Viral Video: ‘ಜಾನಿ ಜಾನಿ ಯೆಸ್ ಪಾಪ’ ಇಂಗ್ಲಿಷ್ ಹಾಡನ್ನು ಶಾಸ್ತ್ರೀಯ ಶೈಲಿಯಲ್ಲಿ ಹಾಡಿದ ವ್ಯಕ್ತಿ

| Updated By: ಅಕ್ಷತಾ ವರ್ಕಾಡಿ

Updated on: Jan 21, 2024 | 12:46 PM

ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಬಿಡಿ. ಈ ಎಲ್ಲಾ ಪ್ರತಿಭೆಗಳಿಗೆ ವೇದಿಕೆಯಾಗಿರುವುದೇ ಸೋಶಿಯಲ್ ಮೀಡಿಯಾಗಳು. ಈಗಾಗಲೇ ಅನೇಕರು ತಮ್ಮ ವಿಶೇಷ ಪ್ರತಿಭೆಗಳನ್ನು ಸೋಶಿಯಲ್ ಮೀಡಿಯಾದ ಮೂಲಕ ಪ್ರದರ್ಶಿಸಿ ಫೇಮಸ್ ಆಗಿದ್ದಾರೆ. ಎಲ್ಲಿಯವರೆಗೆ ಹೊಸತನವನ್ನು ಬಯಸುವ ಜನರು ಇರುವ ಜನರು ಇರುತ್ತಾರೋ ಅಲ್ಲಿಯವರೆಗೆ ಈ ಹೊಸ ಪ್ರತಿಭೆಗಳು ಬೆಂಬಲ ಸಿಗುತ್ತಲೇ ಇದೆ. ಇದೀಗ ಅಪರೂಪದ ಪ್ರತಿಭೆಯ ವಿಡಿಯೋವೊಂದು ವೈರಲ್ ಆಗಿದ್ದು, ಇಂಗ್ಲಿಷ್ ಹಾಡೊಂದನ್ನು ಶಾಸ್ತ್ರೀಯ ಶೈಲಿಯಲ್ಲಿ ಹಾಡಿದ್ದಾರೆ.

Viral Video: ಜಾನಿ ಜಾನಿ ಯೆಸ್ ಪಾಪ ಇಂಗ್ಲಿಷ್ ಹಾಡನ್ನು ಶಾಸ್ತ್ರೀಯ ಶೈಲಿಯಲ್ಲಿ ಹಾಡಿದ ವ್ಯಕ್ತಿ
Viral Video
Follow us on

ನಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಬೇಕಾದರೆ ಸಿಕ್ಕ ವೇದಿಕೆಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ತಿಳಿದಿರಬೇಕು. ಈಗಾಗಲೇ ಸಣ್ಣ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಫೇಮಸ್ ಆಗಿರುವವರು ನಮ್ಮ ಸುತ್ತಮುತ್ತಲಿನಲ್ಲಿದ್ದಾರೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರ ಟ್ಯಾಲೆಂಟ್ ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಜಾನಿ ಜಾನಿ ಯೆಸ್ ಪಾಪ ಇಂಗ್ಲಿಷ್ ಹಾಡನ್ನು ಶಾಸ್ತ್ರೀಯ ಶೈಲಿಯಲ್ಲಿ ಹಾಡಿ ವ್ಯಕ್ತಿಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ, ವ್ಯಕ್ತಿಯು ತನ್ನ ತಂಡದೊಂದಿಗೆ ಕುಳಿತಿದ್ದಾರೆ. ಒಬ್ಬರು ತಬಲಾ ಬಾರಿಸುತ್ತಿದ್ದರೆ, ಮತ್ತೊಬ್ಬರು ಹಾರ್ಮೋನಿಯಂ ನುಡಿಸುತ್ತಿದ್ದು, ಉಳಿದವರು ಹಿನ್ನಲೆ ಗಾಯನ ಮಾಡುತ್ತಿದ್ದಾರೆ. ಆದರೆ ಈ ವ್ಯಕ್ತಿಯೂ ‘ಜಾನಿ ಜಾನಿ ಯೆಸ್ ಪಾಪಾ’ ಹಾಡನ್ನು ಶಾಸ್ತ್ರೀಯ ಶೈಲಿಯಲ್ಲಿ ರಾಗಬದ್ಧವಾಗಿ ಹಾಡುತ್ತಿರುವುದನ್ನು ಗಮನಿಸಬಹುದಾಗಿದೆ. ಉಳಿದವರು ಈ ವ್ಯಕ್ತಿಗೆ ಸಂಪೂರ್ಣವಾಗಿ ಬೆಂಬಲ ನೀಡುತ್ತಿದ್ದಾರೆ.

ವೈರಲ್​ ವಿಡಿಯೋ ಇಲ್ಲಿದೆ:

ಇದನ್ನೂ ಓದಿ: ಅಯೋಧ್ಯೆ ರಾಮನ ಪ್ರಾಣಪ್ರತಿಷ್ಠೆ ಕುರಿತು ಟೀಕಿಸುತ್ತಿದ್ದಂತೆ ಕುಸಿದು ಬಿದ್ದ ವೇದಿಕೆ; ಇಲ್ಲಿದೆ ವಿಡಿಯೋ

ರಾಗಬದ್ಧವಾಗಿರುವ ಹಾಡಿರುವ ವಿಡಿಯೋವನ್ನು @MANJULtoons ಹೆಸರಿನ X ಹ್ಯಾಂಡಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ‘ಜಾನಿ ಜಾನಿ ಯೆಸ್ ಪಾಪಾ’ ಹಾಡನ್ನು ಈ ಶೈಲಿಯಲ್ಲಿ ಹಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ಎರಡೂ ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿದೆ. ನೆಟ್ಟಿಗರು ಈ ಹಾಡಿನ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸುವ ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ