕ್ಕೊಂದಾದರೂ ಬಾಲಿವುಡ್ನ ಹಾಡುಗಳು ಹೀಗೆ ವೈರಲ್ ಆಗುತ್ತಲೇ ಇರುತ್ತವೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:08 pm, Tue, 10 January 23