ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಡಿಯೋಗಳು ಒಂದಕ್ಕಿಂತ ಒಂದು ಮಜವಾಗಿರುತ್ತದೆ. ಕುತೂಹಲಕಾರಿಯೂ ಆಗಿರುತ್ತದೆ. ಸದ್ಯ ಅಂತಹುದೇ ಒಂದು ವಿಶಿಷ್ಟ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಸದ್ದು ಮಾಡುತ್ತಿದೆ. ಯುವತಿಯೋರ್ವಳು ತನ್ನ ಕತ್ತಿನ ಸುತ್ತ ಹಾವೊಂದನ್ನು ಸುತ್ತಿಕೊಂಡಿದ್ದಾಳೆ. ಮೇಲ್ನೋಟಕ್ಕೆ ನೋಡಲು ಹಾವು, ನೀಲಿ ಬಣ್ಣದ್ದೆಂದು ಕಾಣಿಸುತ್ತದೆ. ಆದರೆ ನೀವು ಸೂಕ್ಷ್ಮವಾಗಿ ವಿಡಿಯೋವನ್ನು ಗಮನಿಸದರೆಗೆ ವಿವಿಧ ಬಣ್ಣಗಳಿರುವುದು ಕಾಣಿಸುತ್ತದೆ. ಹಾವಿ ಅಬ್ಬ! ಇದ್ಯಾವ ಹಾವು ಮಾರಾಯ್ರೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವುದಂತೂ ಖಚಿತ.
ದ ರೆಪ್ಟೈಲ್ ಝೂ ಎಂಬ ಇನ್ಸ್ಟಾಗ್ರಾಂ ಪೇಜ್ನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋ ಎಂತವರನ್ನೂ ಮತ್ತೊಮ್ಮೆ ನೋಡುವಂತೆ ಸೆಳೆಯುವಂತಿದೆ. ಜೀವ ಜಗತ್ತಿನ ವಿಸ್ಮಯಗಳ ಕುರಿತ ನಿಮಗೆ ಈಗಲೇ ಮಾಹಿತಿ ಇದ್ದಲ್ಲಿ ನೀವು ಈ ಹಾವಿನ ಕುರಿತು ಇನ್ನಷ್ಟು ಸಂಶೋಧನೆ ಮಾಡಲು ಮುಂದಾಗುತ್ತೀರಿ. ಬಣ್ಣ ಬದಲಿಸುವ ಗೋಸುಂಬೆಯನ್ನು ಸಹಜವಾಗಿ ನಾವು ಕೇಳಿಯೇ ಇರುತ್ತೇವೆ. ಆದರೆ ಇಂತಹ ಹಾವನ್ನು ನೋಡಲಂತೂ ಸಾಧ್ಯವೇ ಇಲ್ಲ ಎಂದು ನೆಟ್ಟಿಗರು ಈ ವಿಡಿಯೋ ವೀಕ್ಷಿಸಿದ ನಂತರ ಕಾಮೆಂಟ್ ಬಾಕ್ಸ್ನಲ್ಲಿ ಉದ್ಘಾರ ತೆಗೆದಿದ್ದಾರೆ.
ರೇನ್ ಬೋ ಹಾವು ಎಂದು ಕರೆಯಲ್ಪಡುವ ಈ ಹಾವು ಅಮೆರಿಕದ ಕಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದಂತೆ. ಸಾಮಾನ್ಯವಾಗಿ 36ರಿಂದ 48 ಇಂಚಿನರೆಗೂ ಬೆಳೆಯುವ ಇವು, ಒಮ್ಮೊಮ್ಮೆ 66 ಇಂಚಿನವರೆಗೂ ಬೆಳೆಯುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಗುಜರಾತ್ನ ನರ್ಮದಾ ನದಿಯಲ್ಲಿ ಮೊಸಳೆಗಳಿಗೆ ಆಹಾರವಾದ ವ್ಯಕ್ತಿಯ ಶವ: ವಿಡಿಯೋ ವೈರಲ್
ಟೀ ಎಸ್ಟೇಟ್ನಲ್ಲಿ ಮರಿಗಳ ಸಮೇತ ನೆಲೆನಿಂತ ಗಜಪಡೆ! ಅಲ್ಲೇ ಊಟ, ಓಡಾಟ ನಿದ್ರೆ; ವಿಡಿಯೋ ವೈರಲ್
(Viral Video rainbow snake viral in social media)