Viral Video: ಮಹಿಳೆಯ ಮೇಲೆ ಗರಂ ಆಗಿ ದಾಳಿ ಮಾಡಲು ಮುಂದಾದ ಆಮೆ

| Updated By: ಅಕ್ಷತಾ ವರ್ಕಾಡಿ

Updated on: May 13, 2023 | 6:19 PM

ಕ್ಯಾಮೆರಾದಲ್ಲಿ ಸೆರೆಯಾದ ಭಯಾನಕ ಘಟನೆಯು ಆಮೆಗೆ ನೀರು ಕುಡಿಸುವಾಗ ಮಹಿಳೆ ಹೇಗೆ ಅದರ ಕೋಪಕ್ಕೆ ಗುರಿಯಾಗುತ್ತಾಳೆ ಎಂಬುದನ್ನು ತೋರಿಸುತ್ತದೆ. ಸದ್ಯಕ್ಕೆ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಮೆಗೆ ಇಷ್ಟೊಂದು ಕೋಪವೇ ಎಂದು ನೋಡುಗರು ಆಶ್ಚರ್ಯ ಚಕಿತರಾಗಿದ್ದಾರೆ.

Viral Video: ಮಹಿಳೆಯ ಮೇಲೆ ಗರಂ ಆಗಿ ದಾಳಿ ಮಾಡಲು ಮುಂದಾದ ಆಮೆ
ಆಮೆಯ ವೈರಲ್​ ವಿಡಿಯೋ
Follow us on

ಪ್ರಾಣಿಗಳು ಅವುಗಳ ಮುದ್ದಾದ ಚೇಷ್ಟೆಯಿಂದ ರಂಚಿಸುತ್ತವೆ. ಅದರ ಹೊರತಾಗಿಯೂ ಕೆಲವೊಮ್ಮೆ ಅವುಗಳ ಕೋಪಕ್ಕೆ ಮನುಷ್ಯರು ಗುರಿಯಾಗುದುಂಟು. ಪ್ರಾಣಿಗಳ ದಾಳಿಗೆ ಮನುಷ್ಯರು ಬಳಿಯಾಗಿರುವ ಅದೆಷ್ಟೋ ಉದಾಹರಣೆಗಳಿವೆ. ದೊಡ್ಡ ಪ್ರಾಣಿಗಳು ಕೋಪಗೊಳ್ಳುವುದನ್ನು ಸಾಮಾನ್ಯವಾಗಿ ನೀವೆಲ್ಲರೂ ನೋಡಿರುತ್ತೇವೆ. ಆದರೆ ಶಾಂತರೂಪಿ ಆಮೆಗಳು ಕೋಪ ಮಾಡಿಕೊಳ್ಳುವುದನ್ನು ನೀವು ಎಂದಾದರೂ ನೋಡಿದ್ದೀರಾ, ಇಲ್ಲೊಂದು ಪುಟ್ಟ ಆಮೆ ಮಹಿಳೆಯ ಮೆಲೆ ಕೋಪಗೊಂಡ ಆಕೆಯ ಮೇಲೆ ದಾಳಿ ಮಾಡಲು ಯತ್ನಿಸಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆಮೆಗೂ ಇಷ್ಟು ಕೋಪವೇ ಎಂದು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.

ಇದೀಗ ವೈರಲ್ ಆಗಿರುವ ವೀಡಿಯೋದಲ್ಲಿ ಮಹಿಳೆಯೊಬ್ಬರು ಬಾಯಾರಿದ ಆಮೆಗೆ ಬಾಟಲಿಯಿಂದ ನೀರುಣಿಸುವುದನ್ನು ಕಾಣಬಹುದು. ಆಮೆಯು ತಂತಿಯ ಆವರಣದ ಹಿಂದೆ ಇತ್ತು. ಒಬ್ಬ ಮಹಿಳೆಯು ತಮ್ಮ ಬಾಟಲಿಯಲ್ಲಿದ್ದ ನೀರನ್ನು ಆ ಬಾಯಾರಿದ ಆಮೆಗೆ ನೀಡುತ್ತಾರೆ. ಮೊದದೊದಲು ಚೆನ್ನಾಗಿಯೇ ನೀರು ಕುಡಿಯುತ್ತಿತ್ತು. ಆದರೆ ಇದ್ದಕ್ಕಿದಂತೆ ಆಮೆಯು ಕೋಪ ಮಾಡಿಕೊಳ್ಳಲು ಪ್ರಾರಂಭಿಸಿತು. ತನ್ನ ಸಿಟ್ಟನ್ನು ತಡೆಯಲಾರದೆ ಮಹಿಳೆಯ ಮೇಲೆ ದಾಳಿ ಮಾಡಲು ಮುಂದಾಗುತ್ತದೆ.

ಇದನ್ನೂ ಓದಿ: ವೈರಲ್ ವಿಡಿಯೋ; ಈ ನಾಯಿಗೆ ನಮ್ಮಂತೆ ಕೈಗಳಿದ್ದಿದ್ದರೆ ಇಷ್ಟೊತ್ತಿಗೆ…

@strangestMedia ಎಂಬ ಟ್ವಿಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, 4 ಮಿಲಿಯನ್ ವೀಕ್ಷಣೆಗಳನ್ನು 39 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಮತ್ತು ಹಲವಾರು ಕಮೆಂಟ್ಸ್ ಗಳು ಹರಿದುಬಂದಿವೆ. ಒಬ್ಬ ಬಳಕೆದಾರರು ‘ಆಮೆಯಿಂದ ಕೃತಜ್ಞತೆಯ ಕೊರತೆ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಹೃದಯವನ್ನು ಬೆಚ್ಚಿ ಬೀಳಿಸುವಂತಿದೆ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:19 pm, Sat, 13 May 23