Viral Video: ಅಸ್ಸಾಂನಲ್ಲಿ  ಪತ್ತೆಯಾಯಿತು 4 ಕಣ್ಣುಗಳಿರುವ  ಅಪರೂಪದ ಮೀನು; ವೈರಲ್‌ ವಿಡಿಯೋ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 03, 2024 | 6:00 PM

ಅಸ್ಸಾಂನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಇಂತಹ ಸ್ಥೀತಿಯಲ್ಲಿ ತುಂಬಿ ಹರಿಯುತ್ತಿದ್ದ ನೀರಿನಲ್ಲಿ ಕರೀಂಗಂಜ್‌ನ ವ್ಯಕ್ತಿಯೊಬ್ಬರು ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ 4 ಕಣ್ಣುಗಳಿರುವ ಅಪರೂಪದ ಮೀನೊಂದು ಬಲೆಗೆ ಬಿದ್ದಿದೆ. ಈ ಕುರಿತ ಸುದ್ದಿಯೊಂದು ಇದೀಗ ವೈರಲ್‌ ಆಗುತ್ತಿದೆ. 

Viral Video: ಅಸ್ಸಾಂನಲ್ಲಿ  ಪತ್ತೆಯಾಯಿತು 4 ಕಣ್ಣುಗಳಿರುವ  ಅಪರೂಪದ ಮೀನು; ವೈರಲ್‌ ವಿಡಿಯೋ
Follow us on

ರೀಮಲ್ ಚಂಡಮಾರುತದ ಪರಿಣಾಮ ಅಸ್ಸಾಂ ರಾಜ್ಯದಲ್ಲಿ ಭಾರೀ ಮಳೆಯಾಗಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತುಂಬಿ ಹರಿಯುತ್ತಿದ್ದ ನೀರಿನಲ್ಲಿ ಕರೀಗಂಜ್‌ ಜಿಲ್ಲೆಯ ವ್ಯಕ್ತಿಯೊಬ್ಬರು ಮೀನುಗಾರಿಕೆ ನಡೆಸುತ್ತಿದ್ದ  ಸಂದರ್ಭದಲ್ಲಿ 4 ಕಣ್ಣುಗಳು ಹಾಗೂ ಉದ್ದನೆಯ ಬೆನ್ನುಮೂಳೆಯನ್ನು ಹೊಂದಿರುವ ಅಪರೂಪದ ಮೀನೊಂದು ಬಲೆಗೆ ಬಿದ್ದಿದೆ. ಈ ಕುರಿತ ವಿಡಿಯೋವೊಂದನ್ನು  ಆಲ್‌ ಇಂಡಿಯಾ ರೇಡಿಯೋ ನ್ಯೂಸ್‌  ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಆಲ್‌ ಇಂಡಿಯಾ ರೇಡಿಯೋ ನ್ಯೂಸ್‌ (@airnewsalerts) ಈ ಅಪರೂಪದ ಮೀನಿನ ವಿಡಿಯೋವನ್ನು ಅಧೀಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಕರೀಂಗಂಜ್‌ ಜಿಲ್ಲೆಯಲ್ಲಿ ಪ್ರವಾಹದ ನೀರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅಪರೂಪದ ಜಾತಿಯ ಮೀನು ಪತ್ತೆಯಾಗಿದ್ದು, ಇದು ನಾಲ್ಕು ಕಣ್ಣುಗಳು ಹಾಗೂ ಉದ್ದನೆಯ ಬೆನ್ನೆಲುಬನ್ನು ಹೊಂದಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ ನಾಲ್ಕು ಕಣ್ಣುಗಳು ಹಾಗೂ ಉದ್ದವಾದ ಬೆನ್ನುಮೂಳೆಯನ್ನು ಹೊಂದಿರುವ  ಕಪ್ಪು ಮತ್ತು ಬಿಳಿ ಮಿಶ್ರಿತ ಬಣ್ಣದ ಅಪರೂಪದ  ಮೀನನ್ನು ಕಾಣಬಹುದು. ಪ್ರವಾಹದ ನೀರಿನಲ್ಲಿ ಬಂದ  ಈ ಅಪರೂಪದ ಜಾತಿಯ ಮೀನನ್ನು ನೋಡಲು ಹತ್ತಾರು ಜನರು ಅಲ್ಲಿ ನೆರೆದಿದ್ದರು.

ಇದನ್ನೂ ಓದಿ: ಇಲ್ಲಿ ಮಹಿಳೆಯರು ತಮ್ಮ ಬ್ರಾಗಳನ್ನು ಬೇಲಿಯಲ್ಲಿ ನೇತು ಹಾಕುವ ವಿಶಿಷ್ಟ ಸಂಪ್ರದಾಯ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:


ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 85.5 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಇದು ಕ್ರೋಕ್‌ ಫಿಶ್‌, ಈ ಮೀನುಗಳನ್ನು ಅಕ್ವೇರಿಯಂ ಶುಚಿಗೊಳಿಸಲು ಬಳಸಲಾಗುತ್ತದೆ ಎಂದು ಒಬ್ಬ ಬಳಕೆದಾರರು ಕಾಮೆಂಟ್‌ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ