Viral Video : ನಮ್ಮೆಲ್ಲರ ಬಾಲ್ಯವೂ ಕೆಲವು ಅಮೂಲ್ಯ ಕ್ಷಣಗಳಿಂದ ಕೂಡಿರುತ್ತವೆ. ಅವು ಆಗಾಗ ನೆನಪಾಗಿ ಆ ದಿನಗಳನ್ನು ನೆನೆದು ಮನಸ್ಸು ತಂಪಾಗುತ್ತಿರುತ್ತದೆ. ಈಗ ಫೇಸ್ಬುಕ್ನಲ್ಲಿ ವೈರಲ್ ಆಗಿರುವ ಈ ವಿಡಿಯೋ ಏನನ್ನು ನೆನಪಿಸುತ್ತದೆ? ಈ ಹಾವು ತನ್ನ ಪಾಡಿಗೆ ತಾನು ಗೋಡೆಯನ್ನು ಏರುತ್ತಿದೆ. ಇನ್ನೂ ಯೋಚಿಸಿ. ಹೌದಲ್ಲವೆ? ನೀವು ಆರಂಭದಲ್ಲಿ ಬೇಸಿಕ್ ನೋಕಿಯಾ ಮೊಬೈಲ್ನಲ್ಲಿ ಆಡುತ್ತಿದ್ದ ಐಕಾನಿಕ್ ಗೇಮ್ ಅನ್ನು ಈ ಹಾವಿನ ವಿಡಿಯೋ ನೆನಪಿಸುತ್ತಿದೆಯಲ್ಲ? ಈ ಹಾವಿನ ಗೋಡೆ ಏರುವ ಕೌಶಲವನ್ನು ನೋಡಿದ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ.
ಕೊರೊನಾಡೋ ನ್ಯಾಷನಲ್ ಮೆಮೋರಿಯಲ್ ಎಂಬ ಫೇಸ್ಬುಕ್ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಕೆಲ ದಿನಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋವನ್ನು 1,000 ಕ್ಕೂ ಹೆಚ್ಚು ಜನರು ಮೆಚ್ಚಿದ್ದಾರೆ. ವಿವಿಧ ಪ್ರತಿಕ್ರಿಯೆಗಳಿಂದ ಜನರು ಈ ಪೋಸ್ಟ್ಗೆ ಸ್ಪಂದಿಸಿದ್ದಾರೆ. ‘ನಾನು ನನ್ನ ಹಳೆಯ ನೋಕಿಯಾ ಹ್ಯಾಂಡ್ಸೆಟ್ನಲ್ಲಿ ಈ ಆಟವನ್ನು ಆಡುತ್ತಿದ್ದೆ. ಆದರೂ ಆ ಎನಿಮೇಷನ್ ಅಷ್ಟೊಂದು ಚೆನ್ನಾಗಿರಲಿಲ್ಲ’ ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ಅಬ್ಬಾ ಇದು ಥೇಟ್ ವಿಡಿಯೋಗೇಮ್ನಂತೆಯೇ ಕಾಣುತ್ತಿದೆ. ಅದ್ಭುತ ಹಾವು! ಎಂದಿದ್ದಾರೆ ಮತ್ತೊಬ್ಬರು.
ನಿಮಗೀಗ ಹಳೆಯ ಹ್ಯಾಂಡ್ಸೆಟ್ ಬೇಕು ಅನ್ನಿಸುತ್ತಿದೆಯಾ? ಹುಚ್ಚುಹಿಡಿದು ಆಡುತ್ತಿದ್ದ ಆ ದಿನಗಳನ್ನು ನೆನಪಿಸಿಕೊಳ್ಳಿ ಒಮ್ಮೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:29 pm, Thu, 6 October 22