
ಆಟವಾಡುತ್ತಿದ್ದ ಬೆಕ್ಕೊಂದು ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ಕಂಡಾಕ್ಷಣ ಶಾಕ್ಗೆ ಒಳಗಾದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಬೆಕ್ಕಿನ ರಿಯಾಕ್ಷನ್ ನೋಡಿ ನಕ್ಕು ನಕ್ಕು ಹೊಟ್ಟೆ ಹುಣ್ಣಗುವುದಂತೂ ಖಂಡಿತಾ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಮುಗ್ಧ ಬೆಕ್ಕು ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ಕಂಡು ಇದಾವುದೋ ಬೇರೆ ಪ್ರಾಣಿ ಇರಬಹುದೆಂದು ಕೋಪಗೊಂಡು ಶಾಕ್ ಆಗಿ ಕನ್ನಡಿಯ ಮುಂದೆ ಕಲ್ಲಿನಂತೆ ನಿಂತಿರುವುದನ್ನು ಕಾಣಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಎರಡೇ ದಿನಗಳಲ್ಲಿ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ.
@CatFrolics ಎಂಬ ‘X’ (ಹಿಂದಿನ ಟ್ವಿಟರ್) ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಜನವರಿ 29ರಂದು ಹಂಚಿಕೊಳ್ಳಲಾದ ವಿಡಿಯೋ ಇಲ್ಲಿಯವರೆಗೆ 36000ಕ್ಕಿಂತಲೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಎರಡು ಹುಲಿಗಳ ನಡುವಿನ ಭೀಕರ ಕಾಳಗ ಹೇಗಿದೆ ನೋಡಿ; ವಿಡಿಯೋ ವೈರಲ್
ವಿಡಿಯೋ ಪ್ರಾರಂಭದಲ್ಲಿ ಬೆಕ್ಕು ಆಟಿಕೆಯ ಜೊತೆಗೆ ಆಟವಾಡುತ್ತಿರುವುದನ್ನು ಕಾಣಬಹುದು. ಇದಾದ ಬಳಿಕ ಆಟಿಕೆ ಕನ್ನಡಿ ಬಳಿಗೆ ಹೋಗಿ ಬಿದ್ದಾಗ ಬೆಕ್ಕು ಅದನ್ನು ತರಲು ಹೋದಾಗ, ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ಕಂಡು ಶಾಕ್ ಆಗಿ ನಿಂತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೆಲ ಹೊತ್ತಿನ ವರೆಗೆ ಕನ್ನಡಿಯಲ್ಲಿ ಪ್ರತಿಬಿಂಬ ಕಂಡು ಕೋಪಗೊಂಡು ಶಾಕ್ ಆಗಿ ನಿಂತಿರುವುದು ನಿಮ್ಮ ಮುಖದಲ್ಲಿ ನಗು ಮೂಡಿಸುವುದು ಖಂಡಿತಾ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:25 pm, Wed, 31 January 24