Viral Video: ‘ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಅಸ್ತಿತ್ವಕ್ಕಾಗಿ ಮುಗ್ಧಜೀವಗಳನ್ನು ಬಳಸಿಕೊಂಡಿದ್ದೀರಿ!’

Cat : ವ್ಯೂವ್ಸ್, ಹಿಟ್ಸ್​, ಶೇರ್ಸ್​ಗಾಗಿ ನೀವು ಪ್ರಾಣಿಗಳ ವಿಡಿಯೋ ಬಳಸಿಕೊಳ್ಳುತ್ತಿದ್ದೀರಿ. ಇಲ್ಲಿರುವ ವಿಡಿಯೋದಲ್ಲಿ ಬೇರೆಬೇರೆ ಮೂರು ಬೆಕ್ಕುಗಳಿವೆ ಎನ್ನುತ್ತಿದ್ದಾರೆ ನೆಟ್ಟಿಗರು. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

Viral Video: ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಅಸ್ತಿತ್ವಕ್ಕಾಗಿ ಮುಗ್ಧಜೀವಗಳನ್ನು ಬಳಸಿಕೊಂಡಿದ್ದೀರಿ!
ಅನಾಥ ಬೆಕ್ಕು
Edited By:

Updated on: May 19, 2023 | 4:42 PM

Orphan Kitten: ಪುಟ್ಟ ಜೀವಕ್ಕೆ ಇರುವ ಹೊಟ್ಟೆಯಾದರೂ ಎಷ್ಟು ಇದರ ಹಸಿವಾದರೂ ಎಷ್ಟು ದೊಡ್ಡದು? ಯಾರು ಹೀಗಿದನ್ನು ಹೀಗೆ ರೈಲ್ವೇ ಹಳಿಯ ಮೇಲೆ ಬಿಟ್ಟು ಹೋದವರು? ಈ ವಿಡಿಯೋದಲ್ಲಿ ಹಸಿವಿನಿಂದ ಪ್ರಜ್ಞೆ ಕಳೆದುಕೊಂಡ ಈ ಬೆಕ್ಕನ್ನು ಯಾರೋ ಒಬ್ಬರು ಹೀಗೆ ಎತ್ತಿಕೊಳ್ಳುತ್ತಾರೆ. ಮೈದಡವಿ ನೀರುಣಿಸುತ್ತಿದ್ದಂತೆ ಕಣ್ದೆರೆಯುತ್ತದೆ. ಮನೆಗೆ ಕರೆದುಕೊಂಡು ಹೋಗಿ ಹಾಲೂಡಿಸುತ್ತಾರೆ. ನಂತರ ಕೊಟ್ಟ ಆಹಾರವನ್ನು ತಿನ್ನಲಾರಂಭಿಸುತ್ತದೆ. ಅಂತೂ ರೈಲುಪಾಲಾಗುತ್ತಿದ್ದ ಬೆಕ್ಕು ಮರುಜೀವ ಪಡೆದಿದೆ ಎಂದು ವಿಡಿಯೋ ನೋಡಿದಾಕ್ಷಣ ಅನ್ನಿಸುವುದುಂಟು. ಆದರೆ ನೆಟ್ಟಿಗರಲ್ಲಿ ಕೆಲವರು ಬೇರೆಯದೇ ಧ್ವನಿ ಎತ್ತಿದ್ದಾರೆ. ಯಾಕಿರಬಹುದು?

ಈಗಾಗಲೇ ಸುಮಾರು 3 ಲಕ್ಷ ಜನರು ಈ ವಿಡಿಯೋ ಅನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಆದರೆ ಕೆಲವರು, ನೀವು ನಿಮ್ಮ ಇನ್​ಸ್ಟಾಗ್ರಾಂ ಪುಟಕ್ಕೆ ಪ್ರಚಾರ ಸಿಗಲೆಂದು ಹೀಗೆ ಮುಗ್ಧ ಜೀವದ ವಿಡಿಯೋ ಅನ್ನು ಬಳಸಿಕೊಳ್ಳುತ್ತಿದ್ದೀರಿ ಎಂದು ತಕರಾರು ಎತ್ತಿದ್ದಾರೆ. ಲೈಕ್ಸ್​, ಶೇರ್, ವ್ಯೂವ್ಸ್​​​ಗಾಗಿ ಜನ ಏನೂ ಮಾಡುತ್ತಾರೆ. ನೀವು ಬೇರೆಬೇರೆ ಮೂರು ಬೆಕ್ಕುಗಳ ವಿಡಿಯೋ ಅನ್ನು ಎಡಿಟ್​ ಮಾಡಿ ಒಂದು ರೀಲ್​ ಮಾಡಿದ್ದೀರಿ. ಹಾಗಾಗಿ ನಿಮ್ಮ ಮೇಲೆ ಮೊಕದ್ದಮೆ ಹೂಡಬೇಕು ಎಂದು ಎಂದು ಮತ್ತೊಬ್ಬರು ದನಿ ಏರಿಸಿದ್ದಾರೆ.

ಇದನ್ನೂ ಓದಿ : Viral: ಬಿಯರ್ ಬೇಕಿತ್ತೇನೋ ನಾಗಣ್ಣ; ಬಾರ್​ ಮ್ಯಾನೇಜರ್​ನ ಡ್ರಾಯರಿನಲ್ಲಿ ಮಲಗಿದ್ದ ಹಾವು

ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಅಸ್ತಿತ್ವ ಕಂಡುಕೊಳ್ಳಲು ಅಥವಾ ಹಣ ಗಳಿಸಲು ಮುಗ್ಧ ಪ್ರಾಣಿಗಳ ವಿಡಿಯೋ, ಫೋಟೋ ಬಳಸುವುದನ್ನು ನಿಲ್ಲಿಸಿ. ಕಾನೂನು ಈ ಬಗ್ಗೆ ಗಮನ ಹರಿಸಬೇಕು ಎಂದು ಇನ್ನೊಬ್ಬರು ಹೇಳಿದ್ದಾರೆ. ಆದರೆ ಇನ್ನೂ ಹಲವರು ಮುಗ್ಧ ಜೀವವನ್ನು ಉಳಿಸಿದ್ದೀರಿ. ಪುಣ್ಯದ ಕೆಲಸ, ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ : Viral Video: ಡೇರ್​ಡೆವಿಲ್​ ಮುಸ್ತಾಫಾ; ಆಗೋದಿದೆ ಆರಂಭವು ಆಲಿಂಗನದಲ್ಲಿ, ಒಟ್ನಲ್ಲಿ ಕ್ರಾಂತಿ ಆಗಲಿ!

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು? ಈ ವಿಡಿಯೋದಲ್ಲಿರುವ ಬೆಕ್ಕು ಒಂದೇ ಅಥವಾ ಬೇರೆ ಬೇರೆ ಬೆಕ್ಕಿನ ವಿಡಿಯೋ ಸೇರಿಸಿ ಒಂದು ರೀಲ್ ಮಾಡಲಾಗಿದೆಯೇ? ಹೀಗೆ ಪ್ರಾಣಿಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಿ ಫಾಲೋವರ್ಸ್​ಗಳ ಸಂಖ್ಯೆ ಹೆಚ್ಚು ಮಾಡಿಕೊಳ್ಳುವವರ ಬಗ್ಗೆ ನಿಮ್ಮ ಅನಿಸಿಕೆ ಏನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 4:40 pm, Fri, 19 May 23