Viral Video: ಟೀ, ಊಟ ನೀಡಿ, ಅಮ್ಮನಿಗೆ ವಿಡಿಯೋ ಕಾಲ್ ಮಾಡಿಕೊಟ್ಟ ಉಕ್ರೇನಿಯನ್ನರು; ಕಣ್ಣೀರು ಹಾಕಿದ ರಷ್ಯನ್ ಸೈನಿಕರು

| Updated By: ಸುಷ್ಮಾ ಚಕ್ರೆ

Updated on: Mar 04, 2022 | 5:11 PM

ಉಕ್ರೇನಿಯನ್ ಮಹಿಳೆ ರಷ್ಯಾದ ಸೈನಿಕನಿಗೆ ತನ್ನ ತಾಯಿಗೆ ಕರೆ ಮಾಡಲು ಸಹಾಯ ಮಾಡಿದ್ದಾಳೆ. ಅಲ್ಲದೆ, ಹಲವು ಉಕ್ರೇನಿಯನ್ ಪ್ರಜೆಗಳು ರಷ್ಯಾದ ಸೈನಿಕರಿಗೆ ಆಹಾರ, ಬಟ್ಟೆಯನ್ನು ನೀಡಿದ್ದಾರೆ.

Viral Video: ಟೀ, ಊಟ ನೀಡಿ, ಅಮ್ಮನಿಗೆ ವಿಡಿಯೋ ಕಾಲ್ ಮಾಡಿಕೊಟ್ಟ ಉಕ್ರೇನಿಯನ್ನರು; ಕಣ್ಣೀರು ಹಾಕಿದ ರಷ್ಯನ್ ಸೈನಿಕರು
ರಷ್ಯಾ ಸೈನಿಕರು
Follow us on

ನವದೆಹಲಿ: ಉಕ್ರೇನ್‌ನಲ್ಲಿ ರಷ್ಯಾದ (Russia) ಆಕ್ರಮಣವು ಒಂದು ವಾರದ ನಂತರ ಮುಂದುವರಿದಂತೆ, ರಷ್ಯಾದ ಸೈನಿಕರು ತಮ್ಮ ಸ್ವಂತ ವಾಹನಗಳನ್ನು ಹಾಳುಮಾಡುತ್ತಿದ್ದಾರೆ ಮತ್ತು ಶರಣಾಗುತ್ತಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಬ್ರಿಟೀಷ್ ಗುಪ್ತಚರ ಸಂಸ್ಥೆಯೊಂದು ಈ ಕುರಿತ ಕ್ಲಿಪ್‌ಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ರಷ್ಯಾದ ಕೆಲವು ಸೈನಿಕರು ಅಳುವುದು ಮತ್ತು ವಸ್ತುಗಳ ಪೂರೈಕೆಯ ಬಗ್ಗೆ ದೂರು ನೀಡುತ್ತಿರುವುದನ್ನು ಕೇಳಬಹುದು. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಸುಮಾರು 1 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ರಷ್ಯಾದ ಸೈನಿಕರು ಶರಣಾದ ನಂತರ ಕಣ್ಣೀರು ಸುರಿಸುತ್ತಿರುವುದನ್ನು ನೋಡಬಹುದು. ಈ ವಿಡಿಯೋದಲ್ಲಿ ಸೈನಿಕನು ಬೆಚ್ಚಗಿನ ಬಟ್ಟೆಗಳನ್ನು ಕಟ್ಟಿಕೊಂಡು, ಬಿಸಿ ಚಹಾವನ್ನು ಕುಡಿಯುತ್ತಾ, ಕೇಕ್ ತಿನ್ನುತ್ತಿರುವುದನ್ನು ಕಾಣಬಹುದು. ಆತನನ್ನು ಹಲವಾರು ಉಕ್ರೇನಿಯನ್ನರು (Ukraine) ಸುತ್ತುವರೆದಿದ್ದಾರೆ, ಅವರಲ್ಲಿ ಒಬ್ಬರು ಫೋನ್ ಹಿಡಿದಿದ್ದಾರೆ.

ಟ್ವೀಟ್ ಪ್ರಕಾರ, ಉಕ್ರೇನಿಯನ್ ಮಹಿಳೆ ರಷ್ಯಾದ ಸೈನಿಕನಿಗೆ ತನ್ನ ತಾಯಿಗೆ ಕರೆ ಮಾಡಲು ಸಹಾಯ ಮಾಡಿದ್ದಾಳೆ. ಅಲ್ಲದೆ, ಹಲವು ಉಕ್ರೇನಿಯನ್ ಪ್ರಜೆಗಳು ರಷ್ಯಾದ ಸೈನಿಕರಿಗೆ ಆಹಾರ, ಬಟ್ಟೆಯನ್ನು ನೀಡಿದ್ದಾರೆ. ಇದರಿಂದ ಭಾವುಕರಾಗಿರುವ ರಷ್ಯಾದ ಸೈನಿಕರು ಕಣ್ಣೀರು ಹಾಕಿದ್ದಾರೆ. ತನ್ನ ತಾಯಿಯ ಜೊತೆ ಉಕ್ರೇನಿಯನ್ ಮಹಿಳೆಯ ಫೋನ್​ನಲ್ಲಿ ವಿಡಿಯೋ ಕಾಲ್ ಮಾಡಿದ ರಷ್ಯಾದ ಸೈನಿಕ ವೀಡಿಯೋ ಕಾಲ್‌ನಲ್ಲಿ ಕಣ್ಣೀರು ಸುರಿಸುತ್ತಾ ತನ್ನ ಅಮ್ಮನಿಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾನೆ.

ಇದರಲ್ಲಿ ಆ ಯುವಕರ ತಪ್ಪೇನೂ ಇಲ್ಲ. ಅವರಿಲ್ಲಿ ಬಂದಿರುವುದು ನಾಯಕನ ಆಜ್ಞೆ ಪಾಲಿಸಲು. ಆತನಿಗೆ ನಮ್ಮ ಮೇಲೆ ಯಾವ ದ್ವೇಷವೂ ಇಲ್ಲ ಎಂದು ಉಕ್ರೇನಿಯನ್ ಜನರು ರಷ್ಯಾದ ಸೈನಿಕರ ಕುರಿತು ಮಾತನಾಡುವುದನ್ನು ಕೂಡ ವಿಡಿಯೋದಲ್ಲಿ ನೋಡಬಹುದು. ರಷ್ಯಾದ ಸೈನ್ಯದ ಬಗ್ಗೆ ಸಹಾನುಭೂತಿ ತೋರಿಸಿದ್ದಕ್ಕಾಗಿ ಉಕ್ರೇನಿಯನ್ನರನ್ನು ನೆಟ್ಟಿಗರು ಹೊಗಳಿದ್ದಾರೆ.

ಇದನ್ನೂ ಓದಿ: Viral Video: ಸತ್ತ ಗೆಳೆಯನನ್ನು ಹೂಳಲು ತಾವೇ ಬಾಯಿಯಿಂದ ಮಣ್ಣು ತೋಡಿದ ನಾಯಿಗಳು; ಕಣ್ತುಂಬುವ ವಿಡಿಯೋ ಇಲ್ಲಿದೆ

Viral Video: ಬ್ಯಾಗ್ ಕದಿಯಲು ಬಂದ ಕಳ್ಳರಿಗೆ ಮಣ್ಣು ಮುಕ್ಕಿಸಿದ ಯುವತಿ; ಈ ವಿಡಿಯೋ ನೋಡಿದರೆ ನಗದಿರಲು ಸಾಧ್ಯವೇ ಇಲ್ಲ!

Published On - 5:04 pm, Fri, 4 March 22