Viral Video : ಸಾಕಷ್ಟು ಕಾಡುಪ್ರಾಣಿಗಳು ನಾಡಿಗೆ ಬಂದ ವಿಡಿಯೋಗಳು ಈಗಾಗಲೇ ವೈರಲ್ ಆಗಿರುವುದನ್ನು ನೋಡಿದ್ದೀರಿ. ಅವು ಬರುವುದೇನಿದ್ದರೂ ಆಹಾರ ಹುಡುಕಿಕೊಂಡೇ. ಹೀಗೆ ಬರುವಾಗ ದಾರಿ ತಪ್ಪಿ ಊರೊಳಗೆ ನುಗ್ಗಿರುತ್ತವೆ. ಇಲ್ಲಿರುವ ಈ ವಿಡಿಯೋದಲ್ಲಿಯೂ ಹಾಗೇ ಆಗಿದೆ. ಈ ಚಿರತೆಗಳು ನಾಸಿಕ್ಗೆ ಬಂದಿವೆ. ಬಂದು ಸರಸರನೆ ಬೆಕ್ಕಿನಂತೆ ತೆಂಗಿನ ಮರ ಏರಿವೆ, ಎಳನೀರು ಕುಡಿಯಲು ಅಲ್ಲ, ಅಲ್ಲಿ ಮನುಷ್ಯರ ಸುಳಿವು ಸಿಕ್ಕಿದ್ದರಿಂದ ಪ್ರಾಣಭಯದಿಂದ ತಪ್ಪಿಸಿಕೊಳ್ಳಲು.
Look at the agility of these cats. Somewhere from MH via WhatsApp. That is why leopards are omnipresent in India. pic.twitter.com/LruY3Hfnom
— Parveen Kaswan, IFS (@ParveenKaswan) September 18, 2022
67,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿ ಅಚ್ಚರಿಪಟ್ಟಿದ್ದಾರೆ. ವಾಟ್ಸಪ್ ಮೂಲಕ ಬಂದ ಈ ವಿಡಿಯೋ ಅನ್ನು ಐಪಿಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಿ, ‘ಇವುಗಳ ಚುರುಕುತನವೇ ಇವುಗಳ ವೈಶಿಷ್ಟ್ಯ. ಎಲ್ಲ ರೀತಿಯ ಪ್ರದೇಶಗಳಲ್ಲಿಯೂ ಇವು ಹೊಂದಿಕೊಳ್ಳುತ್ತವೆ. ರಾಜಸ್ಥಾನ ಮತ್ತು ರಾಕಿ ಬೆಟ್ಟಗಳಿಂದ ಈಶಾನ್ಯದ ಅರಣ್ಯ, ಮುಂಬೈ ಮತ್ತು ಗುರಗಾಂವ್ ನಗರಗಳಿಂದ ಹಿಮಾಲಯದ ಭೂಪ್ರದೇಶಗಳಲ್ಲಿಯೂ ಇವು ವಾಸಿಸುತ್ತವೆ. ಆಹಾರಬೇಟೆಯಲ್ಲಿ ಅತೀ ಚುರುಕಾದ ಪ್ರಾಣಿಗಳು ಇವು’ ಎಂದಿದ್ದಾರೆ.
ಈ ಪೋಸ್ಟ್ನಿಂದ ಪ್ರೇರಿತರಾದ ಅವರು ಮತ್ತೊಂದು ಪೋಸ್ಟ್ ಟ್ವೀಟ್ ಮಾಡಿದ್ಧಾರೆ.
‘ಚಹಾ ತೋಟಗಳು ಮತ್ತು ಕಬ್ಬಿನ ತೋಟಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಚಹಾ ತೋಟ ಇವುಗಳಿಗೆ ಬಹುನೆಚ್ಚಿನ ಜಾಗಗಳು. ಸುಲಭಕ್ಕೆ ಆಹಾರ ಅಲ್ಲಿ ದೊರಕುತ್ತದೆ. ವಿಶ್ರಾಂತಿಗಾಗಿ ನೆರಳು ಲಭ್ಯವಿರುತ್ತದೆ. ಮರಿಗಳನ್ನೂ ಆರಾಮವಾಗಿ ಸಾಕಬಹುದು’ ಎಂದು ತಾವು ತೆಗೆದ ಚಿರತೆಯ ಫೋಟೋ ಕೂಡ ಹಂಚಿಕೊಂಡಿದ್ದಾರೆ.
ವನ್ಯಲೋಕದ ವೈಶಿಷ್ಟ್ಯ ಅಪಾರ.
ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ
Published On - 2:53 pm, Wed, 21 September 22