
ಸಾಮಾನ್ಯವಾಗಿ ಯಾರಾದರೂ ನಿಮ್ಮ ವಸ್ತುಗಳನ್ನು ಕದ್ದುಕೊಂಡು ಹೋದರೆ ಹಿಡಿ ಶಾಪ ಹಾಕುತ್ತೀರಿ. ಆದರೆ ಇಲ್ಲೊಬ್ಬಳಿಗೆ ಕಳ್ಳ(Thief)ನ ಮೇಲೆ ಲವ್ ಆಗಿದೆ. ಬ್ಯಾಗ್ ಕದಿಯಲು ಬಂದವನಿಗೆ ಹೃದಯವನ್ನೇ ಕೊಟ್ಟಿದ್ದಾಳೆ. ಪ್ರೀತಿ ಯಾವಾಗ, ಎಲ್ಲಿ, ಹೇಗೆ, ಯಾರ ಮೇಲೆ ಹುಟ್ಟುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುವ ಹಲವು ಕಥೆಗಳನ್ನು ನಾವು ನೋಡಿದ್ದೇವೆ, ಇದು ವಿಚಿತ್ರವೆನಿಸಬಹುದು ಆದರೂ ಸತ್ಯ. ಯುವತಿಯೊಬ್ಬಳು ಬ್ಯಾಗ್ ಕದಿಯಲು ಬಂದ ಕಳ್ಳನನ್ನೇ ಪ್ರೀತಿ ಮಾಡಿರುವ ಘಟನೆ ನಡೆದಿದೆ.
ವಿಡಿಯೋದಲ್ಲಿ ಆಕೆ ಫುಟ್ಪಾತ್ನಲ್ಲಿ ನಡೆದುಕೊಂಡು ಹೋಗುತ್ತಾಳೆ, ಆಗ ಕಳ್ಳನೊಬ್ಬ ಆಕೆಯ ಬ್ಯಾಗ್ ಅನ್ನು ಕದ್ದು ಓಡಬೇಕು ಎಂದುಕೊಳ್ಳುತ್ತಾನೆ. ಆದರೆ ಅವನಿಗೆ ಮನಸ್ಸಾಗದೆ ಆಕೆಗೆ ಬ್ಯಾಗ್ನ್ನು ಹಿಂದಿರುಗಿಸುತ್ತಾನೆ. ಆಗ ಇಬ್ಬರ ನಡುವೆ ಪ್ರೀತಿಯ ಮೊಳಕೆಯೊಡೆದು ಆಕೆ ಆತನನ್ನು ಚುಂಬಿಸುತ್ತಾಳೆ. ಈ ಪ್ರೇಮಕಥೆಯು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಬ್ಬ ಯುವಕ ಅವಳ ಹಿಂದೆ ವೇಗವಾಗಿ ಓಡಿ ಬಂದು ಬ್ಯಾಗ್ ಕಸಿದುಕೊಳ್ಳಲು ಪ್ರಯತ್ನಿಸುತ್ತಾನೆ. ಆ ಯುವತಿ ಅವನನ್ನು ಬಲವಾಗಿ ವಿರೋಧಿಸುತ್ತಾಳೆ, ಅವನನ್ನು ತಡೆಯಲು ತನ್ನ ಕೈಯನ್ನು ಸಹ ಬಳಸುತ್ತಾಳೆ. ಆದರೆ ಕಳ್ಳ ಕೊನೆಗೆ ಬ್ಯಾಗ್ ಕಸಿದುಕೊಂಡು ಓಡಲು ಪ್ರಾರಂಭಿಸುತ್ತಾನೆ.
ಮತ್ತಷ್ಟು ಓದಿ: ಪರಸ್ಪರ ಗುಪ್ತಾಂಗ ಹಿಡಿದುಕೊಳ್ಳಬೇಕು, ನಾಯಿ ರೀತಿ ನಡೀಬೇಕು, ತಿನ್ನಬೇಕು ಸಿಬ್ಬಂದಿಯನ್ನು ನಾಯಿಯಂತೆ ಕಾಣುವ ಆಫೀಸ್
ಆ ಯುವತಿಒಂದು ಹೆಜ್ಜೆ ಹಿಂದಕ್ಕೆ ಸರಿಯುತ್ತಾಳೆ, ಮತ್ತು ಅವಳ ಮುಖದಲ್ಲಿ ದುಃಖ ಮೂಡುತ್ತದೆ. ಅದನ್ನು ಕಂಡು ಕಳ್ಳನ ಮನಸ್ಸೇ ಕರಗುತ್ತದೆ. ಬ್ಯಾಗ್ನ್ನು ವಾಪಸ್ ಕೊಡುತ್ತಾನೆ.
Bag churane aya tha dil chori krlia💞 pic.twitter.com/CHbmUviCQG
— Kacha aam 🥭 (@kawaii_mariie) November 3, 2024
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ