Viral Video : ರಾಕ್ಷಸನಂತೆ ವೃದ್ಧ ತಂದೆಯನ್ನು ಥಳಿಸಿದ ಮಗ,ನೆಟ್ಟಿಗರು ಫುಲ್ ಗರಂ!

ಮಗುವನ್ನು ಜಗತ್ತಿಗೆ ಪರಿಚಯಿಸಿದವಳು ತಾಯಿಯಾದರೆ, ಜಗತ್ತನ್ನು ಪರಿಚಯಿಸಿದವನು ತಂದೆ. ಅಪ್ಪ ಎನ್ನುವ ಅದ್ಭುತ ವ್ಯಕ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಪ್ಪ ಮಗನ ಪ್ರೀತಿ ಹಾಗೂ ಬಾಂಧವ್ಯವನ್ನು ಸಾರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ಮಗನು ತಂದೆಗೆ ಥಳಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಗರಂ ಆಗಿದ್ದಾರೆ.

Viral Video : ರಾಕ್ಷಸನಂತೆ ವೃದ್ಧ ತಂದೆಯನ್ನು ಥಳಿಸಿದ ಮಗ,ನೆಟ್ಟಿಗರು ಫುಲ್ ಗರಂ!
ವೃದ್ಧ ತಂದೆಯನ್ನು ಥಳಿಸಿದ ಮಗ
Updated By: ಅಕ್ಷತಾ ವರ್ಕಾಡಿ

Updated on: Apr 28, 2024 | 4:21 PM

ಪ್ರತಿಯೊಬ್ಬರ ಜೀವನದಲ್ಲಿ ತಂದೆ ತಾಯಿಯರ ಪಾತ್ರ ಅಗಾಧವಾಗಿದೆ. ಮಕ್ಕಳ ಏಳಿಗೆಯನ್ನು ಸದಾ ಬಯಸುವ ತಂದೆ ತಾಯಂದಿರು ಮಕ್ಕಳ ಸುಖ ಸಂತೋಷಕ್ಕಾಗಿ ತಮ್ಮ ಆಸೆಯನ್ನು ತ್ಯಾಗ ಮಾಡುತ್ತಾರೆ. ಹೀಗಾಗಿ ಈ ಜಗತ್ತಿನಲ್ಲಿ ಕೆಟ್ಟ ಮಕ್ಕಳು ಬೇಕಾದರೂ ಇರಬಹುದು, ಆದರೆ ಕೆಟ್ಟ ತಂದೆ ತಾಯಿ ಇರಲ್ಲ ಎನ್ನುವ ಮಾತಿದೆ. ಆದರೆ ಈಗಿನ ಕಾಲದಲ್ಲಿ ಹೆತ್ತತಂದೆ ತಾಯಿಯನ್ನು ಕಡೆಗಣಿಸುವವರಿಗೇನು ಕೊರತೆಯಿಲ್ಲ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಗನೊಬ್ಬನು ತಂದೆಗೆ ಥಳಿಸಿದ್ದಾನೆ.

ಇವ ಕಾತಿರವನ್ ಎನ್ನುವ ಹೆಸರಿನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಈ ವಿಡಿಯೋದ ಪ್ರಾರಂಭದಲ್ಲಿ ಮನೆಯ ಸಿಟ್ ಔಟ್ ನಲ್ಲಿ ಕುಳಿತ ವೃದ್ಧ ತಂದೆಯಲ್ಲಿಗೆ ಬಂದ ಮಗನು ಮನಬಂದಂತೆ ಥಳಿಸಿದ್ದಾನೆ. ಅಲ್ಲೇ ಇದ್ದ ವ್ಯಕ್ತಿಯು ಥಳಿಸುತ್ತಿದ್ದ ವ್ಯಕ್ತಿಯನ್ನು ಅಲ್ಲಿಂದ ಕರೆದುಕೊಂಡು ಹೋಗಲು ಯತ್ನಿಸಿದ್ದಾನೆ. ಮಗನ ಕೈಯಿಂದ ಹೊಡೆಸಿಕೊಂಡ ವ್ಯಕ್ತಿಯು ಪ್ರಜ್ಞೆ ತಪ್ಪಿ ಬಿದ್ದಿದ್ದು, ಬಾಯಿಂದ ರಕ್ತ ಹೊರ ಬರುತ್ತಿರುವುದನ್ನು ಕಾಣಬಹುದು.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಅಂಬಾನಿ ಮನೆಯಲ್ಲಿ ಅದ್ದೂರಿಯಾಗಿ ಆಚರಿಸಲಾಗುವ ‘ಆಮ್ ಮನೋರಥ’ ಹಬ್ಬದ ಬಗ್ಗೆ ಇಲ್ಲಿದೆ ಮಾಹಿತಿ

ಅಲ್ಲೇ ಇದ್ದ ಮಹಿಳೆಯು ವ್ಯಕ್ತಿಯನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಿದ್ದು, ಈ ವಿಡಿಯೋಗೆ ನಾನಾ ರೀತಿಯ ಕಾಮೆಂಟ್ ಗಳು ವ್ಯಕ್ತವಾಗಿದ್ದು, ಬಳಕೆದಾರರೊಬ್ಬರು, ‘ದಯವಿಟ್ಟು ಈತನನ್ನು ಬಂಧಿಸಿ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಈತನನ್ನು ಕೂಡಲೇ ಬಂಧಿಸಿ, ಈತನಿಗೆ ತಂದೆಯ ಪ್ರೀತಿಯೇನು ಎಂಬುದು ತಿಳಿದಿಲ್ಲ’ ಎಂದಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ